ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿಯ ವತಿಯಿಂದ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಜನ್ಮದಿನಾಚರಣೆಯನ್ನು ಅಂಬೇಡ್ಕರ್ ಅವರ ಆಶಯದಂತೆ ಆಚರಿಸಲಾಯಿತು.
ಡಾ. ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕು ಮಾರ್ ಮಾತನಾಡುತ್ತಾ ಇಂದು ತಳ ಸಮುದಾಯದ ಪ್ರತಿಯೊಬ್ಬರು ಸುಶಿಕ್ಷಿತರಾಗಿ ಬದುಕುತ್ತಿದ್ದೇವೆಂದರೆ ಅದಕ್ಕೆ ಮೂಲ ಕಾರಣ ಬಾಬಾ ಸಾಹೇಬರು, ಅವರು ಹಾಕಿಕೊಟ್ಟ ಮಾರ್ಗದರ್ಶನ ಇಂದು ಕೋಟ್ಯಂತರ ಜನರಿಗೆ ಅನುಕೂಲಕರವಾಗುತ್ತಿದೆ ಎಂದರೇ ತಪ್ಪಾಗಲಾರದು ಅದಕ್ಕಾಗಿಯೇ ಡಾ|| ಬಿ.ಆರ್.ಅಂಬೇಡ್ಕರ್ ಅವರನ್ನು ಮದರ್ ಆಫ್ ನೇಷನ್ ಎಂದು ಕರೆಯಲಾಗುತ್ತಿದೆ, ಅವರಿಗೆ ಜನರು ನೀಡಿರುವ ಬಿರುದುಗಳನ್ನು ಹೇಳುತ್ತಿದ್ದರೆ ಮೈ ರೋಮಾಂಚನವಾಗುದAತು ಸತ್ಯ ಎಂದರು.
ಮುAದುವರೆದು ಮಾತನಾಡುತ್ತಾ ಭಾರತೀಯರಿಗೆ ಅಂಬೇಡ್ಕರ್ ಅವರ ಪ್ರತಿಭಟನಾತ್ಮಕ ಗುಣಗಳು ಪರಿಚಯವಾದಷ್ಟು ಅವರ ಔಧರ್ಯ ಅ ರ್ಥವಾಗಲಿಲ್ಲ. ಜನ ಸಮೂಹಗಳ ಮೇಲೆ ಅವರಿಗಿದ್ದ ಆಂತರಿಕ ಅಂತ:ಕರಣವನ್ನು ಸಂಪೂರ್ಣ ವಾಗಿ ಮರೆಮಾಚಲಾಗಿದೆ. ಒಂದು ವೇಳೆ ಡಾ. ಅಂಬೇಡ್ಕರ್ ಅವರಂತಹ ಮಾತೃ ಹೃದಯ ಆ ಕಾಲದಲ್ಲಿ ಹುಟ್ಟಿರಲಿಲ್ಲ ಎಂದಾದರೆ, ಈ ನೆಲದಲ್ಲಿ ಮಾನವ ಹಕ್ಕುಗಳ ಹರಣವಾಗಿರುತ್ತಿತ್ತು ಅಥವಾ ಇಲ್ಲಿನ ಕೋಟ್ಯಾನಕೋಟಿ ಜನಸಮೂಹಕ್ಕೆ ಮಾನವ ಹಕ್ಕುಗಳ ಪರಿಚಯವೇ ಆಗುತ್ತಿರಲಿಲ್ಲ. ಇಂದಿಗೂ ಕೂಡ ಅಂಬೇಡ್ಕರ್ ರವರು ಭಾರತೀಯ ಪ್ರತಿಯೊಬ್ಬ ನಾಗರಿಕನಿಗೆ, ನಾಗರಿಕ ಹಕ್ಕುಗಳನ್ನು ನೀಡುವಲ್ಲಿ ಶ್ರಮಿಸಿರುವ ಅವರ ತ್ಯಾಗವನ್ನು ಗ್ರಹಿಸಲಾಗಿಲ್ಲ. ಒಂದು ಸಮೂಹದ ಸಂಕೋಲೆಯಲ್ಲಿಯೇ ಕಟ್ಟಿಹಾ ಕಲಾಗಿದೆ ಅವರ ಒಂದು ಮುಖವನ್ನು ಮಾತ್ರ ಜಗತ್ತಿಗೆ ಪರಿಚಯಿಸಲಾಗುತ್ತಿದೆ ಎಂದರು.
