ತುಮಕೂರು: ರಾಜ್ಯ ಸರ್ಕಾರ ಅಕ್ಷರಶಃ ಲೂಟಿಗೆ ಇಳಿದಿದೆ. ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹಿಸುತ್ತಿದೆ. ಅನೇಕ ಆರ್‌ಟಿಒ ಚೆಕ್ ಪೋಸ್ಟ್ಗಳು ಕೋಟ್ಯಂತರ ಹಣವನ್ನು ಸರ್ಕಾರದ ಪರವಾಗಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಲಾರಿಗಳ ಸಂಚಾರದಿAದ ಶೇ ೩೫ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಕೂಡಾ ಲಾರಿ ಮಾಲೀಕರ ಮತ್ತು ಚಾಲಕರ ಹಿತ ಕಾಪಾಡಲು ಮುಂದೆ ಬರುತ್ತಿಲ್ಲ ಎಂದು ಲಾರಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಜಾಬಿಲ್ ಪಾಷಾ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿ.ಆರ್ ಷಣ್ಮುಗಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ, ಜಿಲ್ಲಾ ಟ್ರಕ್ ಲಾರಿ ಮಾಲೀಕರ ಸಂಘದಿAದ ಬೆಂಬಲ ವ್ಯಕತ್ತಪಡಿಸಿ ಅವರು ಮಾತನಾಡಿದರು. ರಾಜ್ಯ ರಸ್ತೆಗಳಿಗೆ ಬಣ್ಣ ಬಳಿದು ಟೋಲ್ ಸಂಗ್ರಹವನ್ನು ಸ್ಥಳೀಯ ಪುಢಾರಿಗಳಿಗೆ ವಹಿಸಿದ್ದಾರೆ. ೧೮ ರಸ್ತೆಗಳಿಗೆ ದರ ವಿಧಿಸಿದ್ದಾರೆ. ಅಲ್ಲದೇ ಕಮರ್ಶಿಯಲ್ ಟ್ಯಾಕ್ಸ್ ಚೆಕ್ ಪೋಸ್ಟ್ಗಳು ೧೦೨೮ ಕಡೆ ಇವೆ. ಗಡಿ ಠಾಣೆಗಳು ಲಾರಿ ಮಾಲೀಕರ ರಕ್ತ ಹೀರುತ್ತಿವೆ. ಈ ಅನ್ಯಾಯ, ದೌರ್ಜನ್ಯ ತಡೆಯಬೇಕಾದ ಸರ್ಕಾರ ಮತ್ತೆ ತೈಲ ಬೆಲೆ ಏರಿಸುವ ಮೂಲಕ ಬರೆ ಎಳೆದಿದೆ ಎಂದು ದೂರಿದರು.
ಲಾರಿ ಮಾಲೀಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಐದು ರೂ. ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಇಂದಿನ ಪೈಪೋಟಿಯಲ್ಲಿ ನಾವು ತಕ್ಷಣವೇ ಬಾಡಿಗೆ ರೂಪದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರದ ನೀತಿಗಳಿಂದ ಸುಮಾರು ಆರು ಲಕ್ಷ ಲಾರಿಗಳ ಮಾಲೀಕರು ಮತ್ತು ಅವರ ಅವಲಂಬಿತರು ಬೀದಿಗೆ ಬೀಳುವುದು ಖಚಿತವಾಗಿದೆ ಎಂದರು. ರಾಜ್ಯ ಹೆದ್ದಾರಿಗಳಲ್ಲಿ ಕೆಲವು ಕಡೆ ಇರುವ ರಸ್ತೆಗೆ ಬಣ್ಣ ಹೊಡೆದು ಟೋಲ್ ಕಟ್ಟಿಸಿಕೊಳ್ಳುತ್ತಿದ್ದಾರೆ. ನಾವು ಕಟ್ಟುವ ರೋಡ್ ಟ್ಯಾಕ್ಸ್ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದರು.
ಕರ್ನಾಟಕದ ಸಾರಿಗೆ ಇಲಾಖೆಯಿಂದ ೯ ವರ್ಷದಿಂದ ೧೩ ವರ್ಷ ತುಂಬಿದ ವಾಹನಗಳ ಎಫ್‌ಸಿಗೆ ೧೫ ಸಾವಿರ ಶುಲ್ಕ ವಿಧಿಸುತ್ತಿರುವ ಪರಿಣಾಮ ಸಾಕಷ್ಟು ತೊಂದರೆಯಾಗುತ್ತಿದೆ. ಈ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಸರಕಾರಕ್ಕೆ ಏಪ್ರಿಲ್ ೧೪ರ ಮಧ್ಯರಾತ್ರಿವರೆಗೆ ಸಮಯ ನೀಡುತ್ತಿದ್ದು, ಸರಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಲಾರೀ ಮಾಲೀಕರಿಂದ ಅಹೋರಾತ್ರಿ ಧರಣಿ ನಡೆಸಲಾಗುವ್ಯದು ಎಂದು ಎಚ್ಚರಿಸಿದರು.
ಸೆಸ್ ಸಂಗ್ರಹಿಸುವ ಮೂಲಕ ಲಾರಿ ಚಾಲಕರ ಕಲ್ಯಾಣಕ್ಕಾಗಿ ರೂ.೩೦೦ ಕೋಟಿ ಸಂಗ್ರಹ ಮಾಡಲಾಗಿದೆ. ಅವರಿಗೆ ನಿವೃತ್ತಿ ವೇತನ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಈ ನಿಟ್ಟಿನಲ್ಲಿ ನಿರಂತರ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು. ಲಾರಿ ಮಾಲೀಕರ ಸಮಸ್ಯೆಗಳು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಜೆಟ್ ಪೂರ್ವ ಸಭೆಯಲ್ಲಿಯೇ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳಂತೂ ಯಾರ ಅಂಕೆಗೂ ಸಿಗದೇ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟç ಮಾದರಿ ಅಗತ್ಯ: ಲಾರಿ ಮಾಲೀಕರ ಹಿತ ಕಾಯಲು ಮಹಾರಾಷ್ಟçದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎಲ್ಲ ಗಡಿ ಠಾಣೆಗಳು, ಸುಂಕ ವಸೂಲಿ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ. ಅಲ್ಲದೇ ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ರದ್ದು ಮಾಡಿದ್ದಾರೆ. ಅದೇ ಮಾದರಿಯನ್ನು ರಾಜ್ಯದಲ್ಲಿ ತರಬೇಕು ಎಂದು ಒತ್ತಾಯಿಸಿದರು.
ಮುಷ್ಕರದಲ್ಲಿ ಕಾರ್ಯದರ್ಶಿ ಪರ್ವೀಜ್, ನಿರ್ದೇಶಕರುಗಳಾದ ಚಂದ್ರಶೇಕರ್, ರಘು, ಮೊಹಮ್ಮದ್ ಫೈರಾಜ್, ಕಲ್ಲೇಶ್, ಅಫ್ಜಲ್(S.ಇ.S), ಜಬೀರ್(ಊ.P), ಜಫರುಲ್ಲ ಖಾನ್, ವಹೀದ್, ನದೀಮ್(S.ಃ.S), ಹಿಬ್ಜುರ್(S.ಒ), ಮೊಹಮ್ಮದ್ ರಫೀಕ್, ಶಬೀರ್, ನವಾಜ್ ರೆಹಮಾನ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.