ತುಮಕೂರು: ದಿ. ೧೧-೦೪-೨೦೨೫ ಮದ್ಯಾಹ್ನ ೦೧-೦೦ ಗಂಟೆ ವೇಳೆಯಲ್ಲಿ ಪಿಯಾದಿ ಶ್ರೀಮತಿ ರಾಜಲಕ್ಷ್ಮಿ, ಕೊಂ ಜಯಸಿಂಹ ಮೂರ್ತಿ ೭೫ವರ್ಷ, ಹೊಸಕೆರೆ, ಹಾಗಲವಾಡಿ ಹೋಬಳಿ ಗುಬ್ಬಿ ತಾ// ರವರಿಗೆ ಆರೋಪಿ ಮಂಜುನಾಥ @ ಮನೋಜ್ @ ಮಂಜ ಎಂಬುವವನು ತನ್ನ ಬೈಕಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ಶಿವನೇಹಳ್ಳಿ ಕೆರೆ ಏರಿಯ ಸಮೀಪದಲ್ಲಿ ಪಿರ್ಯಾದಿಗೆ ಹೆದರಿಸಿ ಅವರ ಕೊರಳಿನಲ್ಲಿದ್ದ ಚಿನ್ನದ ೪ ಸರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ಪಿರ್ಯಾದಿ ರಾಜಲಕ್ಷ್ಮೀ ರವರು ಪ್ರತಿರೋದ ಮಾಡಿದ್ದರಿಂದ ತುಂಡಾದ ಒಟ್ಟು ೫೧ ಗ್ರಾಂ ತೂಕದ ೪ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಚೇಳೂರು ಪೊಲೀಸ್ ಠಾಣೆಯ ಮೊಕದ್ದಮೆ ನಂಬರ್ ೭೦/೨೦೨೫ ಕಲಂ ೩೦೯(೪) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತಾರೆ.
ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಸಿ ಗೋಪಾಲ್ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿದಲ್ಲಿ, ಶಿರಾ ಉಪವಿಭಾಗದ ಉಪಾಧೀಕ್ಷಕರಾದ ಬಿ.ಕೆ ಶೇಖರ್ ಮಾರ್ಗಸೂಚನೆ ಮೇರೆಗೆ, ಗುಬ್ಬಿ ವೃತ್ತದ ಸಿಪಿಐ ರಾಘವೇಂದ್ರ ಟಿ.ಆರ್. ರವರು ಚೇಳೂರು ಪೊಲೀಸ್ ಠಾಣೆಯ ಪಿಎಸ್‌ಐ-೧ ನಾಗರಾಜ ಜೆ.ಆರ್. ಹಾಗೂ ಸಿಬ್ಬಂದಿಗಳಾದ ನಾಗಭೂಷಣ್, ರವಿಕುಮಾರ್, ಪದ್ಮನಾಭ. ಮಧುಸೂಧನ್, ಚಾಲಕರಾದ ದೇವರಾಜಯ್ಯ.ಟಿ ರವರು ಪ್ರಕರಣದ ಆರೋಪಿಯಾದ ಮನೋಜ್ @ ಮಂಜುನಾಥ, ಬಿನ್ ಲೇಟ್ ಗಂಗಯ್ಯ, ೩೧ ವರ್ಷ, ವಾಹನ ಚಾಲಕ ವೃತ್ತಿ, ಮಾದೇನಹಳ್ಳಿ, ಗುಬ್ಬಿ ತಾಲ್ಲೋಕು ರವರನ್ನು ಪ್ರಕರಣ ನಡೆದ ೪೮ ಗಂಟೆಯ ಒಳಗೆ ಆರೋಪಿಯನ್ನು ದಸ್ತಗಿರಿ ಮಾಡಿ ೪ಲಕ್ಷ ೨೫ ಸಾವಿರ ಮೌಲ್ಯದ ಒಟ್ಟು ೫೧ ಗ್ರಾಂ ತೂಕದ ೪ ಚಿನ್ನದ ಸರಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡದ ಕಾರ್ಯವನ್ನು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ. ವಿ ಆಶೋಕ ರವರು ಶ್ಲಾಘಿಸಿರುತ್ತಾರೆ.
(Visited 1 times, 1 visits today)