ಕೊರಟಗೆರೆ: ೨೦೨೬ರ ಜೂನ್ ಅಂತ್ಯದೊಳಗೆ ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ ಮತ್ತು ಮಧುಗಿರಿ ಕ್ಷೇತ್ರದ ೩೪೩ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರಾವರಿಗೆ ೩.೪೪ಟಿಎಂಸಿ ಮತ್ತು ಕುಡಿಯುವ ನೀರಿಗೆ ೨.೨೯ ಟಿಎಂಸಿ ಸೇರಿ ಒಟ್ಟು ೫.೭೪ಟಿಎಂಸಿ ನೀರು ಹರಿಯಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಮಾಹಿತಿ ನೀಡಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿಯ ಕಮಲಪ್ರಿಯ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ೨೪ಗ್ರಾಪಂ ಅಧ್ಯಕ್ಷ ರು, ಉಪಾಧ್ಯಕ್ಷರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಸರಕಾರ ದಿವಾಳಿ ಆಗಿದೆ ಅಂತಾ ವಿರೋಧ ಪಕ್ಷದವ್ರು ಅಂತಾರೇ. ಹಿಂದಿನ ವರ್ಷದ ಬಜೆಟ್ ೩ಲಕ್ಷ ೭೧ಸಾವಿರ ಕೋಟಿ. ಪ್ರಸ್ತುತ ವರ್ಷದ ಬಜೆಟ್ ಗಾತ್ರ ೪ಲಕ್ಷ ೯ಸಾವಿರ ಕೋಟಿ. ಬಜೆಟ್ ಹೆಚ್ಚಾಗಿದ್ದು ವಿರೋಧ ಪಕ್ಷಗಳಿಗೆ ಗೋತ್ತಿಲ್ಲವೇ. ಎತ್ತಿನಹೊಳೆ ಯೋಜನೆಯ ನೀರಾವರಿ ಮತ್ತು ಕುಡಿಯುವ ನೀರಿನ ಯೋಜ ನೆಯ ಅಭಿವೃದ್ದಿಯ ನನ್ನ ಹೆಜ್ಜೆಗುರುತು ಸಾಕ್ಷಿಯಾಗಿ ಉಳಿಯಲಿವೆ ಎಂದರು.
ನಾನು ಮಧುಗಿರಿ ಕ್ಷೇತ್ರದ ಶಾಸಕನಾಗಿದ್ದಾಗ ಹೇಮಾವತಿ ಯೋಜನೆಯ ನೀರಾವರಿ ಯೋಜನೆಯ ರೂಪುರೇಷು ತಯಾರಿಸುವಾಗ ವಿರೋಧ ಪಕ್ಷದವರು ಬಕೇಟ್‌ನಲ್ಲಿ ನೀರು ತರ್ತಾರಾ ಅಂಗ ವ್ಯಂಗ್ಯ ಮಾಡಿದ್ರು. ಈಗ ಹೇಮಾವತಿ ನೀರಿನ ಯೋಜನೆಯು ತುಮಕೂರು ಜಿಲ್ಲೆಯ ಸಾವಿರಾರು ರೈತರಿಗೆ ನೀರಾವರಿಯ ವರದಾನ ಆಗಿದೆ. ಟೀಕೆ ಮಾಡಿದ ನಾಯಕರಿಗೆ ನನ್ನ ಕೆಲಸದ ಹೆಜ್ಜೆಗುರುತು ಉತ್ತರ ನೀಡುತ್ತೇ ಎಂದು ತಿಳಿಸಿದರು.
ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ೨೦೧೩ರಿಂದ ೨೦೧೮ರ ೫ವರ್ಷದ ಅವಧಿಯಲ್ಲಿ ನಮ್ಮ ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ನೀರಾವರಿ ಯೋಜನೆಗೆ ೫೮ಸಾವಿರ ಕೋಟಿ ಅನುಧಾನ ನೀಡಿದೆ. ನಮ್ಮ ರಾಜ್ಯದ ರೈತರು ಉಳುಮೆ ಮಾಡಿ ಬೆಳೆ ಬೆಳೆಯುವ ಭೂಮಿ ೧ಕೋಟಿ ೨೮ಲಕ್ಷ ಹೇಕ್ಟರ್. ನೀರಾವರಿ ಯೋಜನೆಯ ಭೂಮಿ ಕೇವಲ ೪೨.೩೨ಲಕ್ಷ ಹೇಕ್ಟರ್ ಅಷ್ಟೆ. ಇನ್ನೂಳಿದ ೮೬ಲಕ್ಷ ಹೇಕ್ಟರ್ ಭೂಮಿ ಮಳೆಯಾಶ್ರಿತ ಆಗಿದೆ. ರೈತರು ಇನ್ನೂ ಹೆಚ್ಚು ನೀರಾವರಿಗೆ ಆಧ್ಯತೆ ನೀಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಪೊಲೀಸ್ ವರೀಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ.ಕೆ, ಸಿಪಿಐ ಅನಿಲ್, ತಾಪಂ ಇಓ ಅಪೂರ್ವ, ಸಣ್ಣನೀರಾವರಿ ಎಇಇ ರಮೇಶ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಬ್ಲಾಕ್ ಅಧ್ಯಕ್ಷರಾದ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಯುವಧ್ಯಕ್ಷ ಬೈರೇಶ್, ಉಪಾಧ್ಯಕ್ಷ ದೀಪು, ರಘುವೀರ್, ಮಹಿಳಾಧ್ಯಕ್ಷೆ ಜಯಮ್ಮ ಇದ್ದರು.

