ತುರುವೇಕೆರೆ: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ರ ಥೋತ್ಸವವು ಭಕ್ತರ ಸಮ್ಮುಖದಲ್ಲಿ ಗುರುವಾರ ಬಹಳ ವಿಜೃಂಬಣೆಯಿAದ ನೆರವೇರಿತು.
ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಅಂಗವಾಗಿ ಚನ್ನಕೇಶವಸ್ವಾಮಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂ ತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕ ರ್ಯಗಳು ನೆರವೇರಿದವು. ಭಕ್ತಾದಿಗಳು ದೇವಾ ಲಯಕ್ಕೆ ತೆರಳಿ ವಿಶೇ಼ಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಚನ್ನಕೇಶವಸ್ವಾಮಿಯನ್ನು ಚಿಕ್ಕ ರಥದಲ್ಲಿ ಕುಳ್ಳರಿಸಿ ನೆರದಿದ್ದ ಆಪಾರ ಭಕ್ತರು ಚನ್ನಕೇಶವ ನಾಮ ಸ್ಮರಣೆಯೊಂದಿಗೆ ರ ಥವನ್ನು ಭಕ್ತರು ದೇವಾಲಯದ ಮುಂಬಾಗ ಬೀದಿಯಲ್ಲಿ ಎಳೆಯಲಾಯಿತು. ಭಕ್ತರು ಹಾಗೂ ಚನ್ನಕೇಶವಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಬಂದAತ ಭಕ್ತಾಧಿಗಳಿಗೆ ಪಾನಕ, ಪಲಹಾರ, ಮಜ್ಜಿಗೆ, ಹಾಗೂ ಪಾಯಸ, ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ರಥೋತ್ಸವದಲ್ಲಿ ಟ್ರಸ್ಟ್ ಅದ್ಯಕ್ಷರು, ಸದಸ್ಯರು ಸೇರಿದಂತೆ, ವಿವಿದ ಸಂಘ ಸಂಸ್ಥೆಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
(Visited 1 times, 1 visits today)