ಇAದು, ಭಾರತದಲ್ಲಿ ಬಡವ, ನಿರ್ಗತಿಕ, ಅವಮಾನಿತ ಶೋಷಿತರ ಬಗ್ಗೆ ಸಾವಿರಾರು ಜನ ಮಾತನಾಡುತ್ತಿರಬಹುದು. ಆದರೆ ಅಂದಿನ ಭಾರತದಲ್ಲಿ, ಅಂದರೆ ೧೦೦ ವರ್ಷಗಳ ಹಿಂದೆ ಇಡೀ ಭಾರತ ಬಡವನ ಪರ ಮಾತನಾಡಲು ಇದ್ದ ಏಕೈಕ ಧ್ವನಿ ಎಂದರೆ ಡಾ. ಅಂಬೇಡ್ಕರ್ ತನ್ನ ಮಕ್ಕಳ ಹಸಿವನ್ನು ನೀಗಲು ನಿರಂತರವಾಗಿ ದುಡಿಯುವಂತಹ ತಾಯಿಯಂತೆ, ಅಮಾಯಕ ಜನರ ಭವಿಷ್ಯವನ್ನು ರೂಪಿಸಲು ದುಡಿದ ಒಂಟಿ ಕಾಲಿನ ತಪಸ್ವಿ. ಅಂದು ಬ್ರಿಟಿಷ್ ಕೌನ್ಸಿಲ್‌ಗಳ ಮುಂದೆ, ದುಂಡು ಮೇಜಿನ ಸಭೆಗಳ ಮುಂದೆ, ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕುಗಳಿಗಾಗಿ ಕೂಗನ್ನು ಆರಂಭಿಸಿದಾಗ, ಒಂದೇ ಒಂದು ಧ್ವನಿ ಕೂಡಾ ಇವರ ಜೊತೆ ಸೇರಲಿಲ್ಲ. ಬದಲಿಗೆ ಈ ಧ್ವನಿಯ ವಿರುದ್ಧ ದಿಕ್ಕಿನಲ್ಲಿ ನೂರಾರು ಧ್ವನಿಗಳು ಪ್ರತಿಧ್ವನಿಸಿದವು. ಪ್ರತಿ ನಾಗರೀಕನಿಗೂ ಓಟಿನ ಹಕ್ಕುನ್ನು ಕೇಳುವಾಗ, ಭಾರತೀಯ ಪ್ರತಿಯೊಬ್ಬ ಹೆಣ್ಣುಮಗಳ ಹಕ್ಕನ್ನು ಪ್ರತಿಪಾದಿಸಿದಾಗ, ಅವಮಾ ನಿತ, ಅಮಾಯಕರ, ಧ್ವನಿಯಾದಾಗ, ಅನಿಷ್ಟ ಪದ್ಧತಿಗಳ ವಿರುದ್ಧ ಈಜಿದಾಗ, ಅಮಾನವೀಯ ಮೌಲ್ಯಗಳನ್ನು ಸೀಳಿ, ಮಾನವೀಯ ಮೆಟ್ಟಿಲುಗಳನ್ನು ನಿರ್ಮಿಸುವಾಗ, ಜಾತಿ ಸಂಕೋಲೆಗಳನ್ನು ಪ್ರತಿಭಟಿ ಸಿದಾಗ, ಡಾ. ಅಂಬೇಡ್ಕರ್ ರವರ ಜೊತೆ ಯಾರೂ ಅಚಲವಾಗಿ ನಿಲ್ಲಲಿಲ್ಲ. ಆದರೆ, ಭಾರತೀಯನ ನಾಗರಿಕ ಹಕ್ಕುಗಳ ಜೀವಂತಿಕೆಗಾಗಿ ಜೀವನ ಪೂರ್ತಿ ಕೂಗಿದ ಅಂದಿನ ಏಕೈಕ ಧ್ವನಿ ಡಾ. ಅಂಬೇಡ್ಕರರದು ಮಾತ್ರ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಕಾರ್ಯಾಧ್ಯಕ್ಷರಾದ ಕೆ.ನರಸಿಂಹಮೂರ್ತಿ (ಕೆಸ್ತೂರು) ಅವರು ಮಾತನಾಡುತ್ತಾ ಅಂಬೇಡ್ಕರ್ ಜೀವನ ಚರಿತ್ರೆ ಈ ನೆಲದಲ್ಲಿ ಪಠ್ಯವಾಗಲು ಅನೇಕ ಚಳುವಳಿಗಳಾಗಿವೆ, ಚರ್ಚೆಗಳಾಗಿವೆ. ಪ್ರತೀ ದಿನ ದೇಶದ ಯಾವುದಾದರು ಒಂದು ಮೂಲೆಯಲ್ಲಿ ಅಂಬೇಡ್ಕರ್ ರವರಿಗೆ ಅವ ಮಾನ ಮಾಡುವುದು ಒಂದು ಸಂಪ್ರದಾಯವಾಗಿ ಬಿಟ್ಟಿದೆ. ಇಂತಹ ವೈರುದ್ಧಗಳ ನಡುವೆಯೂ ನಾವು ನಮ್ಮ ಮಹಾನಾಯಕರ ೧೩೪ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದೇವೆ. ಹುಟ್ಟಿದ ದೇಶದ ಕಥೆ ಹೀಗಾದರೆ ಜಗತ್ತಿನ ಪ್ರತಿಷ್ಠಿತರಾದ ಅಮೇರಿಕನ್ನರು ತಮ್ಮ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅಂಬೇಡ್ಕರ್ ರವರ ಪುತ್ತಳಿಯನ್ನು ನಿರ್ಮಿಸಿ ಅದರ ಕೆಳಗಡೆ “ದಿ ಸಿಂಬಲ್ ಆಫ್ ನಾಲೆಡ್ಜ್” ಎಂದು ಬರೆದದ್ದು, ಅಂಬೇಡ್ಕರ್ ಭಾರತದಿಂದಾಚೆ ಅತ್ಯಂತ ಗೌರದಿಂದ ಬದುಕಿದ್ದಾರೆ ಎಂಬುದರ ಸಂಕೇತ, ಅಂಬೇಡ್ಕರ್‌ರವರಿAದ ರಚಿಸಲ್ಪಟ್ಟ ಭಾರತದ ಸಂವಿಧಾನ ಹಲವಾರು ರಾಷ್ಟçಗಳಿಗೆ ಅದನ್ನು ಮಾದರಿಯನ್ನಾಗಿ ಮಾಡಿಕೊಂಡು ಅಳವಡಿ ಸಿಕೊಂಡಿದ್ದಾರೆAದರೆ ನಮ್ಮ ಭಾರತದ ಸಂವಿಧಾನಕ್ಕೆ ಇರುವ ಮೌಲ್ಯ ಏನು ಎಂಬುದು ಎಲ್ಲರೂ ತಿಳಿಯಬೇಕಿದೆ ಎಂದು ತಿಳಿಸಿದರು. ಅಂಬೇಡ್ಕರ್ ಒಬ್ಬ ವ್ಯಕ್ತಿಯಾಗಿರದೇ ಒಬ್ಬ ಮಹಾ ನ್ ಚೇತನ, ಮಹಾನಾಯಕ, ಇವರು ಈ ಪೀಳಿಗೆ ಮಾತ್ರವಲ್ಲದ ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊ ಬ್ಬರಿಗೂ ಅವರು ಹಾಕಿಕೊಟ್ಟಿರುವ ಸಂವಿಧಾನ ಅನ್ವಯವಾಗುತ್ತದೆ, ಅದಕ್ಕಾಗಿ ಅವರು ಅಜರಾಮರ ಎಂದರಲ್ಲದೇ, ಅವರ ಬಗ್ಗೆ ಹೇಳುತ್ತಾ ಹೋದರೆ ದಿನಗಳು ಕಳೆಯುವುದೇ ಗೊತ್ತಾಗುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್, ಜಿಲ್ಲಾ ಉಪಾಧ್ಯಕ್ಷರಾದ ಲಕ್ಷಿö್ಮÃನಾರಾಯಣ್, ಜಿಲ್ಲಾ ಕಾರ್ಯಧ್ಯಕ್ಷರಾದ ಕೆ.ನರಸಿಂಹಮೂರ್ತಿ (ಕೆಸ್ತೂರು), ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ಕಿರಣ್ ವೈ.ಎಸ್, ಮುಖಂಡರುಗಳಾದ ದರ್ಶನ್ ಬಿ.ಅರ್, ಮನು ಟಿ.ಎಲ್, ರಂಗಸ್ವಾಮಯ್ಯ ಕೆ.ಎಸ್, ಶಿವಣ್ಣ ಎನ್, ಗೋವಿಂದರಾಜು, ಇಲ್ಲಾಸ್ ಅಹಮದ್, ಜಗದೀಶ್ (ಟೈಲರ್), ಸಿದ್ಧಲಿಂಗಯ್ಯ, ಮೋಯಿನ್, ರಿಯಾಜ್ ಅಹಮ್ಮದ್, ಹನುಮನರಸಯ್ಯ, ಕುಮಾರ್, ಜಗದೀಶ್, ಮಣ್ಣಪ್ಪ, ಗಗನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

(Visited 1 times, 1 visits today)