ತುಮಕೂರು: ೭ನೇ ವೇತನಆಯೋಗದ ಪರಿಷ್ಕೃತ ವೇತನ ಪಾವತಿಗೆಅವಶ್ಯವಿರುವ ಹೆಚ್ಚುವರಿಅನುದಾನವನ್ನು ನೀಡುವುದೂ ಸೇರಿದಂತೆವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿಇಲ್ಲಿನ ಮಹಾನಗರಪಾಲಿಕೆಅಧಿಕಾರಿಗಳ ಹಾಗೂ ನೌಕರರ ಸಂಘದಕರೆಯ ಮೇರೆಗೆಅಧಿಕಾರಿ, ನೌಕರರು ಬುಧವಾರಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.
ಈ ಸಂಬAಧ ನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದ ಅಧಿಕಾರಿ, ನೌಕರರು, ರಾಜ್ಯ ಸಂಘದವತಿಯಿAದ ಸರ್ಕಾರಕ್ಕೆ ನೀಡಿರುವ ಬೇಡಿಕೆಗಳನ್ನು ಈಡೇರಿಸದೇಇದ್ದಲ್ಲಿ ಬರುವ ಮೇ ೨೬ರಂದು ಸಾಂದರ್ಭಿಕರಜೆ ಹಾಕಿ, ನ್ಯಾಯಯುತ ಬೇಡಿಕೆಗಳನ್ನು ಪಡೆಯುವ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿ, ಅನಿವಾರ್ಯ ಕಾರಣಗಳಿಂದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿರುತ್ತದೆಎಂದು ಹೇಳಿದರು.
ಹಂತಹAತವಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ.ಮಹಾನಗರ ಪಾಲಿಕೆಗಳು ಖಾಯಂ ನೌಕರರ ವೇತನಾನುದಾನಕ್ಕೆ ನಿಗದಿತ ನಮೂನೆ ‘ಅಪೆಂಡಿಕ್ಸ್-ಬಿ’ಯಲ್ಲಿ ಸಲ್ಲಿಸಿದ್ದ ಬೇಡಿಕೆಯಲ್ಲಿ ಶೇ.೯೦/ಶೇ.೮೫ರಷ್ಟು ಅನುದಾನವನ್ನು ಮಾತ್ರ ಹಂಚಿಕೆ ಮಾಡಿ ವ್ಯತ್ಯಾಸದ ಉಳಿಕೆ ಶೇ.೧೦/ಶೇ.೧೫ ಅನುದಾನವನ್ನು ಮಹಾನಗರ ಪಾಲಿಕೆಗಳು ಕ್ರೋಢೀಕರಿಸಿದ ಸ್ವಂತ ಸಂಪನ್ಮೂಲಗಳಿAದ ಭರಿಸಲುಆರ್ಥಿಕಇಲಾಖೆಯ ೨೦೨೫-೨೬ನೇ ಸಾಲಿನ ಆಯವ್ಯಯ ವೆಚ್ಚ ಸಂಪುಟ-೦೪ ರಟಿಪ್ಪಣಿಯಂತೆ ಪೌರಾಡಳಿತ ನಿರ್ದೇಶನಾಲಯದಿಂದಆದೇಶ ಹೊರಡಿಸಲಾಗಿದ್ದು, ಸದರಿಆದೇಶವನ್ನು ಹಿಂಪಡೆದು, ಖಾಯಂನೌಕರರ ವೇತನಾನುದಾನಕ್ಕೆಅವಶ್ಶವಿರುವ ಸಂಪೂರ್ಣಅನುದಾನವನ್ನು ಎಸ್‌ಎಫ್‌ಸಿ ನಿಧಿಯಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರದಆದೇಶದಂತೆ ಜಾರಿಗೊಳಿಸಿರುವ ಆರೋಗ್ಯ ಸಂಜೀವಿನಿ ಯೋಜನೆಕಾರ್ಯಸೂಚಿಯನ್ನುನಗರಾಭಿವೃದ್ಧಿಇಲಾಖೆಯಡಿ ಬರುವ ಮಹಾನಗರಪಾಲಿಕೆ ಹಾಗೂ ಇತರೆ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ಅವರಕುಟುಂಬದಅವಲAಬಿತ ಸದಸ್ಯರಿಗೆಯಥಾವತ್ತಾಗಿ ವಿಸ್ತರಿಸಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದಅಧ್ಯಕ್ಷ ಪ್ರಸನ್ನಕುಮಾರ್,ಉಪಾಧ್ಯಕ್ಷೆ ಪುಷ್ಪಲತ, ಪದಾಧಿಕಾರಿಗಳಾದ ಸಿದ್ಧಲಿಂಗಯ್ಯ, ಶೆಟ್ಟಳ್ಳಪ್ಪ, ಮಧು, ಸುನೀತಾ, ಮಹೇಶ್ ಬಾಬು, ವಿಜಯಕುಮಾರ್ ಮೊದಲಾದವರು ಭಾಗವಹಿಸಿದ್ದರು.
(Visited 1 times, 1 visits today)