ತುಮಕೂರು: ಡೀಸಲ್ ದರ, ಎಫ್.ಸಿ. ಶುಲ್ಕ ಸೇರಿದಂತೆ ಸಾರಿಗೆ ಇಲಾಖೆಯಲ್ಲಿನ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಏಪ್ರಿಲ್ ೧೪ರ ಮಧ್ಯಾರಾತ್ರಿಯಿಂದ ಹಮ್ಮಿಕೊಂ ಡಿದ್ದು, ಇದರ ಅಂಗವಾಗಿ ಕರ್ನಾಟಕ ಟ್ರೆöÊಲರ್ & ಟ್ರಕ್ ಓರ‍್ಸ್ ಅಸೋಸಿಯೇಷನ್ ವತಿ ಯಿಂದ ತುಮಕೂರು ನಗರದ ಕ್ಯಾತ್ಸಂದ್ರ ಬಳಿಯಿರುವ ಟೋಲ್‌ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಪ್ರತಿಭಟನೆಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಕೆ.ಆರ್.ರಾಘವೇಂದ್ರ ಮಾತನಾಡಿ ಡೀಸೆಲ್ ಮೇಲಿನ ಸೆಸ್ ಕಡಿತ, ಅಂತಾರಾಜ್ಯ ಆರ್.ಟಿ.ಓ. ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು, ಸಾರಿಗೆ ವಾಹನಗಳು ನಗರ ಪ್ರವೇಶವನ್ನು ಮುಕ್ತಗೊಳಿಸುವುದು, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾವು ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಜೊತೆಗೆ ಇತ್ತೀಚಗೆ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡಲೇಬೇಕು ಏಕೆಂದರೆ ಇದರಿಂದ ಜನ ಸಾಮಾನ್ಯರ ಮೇಲೆ ನೇರ ಹೊರೆ ಬೀಳುತ್ತದೆ, ಜೊತೆಗೆ ಡೀಸಲ್ ಬೆಲೆ ಏರಿಕೆ ಯಿಂದ ಅಗತ್ಯವಸ್ತುಗಳ ಬೆಲೆಗಳಲ್ಲಿಯೂ ಸಹ ಗಣನೀಯ ಏರಿಕೆ ಬರುವುದು ಖಂಡಿತ ಆ ದುದರಿಂದ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಡೀಸೆಲ್ ಬೆಲೆಯನ್ನು ಆದಷ್ಟು ಶೀಘ್ರವಾಗಿ ಕಡಿಮೆ ಮಾಡಬೇಕು ಎಂದು ಈ ಮೂಲಕ ಒತ್ತಾ ಯಿಸುತ್ತಿದ್ದೇವೆ ಜೊತೆಗೆ ಈ ಕೂಡಲೇ ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರವನ್ನು ಮತ್ತಷ್ಟು ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಟ್ರೆöÊಲರ್ & ಟ್ರಕ್ ಓರ‍್ಸ್ ಅಸೋಸಿಯೇಷನ್ ರಾಜ್ಯಾ ಧ್ಯಕ್ಷರಾದ ರಾಘವೇಂದ್ರ ಕೆ.ಆರ್., ಉಪಾಧ್ಯಕ್ಷರು ಆರ್ಷಿತ್ ಎನ್, ಕಾರ್ಯದರ್ಶಿ ರಾಧಾಕೃಷ್ಣ ಡಿ., ಜಂಟಿ ಕಾರ್ಯದರ್ಶಿ ಮಂಜುನಾಥ್ ವೈ.ಬಿ., ನಿರ್ದೇಶಕರಾದ ಇರ್ಫಾನ್ ಪಾಷ ಸೇರಿದಂತೆ ಟ್ರೆöÊಲರ್ ಮತ್ತು ಟ್ರಕ್ ಮಾಲೀಕರು ಹಾಗೂ ಚಾಲಕರು ಉಪಸ್ಥಿತರಿದ್ದರು.