ತುಮಕೂರು: ವೀರಶೈವ, ಲಿಂಗಾಯತರಲ್ಲಿ ಐಕ್ಯತೆ ಮತ್ತು ಅಭಿವೃದ್ದಿ ಕಾಣುವುದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಶ್ರೀಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ (ರಿ) ,ತುಮಕೂರು ಜಿಲ್ಲಾ ಘಟಕದ ವಸತಿ ವತಿಯಿಂದ ಆಯೋ ಜಿಸದಸ ಸೇವಾಧೀಕ್ಷೆ, ಸಾಧಕರಿಗೆ ಸನ್ಮಾನ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ವೀರಶೈವ, ಲಿಂಗಾಯತ ಧರ್ಮದ ಆಚರಣೆ ಇತ್ತಿಚಿನ ದಿನಗಳಲ್ಲಿ ಕಡಿಮೆಯಾಗುತ್ತದೆ. ಅಂಗೈಯಲ್ಲಿ ಲಿಂಗಧರಿಸಿ ನಿತ್ಯವೂ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗಿದೆ. ಇನ್ನೊಂದು ಧರ್ಮದ ಅನುಸರಣೆ ಮಾಡುವುದು ಸರಿಯಲ್ಲ. ಸತ್ಯ ನಾರಾಯಣ ಪೂಜೆಗೆ, ಲಿಂಗಾಯಿತ, ವೀರಶೈವರಿಗೂ ಸಂಬAಧವೇನು ಎಂದು ಪ್ರಶ್ನಿಸಿದ ಅವರು, ಪರಧರ್ಮ ಸಹಿಷ್ಣತೆ ಇರಲಿ, ಆದರೆ ನಮ್ಮ ಧರ್ಮದ ಆಚರಣೆ ಇರಲಿ, ಯಾರು ಲಿಂಗಧಾರಣೆ ಮಾಡಿಕೊಂಡಿಲ್ಲವೋ, ಅವರಿಗೆ ಸೇವಾದೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ.ನಮ್ಮಲ್ಲಿ ಒಗ್ಗುಟ್ಟು ಕೇವಲ ರಾಜಕೀಯ ಅಧಿಕಾರಕ್ಕಾಗಿ ಮಾತ್ರ ಆದರೆ ಸಾಲದು, ಎಲ್ಲಾ ರಂಗದಲ್ಲಿಯೂ ವೀರಶೈವ, ಲಿಂಗಾಯಿತರು ಮುಂದೆಬರುವAತೆ ಆಗಬೇಕು. ಈ ನಿಟ್ಟಿನಲ್ಲಿ ಶಂಕರ್ ಬಿದರಿಯವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆ.ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ಪದಾಧಿಕಾರಿಗಳ ನೇಮಕಕ್ಕೆ ಚುನಾವಣೆ ನಡೆಸುವ ಬದಲು ಅವಿರೋಧ ಆಯ್ಕೆಗೆ ಎಲ್ಲರೂ ಮುಂದಾಗಬೇಕು. ಚುನಾವಣೆ ಎಂದರೆ ರಾಜಕಾರಣ, ವಿಘಟನೆ ಸಮಾನ್ಯ. ಹಾಗಾಗಿ ಎಲ್ಲರೂ ಒಗ್ಗೂಡುವಂತಹ ವಾತಾವರಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ತುಮಕೂರು ಜಿಲ್ಲಾ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡಿ,ದಿಕ್ಸೂಚಿ ಭಾಷಣ ಮಾಡಿದ ಮಹಾಸಭಾದ ಕರ್ನಾಟಕ ರಾಜ್ಯಘಟಕದ ಅಧ್ಯಕ್ಷ ಶಂಕರಬಿದರಿ, ಇಂದು ಸೇವಾ ದೀಕ್ಷೆ ಸ್ವೀಕರಿಸಿರುವ ಎಲ್ಲಾ ಪದಾಧಿಕಾರಿಗಳು ಮುಂದಿನ ಐದು ವರ್ಷಗಳ ಕಾಲ ವೀರಶೈವ,ಲಿಂಗಾಯಿತ ಮಹಾಸಭಾವನ್ನು ಮುನ್ನೆಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ರೇಣುಕಾಚಾರ್ಯರು ಸೇರಿದಂತೆ ಬಸವಾದಿ ಶರಣರ ಆಶೀರ್ವಾದ ಇವರ ಮೇಲಿದೆ.ಇವರ ಜೊತೆ ಕೈಜೋಡಿಸುವ ಮೂಲಕ ಸಮಾಜದ ಅರ್ಥಿಕ, ಸಾಮಾಜಿಕ,ಶೈಕ್ಷಣಿಕ ಉನ್ನತ್ತಿಗೆ ಸಹಕಾರ ನೀಡಬೇಕಿದೆ ಎಂದರು.
