ತುಮಕೂರು: ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಅಂಬೇಡ್ಕರ್ ಯುವ ಸೇನೆ(ರಿ), ಸಂಘಟನೆಯ ಪದಾಧಿಕಾರಿಗಳ ಸಭೆಯನ್ನು ಸಂಘದ ಅಧ್ಯಕ್ಷರಾದ ಜಿ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಅಯೋಜಿಸಲಾಗಿತ್ತು.
ಜಿಲ್ಲಾಧ್ಯಕ್ಷ ಜಿ.ಗಣೇಶ್ ಸಭೆಯನ್ನು ಉದ್ದೇ ಶಿಸಿ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಬಾಬಾ ಸಾಹೇಬ್ ಅಂಬೇ ಡ್ಕರ್ ಅವರ ಮೂರು ಮುಖ್ಯ ಗುರಿಗಳನ್ನು ಮುಂದಿಟ್ಟುಕೊAಡು ಹತ್ತಾರು ವರ್ಷಗಳಿಂದ ಅಂಬೇಡ್ಕರ್‌ಯುವ ಸೇನೆ ದಲಿತರು, ದಮನಿತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಸಂವಿಧಾನದ ಮೂಲ ಆಶಯದಂತೆ ಎಲ್ಲಾ ವರ್ಗದ ಜನರಿಗೆ ಸ್ವಾತಂತ್ರ, ಸಮಾನತೆ, ಸಮಾನ ಅವಕಾಶಗಳು ದೊರೆಯುಬೇಕು ಎಂಬುದು ಸಂಘಟನೆಯ ಮೂಲ ಮಂತ್ರವಾ ಗಿದೆ. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲೆಗೆ ಸೇರಿಸುವ, ಅವರಿಗೆ ಶೈಕ್ಷಣಿಕವಾಗಿ ಸರಕಾರದ ಸವಲತ್ತುಗಳು ದೊರೆಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿಎಲ್ಲರೀತಿಯ ಸಹಕಾರವನ್ನು ನೀಡ ಲು ಸಿದ್ದರಿರುವುದಾಗಿ ತಿಳಿಸಿದರು.
ಸಮಾಜದಲ್ಲಿ ಮಹಿಳೆಯರನ್ನು ಇಂದಿಗೂ ಎರಡನೇ ದರ್ಜೆ ಪ್ರಜೆಯ ರೀತಿಯಲ್ಲಿಯೇ ನೋಡಿಕೊಳ್ಳಲಾಗುತ್ತಿದೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಆಕೆ ಸಾಧನೆ ಮಾಡಿದ್ದರು, ಅನುಮಾನದಿಂದಲೇ ನೋಡುವ ಪ್ರವೃತ್ತಿ ಇಂದಿಗೂ ಮುಂದುವರೆದಿದೆ. ಆ ದರೆ ಬಾಬಾ ಸಾಹೇಬರು ಸ್ವಾತಂತ್ರ ಪೂರ್ವದಲ್ಲಿಯೇ ಮಹಿಳೆಯರಿಗೆ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದಲ್ಲದೆ, ಅವರಿಗೆ ಹೆರಿಗೆರಜೆ, ಸಮಾನ ಕೆಲಸಕ್ಕೆ ಸಮಾನ ವೇತನದಂತಹ ಉದ್ದೇಶಗಳಿಗಾಗಿ ಹೋರಾಟ ನಡೆಸಿ, ಕಾನೂನು ಮಂತ್ರಿಯಾಗಿ ಹಿಂದುಕೋಡ್ ಬಿಲ್ ಮೂಲಕ ಅವುಗಳ ಜಾರಿಗೆ ಮುಂದಾಗಿದ್ದರು. ಇಂದಿನ ಜನಸಂಖ್ಯೆಯ ಶೇ೫೦ರಷ್ಟಿರುವ ಮಹಿಳೆಯರು ಅಂಬೇಡ್ಕರ್ ಅವರನ್ನು ಸ್ಮರಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾಗಿ ಮಾರುತಿ.ಪಿ, ಅವರನ್ನು ತುಮಕೂರು ನಗರ ಯುವ ಘಟಕದ ಅಧ್ಯಕ್ಷರನ್ನಾಗಿ ಪ್ರದೀಪ್. ಎಂ.ಆರ್, ಅವರುಗಳನ್ನು ನೇಮಕ ಮಾಡಿ, ಆದೇಶ ಪತ್ರಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಗಣೇಶ್.ಜಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸ್ವಾಮಿ(ಬಟವಾಡಿ), ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಮಾರುತಿ.ಪಿ, ತುಮಕೂರು ನಗರ ಯುವ ಘಟಕದ ಅಧ್ಯಕ್ಷ ಪ್ರದೀಪ್.ಎಂ.ಆರ್, ಸಂಘದ ಪದಾಧಿಕಾರಿಗಳಾದ ಚೇತನ್, ಪ್ರೀತಮ್, ಧನುಷ್, ಅಂಜನ್ ,ರಾಕೇಶ್, ದರ್ಶನ್, ಬಿ.ಎಲ್.ದಿನೇಶ್, ಹೆಚ್.ಎನ್.ಅಭಿಷೇಕ್ , ವಿನಯ್,ಸುಜನ್, ಪವನ್ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)