ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಉದಯಿಸದಿದ್ದರೆ, ಈ ದೇಶದ ಶೋಷಿತರ ಬದುಕು ಮತ್ತಷ್ಟು ಹೀನಾಯವಾಗುತ್ತಿತ್ತು. ಅಂಬೇಡ್ಕರ್ ಶ್ರಷ್ಠವಾದ ಸಂವಿಧಾನ ರಚನೆ ಮಾಡಿದರೆ, ಬಾಬೂ ಜಗಜೀವನರಾಂ ಅವರು ತಮ್ಮ ಅಧಿಕಾರವಧಿಯಲ್ಲಿ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದರು ಎಂದು ಜಿಲ್ಲಾ ಜೆಡಿಎಸ್ ಎಸ್.ಸಿ.ಘಟಕದ ಅಧ್ಯಕ್ಷ ಎಎಸ್.ಡಿ.ಕೃಷ್ಣಪ್ಪ ಹೇಳಿದರು.
ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀ ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಸಾಮಾಜಿಕ ಬದಲಾವಣೆ, ಸುಧಾರಣೆಗೆ ಇವರಿಬ್ಬರ ಕೊಡುಗೆ ಅಪಾರ. ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳುವುದೇ ನಾವು ಈ ಮಹನೀಯರಿಗೆ ಕೊಡುವ ಗೌರವ ಎಂದರು.
ಆಗಿನ ಸಮಾಜಿಕ ಪರಿಸ್ಥಿತಿಯಲ್ಲಿ ಜಾತಿಭೇದ, ಶೋಷಣೆ, ಸಾಮಾಜಿಕ ಅಸಮತೋಲನ ತಾಂಡವಾಡುತ್ತಿತ್ತು. ಇಂತಹ ಅಸ್ತವ್ಯಸ್ಥ ಸಮಾಜವನ್ನು ತಮ್ಮ ಸಂವಿಧಾನದ ಮೂಲಕ ಸರಿಪ ಡಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲಬೇಕು. ದೇಶದ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು, ಸ್ವಾತಂತ್ರö್ಯವನ್ನು ತಮ್ಮ ಸಂವಿಧಾನದಲ್ಲಿ ಕಲ್ಪಿಸಿಕೊಟ್ಟರು. ದೇಶದಲ್ಲಿ ಭೀಕರ ಬರಗಾಲ ಎದುರಾದಾಗ ಆಗಿನ ಕೃಷಿ ಸಚಿವರಾಗಿದ್ದ ಬಾಬೂ ಜಗಜೀವನರಾಂ ಅವರು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಆಹಾರ ಉತ್ಪಾದನೆ ಹೆಚ್ಚು ಮಾಡಿ ಹಸಿವಿನ ಬೇಗೆ ನಿವಾರಣೆ ಮಾಡಲು ಕಾರಣರಾಗಿ ಹಸಿರು ಕ್ರಾಂತಿಯ ಹರಿಕಾರರಾದರು ಎಂದು ತಿಳಿಸಿದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತ ನಾಡಿ, ಎಲ್ಲರೂ ಸಮಾನರಾಗಿ, ಸ್ವಾಭಿಮಾನದಿಂದ ಬಾಳಲು ಅಂಬೇಡ್ಕರ್ ಅವರ ಸಂವಿಧಾನ ಅವಕಾಶ ನೀಡಿದೆ. ಎಲ್ಲರೂ ಸಂವಿಧಾನವನ್ನು ಓದಿ ತಿಳಿದು ಅದರ ಆಶಯಗಳನ್ನು ಪಾಲನೆ ಮಾಡಬೇಕು. ಸಂವಿಧಾನ ನಮ್ಮ ಪವಿತ್ರ ಗ್ರಂಥ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಎಸ್.ಟಿ. ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ ಮಾತನಾಡಿ, ಈ ದೇಶದಲ್ಲಿ ಎಲ್ಲರೂ ಸಮಾನರಾಗಿ, ಭಾವೈಕ್ಯತೆಯಿಂದ ಬಾಳಲು ಅಂಬೇಡ್ಕರ್ ಅವರ ಸಂವಿಧಾನ ನಮಗೆ ದಾರಿದೀಪವಾಗಿದೆ. ಅದರ್ಶ ಬದುಕಿಗೆ ಕನ್ನಡಿಯಾಗಿದೆ. ಅಂಬೇಡ್ಕರ್ ಅವರ ತತ್ವ, ಆದರ್ಶಗಳನ್ನು ಎಲ್ಲರೂ ಅಳವಡಿಸಿ ಕೊಂಡು ಬಾಳಿದರೆ ನಮ್ಮದು ಮಾದರಿ ದೇಶವಾಗುತ್ತದೆ ಎಂದರು.
ಮುಖAಡರಾದ ಯೋಗಾನಂದಕುಮಾರ್, ತಾಹೇರಾ ಕುಲ್ಸಂ, ಮುನಿರಾಜು ಮೊದಲಾದವರು ಮಾತನಾಡಿದರು.
ಎಸ್.ಸಿ.ಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಗೋವಿಂದರಾಜು, ನಗರ ಅಧ್ಯಕ್ಷ ಭೈರೇಶ್, ಜಿಲ್ಲಾ ಸೇವಾದಳ ಅಧ್ಯಕ್ಷ ಕೆಂಪರಾಜು, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಧರಣೇಂದ್ರಕುಮಾರ್, ಲಕ್ಷಿö್ಮÃನರಸಿಂಹರಾಜು, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಶಿರಾ ತಾಲ್ಲೂಕು ಯುವ ಘಟಕ ಅಧ್ಯಕ್ಷ ಪುನಿತ್‌ಗೌಡ, ಮಧುಗಿರಿ ತಾಲ್ಲೂಕು ಅಧ್ಯಕ್ಷ ದೊಡ್ಡೇರಿ ಬಸವರಾಜು, ಮುಖಂಡರಾದ ವಿಶ್ವೇಶ್ವರಯ್ಯ, ಲೀಲಾವತಿ, ಮಧು, ಜಯಲಕ್ಷö್ಮಮ್ಮ, ಯಶೋಧ, ನಾಗರಾಜು, ಹನುಮಂತರಾಜು ಮೊದಲಾದವರು ಭಾಗವಹಿಸಿದ್ದರು.