ಇಂದು ಸಿದ್ಧಗಂಗಾ ಮ ಠಕ್ಕೆ ಭೇಟಿ ನೀಡಿದ್ದ ವೇಳೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಮಠದ ಕಿರಿಯ ಸ್ವಾಮೀಜಿ ಅವರೊಂದಿಗೆ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದರು.
      ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿಯವರ ಎಲ್ಲಾ ಪ್ಯಾರಾ ಮೀಟರ್ಸ್ ನಾರ್ಮಲ್ ಆಗಿದೆ. ಬಿಪಿ, ಪಲ್ಸ್​ ರೇಟ್, ಆಕ್ಸಿಜನ್ ಸ್ಯಾಚುರೇಷನ್ ಕೂಡ ಸಹಜ ಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.

      ಯಾವಾಗ ಬಂದ್ರಿ,  ಚೆನ್ನಾಗಿದ್ದೀರಾ ಪ್ರಸಾದ ಮಾಡಿಕೊಂಡು ಹೋಗಿ. ಇನ್ನೂ ಸ್ವಲ್ಪ ಹೊತ್ತು ಇದ್ದು ಹೋಗಿ  ಎಂದು ಶಿವಕುಮಾರ ಸ್ವಾಮೀಜಿ ತಮ್ಮೊಂದಿಗೆ ಮಾತನಾಡಿದ್ದಾರೆ. ತಾವು ಹೇಗಿದ್ದೀರಿ ಸ್ವಾಮೀಜಿ ಅಂತ ಕೇಳಿದ್ದಕ್ಕೆ ‘ನಾನು ಚೆನ್ನಾಗಿದ್ದೇನೆ’ ಎಂದು ಕೂಡ ಮಾತನಾಡಿದ್ದಾರೆ ಎಂದು ನಿರ್ಮಲಾನಂದ ಸ್ವಾಮೀಜಿ ಮಾಧ್ಯಮಕ್ಕೆ ತಿಳಿಸಿದರು.

      ಇದೇ ವೇಳೆ ಶಾಸಕ ವಿ ಸೋಮಣ್ಣ ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್ ಮತ್ತು ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಜರಿದ್ದರು.

(Visited 48 times, 1 visits today)
FacebookTwitterInstagramFacebook MessengerEmailSMSTelegramWhatsapp