ಪೂರ್ವಭಾವಿ ಸಭೆಯ ಮುಖ್ಯಾಂಶಗಳು

> ೨೦೨೬ರ ಜೂನ್‌ಗೆ ತುಮಕೂರು ಜಿಲ್ಲೆಗೆ ಎತ್ತಿನಹೊಳೆ ನೀರು.
> ೪೫೩ಕೋಟಿ ವೆಚ್ಚದ ಕಾಮಗಾರಿಗಳಿಗೆ ಏ.೧೯ರಂದು ಚಾಲನೆ.
> ನೀರಾವರಿ ಮತ್ತು ಕುಡಿಯುವ ನೀರಿಗೆ ೫.೭೪ಟಿಎಂಸಿ ನಿಗಧಿ.
> ತುಮಕೂರು ಜಿಲ್ಲೆಯ ೩೪೩ಕೆರೆಗಳಿಗೆ ಎತ್ತಿನಹೊಳೆ ನೀರು.
> ಕೊರಟಗೆರೆ ಕ್ಷೇತ್ರದಲ್ಲಿ ನೀರಾವರಿಯ ಶಾಶ್ವತ ಹೆಜ್ಜೆಗುರುತು.
> ನೀರಾವರಿ ಕನಸು ನನಸು ಮಾಡುವತ್ತ ಗೃಹಸಚಿವ ಯಶಸ್ವಿ ಹೆಜ್ಜೆ.
> ಕೊರಟಗೆರೆ ಕ್ಷೇತ್ರದಲ್ಲಿ ಬೃಹತ್ ನೀರಾವರಿ ಸಮಾವೇಶಕ್ಕೆ ಸಿದ್ದತೆ.

೧೦೪ಕೆರೆಗಳಿಗೆ ಎತ್ತಿನಹೊಳೆ ನೀರು

ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾದ ೩೬ಕೆರೆ, ಪುರವಾರದ ೮ಕೆರೆ, ಕಸಬಾದ ೮ಕೆರೆ, ಹೊಳವನಹಳ್ಳಿಯ ೧೦ಕೆರೆ, ಕೋಳಾಲದ ೨೫ಕೆರೆ ಮತ್ತು ಚನ್ನರಾಯನದುರ್ಗದ ೧೭ಸೇರಿ ಒಟ್ಟು ೧೦೪ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಬಯಲುಸೀಮೆ ರೈತರ ನೀರಾವರಿ ಬೇಡಿಕೆಯಂತೆ ನಾನು ನೀಡಿದ ಎತ್ತಿನಹೊಳೆ ಯೋಜನೆಯ ಕಾರ್ಯಗತದ ಹೆಜ್ಜೆಗುರುತು ಹಾಕಿದ್ದೇನೆ. ಸಣ್ಣ ನೀರಾವರಿ ಇಲಾಖೆಯ ೨೮೮ಕೋಟಿ, ಪಿಡ್ಲೂö್ಯಡಿ ಇಲಾಖೆಯ ೩೫ಕೋಟಿ, ನರೇಗಾ ಯೋಜನೆಯ ೪೬ಕೋಟಿ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ೩೪ಕೋಟಿ, ಪಂಚಾಯತ್ ರಾಜ್ ಇಲಾಖೆಯ ೨೩ಕೋಟಿ, ಬೆಸ್ಕಾಂ ಇಲಾಖೆಯ ೧೭ಕೋಟಿ ಸೇರಿ ಒಟ್ಟು ೪೫೩ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಏ.೧೯ರಂದು ಚಾಲನೆ ನೀಡಿ ಕೊರಟಗೆರೆ ಕ್ಷೇತ್ರವನ್ನು ಅಭಿವೃದ್ದಿಯ ಪಥದತ್ತಾ ಕೊಂಡ್ಯೊಯುತ್ತೇನೆ.
> ಡಾ.ಜಿ.ಪರಮೇಶ್ವರ, ಗೃಹ ಸಚಿವ

ಕೊರಟಗೆರೆ ಕ್ಷೇತ್ರದ ೧೦೪ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಯ ಕನಸು ನನಸಾಗಲಿದೆ. ಏ.೧೯ರಂದು ೪೫೩ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಡೆಯಲಿದೆ. ಬಯಲುಸೀಮೆ ಕೊರಟಗೆರೆ ಕ್ಷೇತ್ರದ ರೈತರ ಕನಸು ನನಸಾಗುವ ಕಾಲ ಸನಿಹ ಬಂದಿದೆ. ಗೃಹಸಚಿವರು ಕೊರಟಗೆರೆ ಕ್ಷೇತ್ರದ ಪ್ರತಿ ಗ್ರಾಮಕ್ಕೂ ಅನುಧಾನ ನೀಡಿ ಅಭಿವೃದ್ದಿಯ ಆಧ್ಯತೆ ನೀಡಿದ್ದಾರೆ.
> ಪ್ರಭು.ಜಿ, ಜಿಪಂ ಸಿಇಓ. ತುಮಕೂರು

(Visited 1 times, 1 visits today)