ತುಮಕೂರು: ನಗರದ ಖಾಸಗಿ ರೆಸಾರ್ಟ್ನಲ್ಲಿ ಕಲ್ಪತರು ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್ ರಿ., ತುಮಕೂರು ವತಿಯಿಂದ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ೨೦೨೫ ಇದರ ದಿನಾಂಕ ಮತ್ತು ಜರ್ಸಿ ಆನಾವರಣವನ್ನು ಇತ್ತೀಚೆಗೆ ಮಾಡಲಾಯಿತು.
ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿ ರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾ ನದಲ್ಲಿ ಇದೇ ಮೇ ೦೩ ಶನಿವಾರ ಮತ್ತು ೦೪ ಭಾನುವಾರದÀಂದು ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ೨೦೨೫ ನಡೆಯಲಿದ್ದು ಈ ಲೀಗ್‌ನಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಟಗಾರರು ಆಗಮಿಸಲಿದ್ದಾರೆ. ಈ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಆಟಗಾ ರರ ಹರಾಜು ಪ್ರಕ್ರಿಯೆಯು ಏಪ್ರಿಲ್ ೧೨ರಂದು ಬಿಡ್ ನಡೆದಿದ್ದು ತುಮಕೂರು ಜಿಲ್ಲೆ ಸೇರಿದಂತೆ ಬಳ್ಳಾರಿ, ರಾಯಚೂರು, ಭದ್ರಾವತಿ, ಮೈಸೂರು, ದಾವಣಗೆರೆ, ಬೆಂಗಳೂರು ಜಿಲ್ಲೆಗಳಿಂದ ಆಗಮಿಸಿದ್ದ ಫ್ರಾಂಚೈಸಿ ಮಾಲೀ ಕರು ಹಾಗೂ ಸ್ಟಾರ್ ಆಟಗಾರರು ಸೇರಿ ೧೨೬ ಆಟಗಾರರಲ್ಲಿ ೮೦ ಆಟಗಾರರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿಯೇ ಪಂದ್ಯಾವಳಿಯಲ್ಲಿ ಆಟಗಾರರು ಬಳಸುವ ಜರ್ಸಿಗಳನ್ನು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಟಿಡಿಬಿಬಿಎ ಅಧ್ಯಕ್ಷರಾದ ಚಂದ್ರಶೇಖರ್, ಬಿಬಿಎಕೆ ಅಧ್ಯಕ್ಷರಾದ ಪ್ರಸಾದ್, ಕಲ್ಪತರು ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್‌ನ ಗೌರವ ಅಧ್ಯಕ್ಷರಾದ ಅಮರ್‌ನಾಥ್ ಜಿ.ಆರ್, ಉಪಾಧ್ಯಕ್ಷರುಗಳಾದ ಹರ್ಷಿತ್, ಶ್ರೀಹರಿ, ಸಂಘಟನಾ ಕಾರ್ಯದರ್ಶಿ ನವಚೇತನ್, ಸೇರಿದಂತೆ ಪದಾಧಿಕಾರಿಗಳ ಸಮ್ಮುಖದಲ್ಲಿ ಅನಾವರಣ ಮಾಡಲಾಗಿದೆ.
ಪ್ರೀಮಿಯರ್ ಲೀಗ್‌ನಲ್ಲಿ ಗೆದ್ದ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹು ಮಾನವನ್ನು ಪ್ರಥಮ ಮತ್ತು ದ್ವಿತೀಯ ಬಹುಮಾನ ನೀಡಲಾಗುವುದು ಮತ್ತು ಎರಡು ದಿನ ನಡೆಯಲಿರುವ ಈ ಪಂದ್ಯಾ ವಳಿಗಳನ್ನು ಸಾರ್ವಜನಿಕರು ಮುಕ್ತವಾಗಿ ಆಗಮಿಸಿ ವೀಕ್ಷಿಸಬ ಹುದಾಗಿದೆಂದು ಎಂದು ಆಯೋಜಕರಾದ ಶ್ರೀಕಂಠಸ್ವಾಮಿ ಟಿ.ಎನ್.ರವರು ತಿಳಿಸಿದ್ದಾರೆ.

(Visited 1 times, 1 visits today)