ತುಮಕೂರು:ಅಮರ ಜೋತಿ ಸಾಂಸ್ಕೃತಿಕ ಟ್ರಸ್ಟ್, ದಿಬ್ಬೂರು, ತುಮಕೂರು ವಿಶ್ವವಿದ್ಯಾಲಯ ಸಾಂಸ್ಕೃತಿಕ ಚಟುವಟಿಕೆಗಳ ಘಟಕವತಿಯಿಂದ ಡಾ.ರಾಜಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಏ.೧೨ ರಂದು ಸಂಜೆ ೫ ಗಂಟೆಗೆ ತುಮಕೂರು ವಿವಿ ಆವರಣದಲ್ಲಿರುವ ಬಯಲು ರಂಗಮAದಿರದಲ್ಲಿ ಆಯೋಜಿಸಲಾಗಿದೆ.
ಕನ್ನಡ ಚಲನಚಿತ್ರರಂಗದ ಮೇರು ನಟ ಡಾ.ರಾಜಕುಮಾರ್ ಅವರ ಸ್ಮರಣೆ ಅಂಗವಾಗಿ ಅಮರಜೋತಿ ಸಾಂಸ್ಕೃತಿಕ ಟ್ರಸ್ಟ್, ದಿಬ್ಬೂರು ಇದರ ಮುಖ್ಯಸ್ಥರಾದ ದಿಬ್ಬೂರು ಮಂಜು ಮತ್ತು ಸಂಗಡಿಗರು ಡಾ.ರಾಜ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ.
ವರನಟ ಡಾ.ರಾಜಕುಮಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ,ಲಕ್ಷö್ಮಣದಾಸ್ ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತುಮಕೂರು ವಿವಿ ಹಣಕಾಸು ಅಧಿಕಾರಿ ಕೆ.ಸಿ.ನರಸಿಂಹಮೂರ್ತಿ, ಹಿರಿಯ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರುಶುರಾವi, ತುಮಕೂರು ವಿವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ,ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಡಾ.ಲಕ್ಷಿö್ಮರಂಗಯ್ಯ, ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕರಾದ ಡಾ.ಎಸ್.ದೇವರಾಜು, ತುಮಕೂರು ವಿವಿ ಉಪಗ್ರಂಥಪಾಲಕರಾದ ಡಾ.ಬಿ.ಕುಮಾರ್, ಜಿಲ್ಲಾ ಗ್ರಂಥಪಾಲಕರಾದ ಪಿ.ಎಲ್.ಬಸವರಾಜು, ನಗರ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ಹೆಚ್.ಡಿ.ಬಸವರಾಜು ಅವರುಗಳು ಭಾಗವಹಿಸಲಿದ್ದಾರೆ.
(Visited 1 times, 1 visits today)