ಭಾರತದಲ್ಲಿ ವೀರಶೈವ,ಲಿಂಗಾಯಿತರು ಬಹುಸಂಖ್ಯೆಯ ಲ್ಲಿದ್ದಾರೆ.ಆದರೆ ಒಗ್ಗಟ್ಟಿನ ಕೊರತೆಯಿಂದ ಎಲ್ಲಾ ವರ್ಗಗಳಲ್ಲಿಯೂ ಹಿಂದುಳಿದಿದ್ದೇವೆ. ಭಾರತದ ಒಟ್ಟಾರೆ ಜನಸಂಖ್ಯೆಯ ಶೇ೩ ರಷ್ಟಿರುವ ಬ್ರಾಹ್ಮಣರೇ ಇಡೀ ದೇಶವನ್ನು ಲೀಡ್ ಮಾಡುತ್ತಿದ್ದಾರೆ. ಎಲ್ಲಾ ರಂಗದಲ್ಲಿಯೂ ಬ್ರಾಹ್ಮಣ ಸಮುದಾಯ ರಾಜಕೀಯವಾಗಿ, ಅರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಿಂಹಪಾಲು ಪಡೆದಿದೆ.ಕೇಂದ್ರದ ಮಂತ್ರಿ ಮಂಡಲದಲ್ಲಿ ೧೮ ಜನ ಕ್ಯಾಬಿನೆಟ್ ದರ್ಜೆ ಸಚಿವರಿದ್ದಾರೆ.ನಮ್ಮವರಿಗೆ ಇದುವರೆಗೂ ಕ್ಯಾಬಿನೆಟ್ ಸ್ಥಾನಮಾನ ಸಿಕ್ಕಿಲ್ಲ. ಐಎಎಸ್, ಐಪಿಎಸ್, ರಾಜ್ಯಪಾಲರ ಹುದ್ದೆಗಳಲ್ಲಿ ಆ ಸಮುದಾಯವೇ ಹೆಚ್ಚಿದೆ.ಇದಕ್ಕೆ ಸಂಘಟನೆ ಯ ಕೊರತೆಯೇ ಕಾರಣ.ವೀರಶೈವ,ಲಿಂಗಾಯಿತ ಎಂಬ ನಮ್ಮಲ್ಲಿನ ಒಡಕು ಹೋಗಬೇಕು.ಲಿಂಗೈಕ್ಯ ಡಾ.ಶ್ರೀಶಿವ ಕುಮಾರಸ್ವಾಮೀಜಿಗಳು ಹೇಳಿದಂತೆ ವೀರಶೈವ, ಲಿಂಗಾ ಯಿತ ಬೇರೆ ಬೇರೆಯಲ್ಲ. ಎರಡು ಒಂದೇ.ನಮ್ಮ ನಡುವಿನ ವೆತ್ಯಾಸವೆಂದರೆ ವೀರಶೈವರೆಂದರೆ ಸಂಸ್ಕೃತ, ಲಿಂಗಾಯಿ ತರೆಂದರೆ ಕನ್ನಡ.ಜಾಗತಿಕ ಲಿಂಗಾಯಿತ ಮಹಾಸಭಾದವರು ನಮ್ಮನ್ನು ಏನು ಟೀಕಿಸಲು ಅದಕ್ಕೆ ತೆಲೆ ಕೆಡಿಸಿಕೊಳ್ಳುವುದು ಬೇಡ ಎಂದು ಶಂಕರ ಬಿದರಿ ಕಿವಿ ಮಾತು ಹೇಳಿದರು.
ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವೀರಶೈವ, ಲಿಂಗಾಯಿತ ಸಮುದಾಯಗಳು ತಮ್ಮೊಳ್ಳಗಿನ ಒಳಜಗಳ, ದ್ವೇಷ ಅಸೂಯೆಗಳನ್ನು ಬಿಟ್ಟು ಒಗ್ಗೂ ಡಬೇ ಕಾಗಿದೆ. ಇದಕ್ಕಾಗಿಯೇ ಬಸವಜಯಂತಿ ದಿನದೊಂ ದಿಗೆÁಶ್ರೀರೇಣುಕಾಚಾರ್ಯರು ಹಾಗೂ ಅನುಭವ ಮಂಟಪದ ಅಮರಗಣಂಗಳನ್ನು ಒಳಗೊಂಡ ಎಲ್ಲಾ ಶಿವಶರಣರ ಜಯಂತಿಗಳನ್ನು ಒಂದೇ ದಿನ ಆಚರಿಸಲು ಮಹಾಸಭಾ ಮುಂದಾಗಿದೆ.ಇದಕ್ಕೆ ಎಲ್ಲರೂ ಒಪ್ಪಿಕೊಳ್ಳಬೇಕು. ಕಾಯಕದಲ್ಲಿ ತೊಡಗಿದ್ದ ಎಲ್ಲಾ ಸಮುದಾಯಗಳ ಹಿರಿಯರಾದ ಅಲ್ಲಮಪ್ರಭು, ಮಾದರ ಚನ್ನಯ್ಯ, ದೊಹಾರ ಕಕ್ಕಯ್ಯ,ಅಂಬಿಗರ ಚೌಡಯ್ಯ, ಜೇಡರ ದಾಸಿಮಯ್ಯ,ಅಕ್ಕಮಹಾದೇವಿ, ಸಿದ್ದರಾಮೇಶ್ವರ ಜಯಂತಿಗಳನ್ನು ಬಸವ ಜಯಂತಿ ದಿನದಂದೆ ಆಚರಿಸುವುದು ಹೆಚ್ಚು ಅರ್ಥಪೂರ್ಣ ಮತ್ತು ವೀರಶೈವ ಲಿಂಗಾಯಿತರಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯ.ಬಸವಣ್ಣನವರು ವೀರಶೈವ, ಲಿಂಗಾಯಿತರ ಸ್ವತ್ತಲ್ಲ. ಇಡೀ ವಿಶ್ವದ ೮೦೦ ಕೋಟಿ ಜನಸಂಖ್ಯೆಯ ಸ್ವತ್ತು ಎಂದು ಶಂಕರ ಬಿದರೆ ನುಡಿದರು.
ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಹನ್ನೆರಡೆನೇ ಶತಮಾನದ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಯಾವುದಾದರೂ ಸಮುದಾಯಗಳಿದ್ದರೆ ಅದು ವೀರಶೈವ ಮತ್ತು ಲಿಂಗಾಯಿತ ಮಾತ್ರ. ನಮ್ಮಲ್ಲಿಯೇ ಸಣ್ಣ ಸಣ್ಣ ಸಂಘಟನೆಗಳು ಹುಟ್ಟಿಕೊಂಡು ಶಕ್ತಿ ಕುಂದಿದೆ.ಹಾಗಾಗಿ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ ಹೆಸರಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು.ರಾಜಕೀಯ ಕ್ಷೇತ್ರವನ್ನು ಹೊರತು ಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಒಗ್ಗಟ್ಟು ಅನಿವಾರ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ವೀರಶೈವ,ಲಿಂಗಾಯಿತರು ಸುಮಾರು ೭-೮ಲಕ್ಷ ಜನಸಂಖ್ಯೆ ಇದೆ. ಆದರೆ ಮಹಾಸಭಾದಲ್ಲಿ ಸದಸ್ಯರಾಗಿರುವುದು ಕೇವಲ ೨ ಸಾವಿರ ಜನ ಮಾತ್ರ. ಮಹಾಸಭಾದ ತೀರ್ಮಾನದಂತೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಪ್ರತಿ ಮನೆಯಲ್ಲಿಯೂ ಓರ್ವ ಸದಸ್ಯನನ್ನು ನೊಂದಾಯಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ಕೆಲಸವನ್ನು ನಾನು ಮತ್ತು ನನ್ನ ತಂಡ ಶಿರಾಸಹ ವಹಿಸಿ ಪಾಲಿಸುತ್ತೇವೆ.ಸಮುದಾಯದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಒಗ್ಗಟ್ಟು ಮುಖ್ಯವಾಗಿದೆ ಎಂದರು.
ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಪ್ರಾಸ್ತಾವಿಕವಾಗಿ ಮಾತನಾಡಿ,ರಾಜ್ಯದಲ್ಲಿ ಸುಮಾರು ೫೫ ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವೀರಶೈವ, ಲಿಂಗಾಯಿತರನ್ನು ರಾಜಕೀಯವಾಗಿ ನಿರ್ಲಕ್ಷಿಸಲಾಗುತ್ತಿದೆ.ಬೊಮ್ಮಾಯಿ ಅವರನ್ನು ಹೊರತು ಪಡಿಸಿದರೆ ಉಳಿದವರಿಗೆ ಕ್ಯಾಬಿನೇಟ್ ದರ್ಜೆ ಸ್ಥಾನಮಾನ ಸಿಕ್ಕಿಲ್ಲ.ಇದಕ್ಕೆ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಕಾರಣ.ತೆಲಂಗಾಣ, ಆಂದ್ರ,ಮಹಾರಾಷ್ಟç,ಕೇರಳ, ಕರ್ನಾಟಕ ಈ ಭಾಗದಲ್ಲಿ ನಾವು ಹೆಚ್ಚಿನ ಜನಸಂಖ್ಯೆ ಇದ್ದರೂ ನಿರೀಕ್ಷಿತ ಮಟ್ಟದ ರಾಜಕೀಯ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ, ಡಾ .ಶಿವರುದ್ರಶಿವಾಚಾರ್ಯ ಸ್ವಾಮೀಜಿ, ಬೆಟ್ಟದಳ್ಳಿ ಶ್ರೀಚಂದ್ರಶೇಖರ ಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು. ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ರಾಷ್ಟಿçÃಯ ಉಪಾಧ್ಯಕ್ಷರಾದ ಬಿ.ಎಸ್.ಸಚ್ಚಿದಾನಂದಮೂರ್ತಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯರಾದ ಎಸ್.ಕೆ.ರಾಜಶೇಖರ್, ಮಹಿಳಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮುಕ್ತಾಂಭ, ಜಿಲ್ಲಾ ಪದಾಧಿಕಾರಿಗಳಾದ ಡಾ.ಎಸ್.ಪರಮೇಶ, ಎಸ್.ಡಿ.ದಿಲೀಪ್‌ಕುಮಾರ್, ಎಲ್.ಪಿ.ರವಿಶಂರ್, ಶ್ರೀಮತಿ ಗೀತಾ ರುದ್ರೇಶ್, ಶಶಿ ಹುಲಿಕುಂಟೆ ಮಠ್, ವಿಶ್ವನಾಥ್ ಅಪ್ಪಾಜಪ್ಪ, ಆರ್.ಬಿ.ಜಯಣ್ಣ, ಟಿ.ಎಸ್.ರುದ್ರಪ್ರಸಾದ್, ಟಿ.ಎಂ.ವಿಜಯಕುಮಾರ್, ಟಿ.ಎಂ.ವಿಜಯಕುಮಾರ್ ತಳವಾರನಹಳ್ಳಿ, ಶ್ರೀಮತಿ ಬಿಂದು, ಯುವ ಘಟಕದ ಅಧ್ಯಕ್ಷ ಡಾ.ಕೆ.ಎಲ್.ದರ್ಶನ್, ಮಹಿಳಾ ಘಟಕದ ಅಧ್ಯಕ್ಷೆ ಮಮತ ದಿವಾಕರ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜಕ್ಕಾಗಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು.