
ಕೊರಟಗೆರೆ: ಏ. ೧೬ ತಾಲೂಕಿನ ಎಲೆರಾಂಪುರ ಗ್ರಾಮ ದಲ್ಲಿನ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ ಭಕ್ತಿಭಾವಪೂರ್ಣ ವಾತಾವರಣದಲ್ಲಿ ನಾಲ್ಕನೇ ವರ್ಷದ ಸಂಸ್ಕಾರ ಶಿಬಿರಕ್ಕೆ ಬುಧವಾರ ಭವ್ಯ ಚಾಲನೆ ದೊರೆಯಿತು.
ಕಾರ್ಯಕ್ರಮದ ಉದ್ಘಾಟನೆಗೆ ತುಮಕೂರು ಜಿಲ್ಲಾಧಿಕಾರಿ ಡಾ. ಶುಭಕಲ್ಯಾಣ ಮತ್ತು ತುಮ ಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹೀ ದ ಜಂ ಜಂ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ. ಶುಭಕಲ್ಯಾಣ ಮಾತನಾಡುತ್ತಾ, “ಯಾವುದೇ ವಿಚಾರದಲ್ಲಿ ಶ್ರದ್ಧೆಯಿಂದ ಕಲಿತರೆ ಅದು ಜೀವ ನದ ದಿಕ್ಕು ಬದಲಾಯಿಸಬಲ್ಲದು. ಈ ಶಿಬಿರ ಮಕ್ಕಳಿಗೆ ಸಂಸ್ಕಾರಗಳನ್ನೂ ಕಲಿಸುವುದರ ಜೊತೆಗೆ, ಸಮಾಜದತ್ತ ನೈತಿಕ ಹೊಣೆಗಾರಿಕೆ ತಿಳಿಯಿಸುವ ಶಿಕ್ಷಣದ ಪಾಠಶಾಲೆಯಾಗಿದೆ,” ಎಂದು ಶ್ಲಾಘಿಸಿದರು.
ತುಮಕೂರು ವಿಶ್ವ ವಿದ್ಯಾನಿಲಯದ ಕುಲಸಚಿವೆ ನಾಹೀದ ಜಂ ಜಂ ತಮ್ಮ ಭಾಷಣದಲ್ಲಿ, “ಈಗಿನ ತಲೆಮಾರಿಗೆ ನೀತಿಭದ್ರತೆ, ಶಿಸ್ತು ಮತ್ತು ಗೌರವವಂತಿಕೆ ಅತ್ಯಗತ್ಯ. ಹನುಮಂತನಾಥ ಸ್ವಾಮೀಜಿಗಳ ಶಿಬಿರ ಇಂಥ ಮೌಲ್ಯಗಳನ್ನು ಬಾಲ ಮನಸ್ಸಿನಲ್ಲಿ ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿದೆ,” ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡುತ್ತಾ, “ಈ ಶಿಬಿರವು ಮಕ್ಕಳಲ್ಲಿ ಶ್ರದ್ಧೆ, ಶಿಸ್ತು, ಧಾರ್ಮಿಕ ಭಾವನೆ, ಸಾಮಾಜಿಕ ನೈತಿಕತೆ ಮತ್ತು ನೈಜ ಜೀವನ ಕೌಶಲ್ಯಗಳನ್ನು ಬೆಳೆಸುವುದನ್ನು ಉದ್ದೇಶಿಸಿದೆ. ಕಳೆದ ಮೂರು ವರ್ಷಗಳಲ್ಲಿ ಭಾಗವಹಿಸಿದ ಮಕ್ಕಳು ಇವತ್ತಿಗೂ ಆ ಸಂಸ್ಕಾರಗಳನ್ನು ಬದು ಕಿನಲ್ಲಿ ಅನುಸರಿಸುತ್ತಿದ್ದಾರೆ,” ಎಂದರು
ಈ ಶಿಬಿರವು ಮಕ್ಕಳಲ್ಲಿ ಆತ್ಮವಿಶ್ವಾಸ, ಸಾಮಾ ಜಿಕ ಜವಾಬ್ದಾರಿ, ಶ್ರದ್ಧಾ, ಶಿಸ್ತು, ಸಹಾನುಭೂತಿ ಹಾಗೂ ಉನ್ನತ ಮೌಲ್ಯಗಳನ್ನು ಬೆಳೆಸುವ ಮೂಲಕ ಅವರನ್ನು ಭವಿಷ್ಯದ ಸಜ್ಜನ ನಾಗರಿಕರನ್ನಾಗಿ ರೂಪಿಸುತ್ತಿದೆ. ಇಂತಹ ಶಿಬಿರಗಳು ಗ್ರಾಮೀಣ ಭಾಗದ ಮಕ್ಕಳ ಬಾಳಲ್ಲಿ ಬೆಳಕು ಹರಡುತ್ತದೆ ಎಂದರು. ನಿವೃತ್ತ ಪ್ರಾಚಾರ್ಯ ನಂಜುAಡಯ್ಯ, ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ನಾಗಣ್ಣ, ತಹಶೀಲ್ದಾರ್ ಮಂಜುನಾಥ್, ತುಮುಲ್ ನಿರ್ದೇಶಕ ಸಿದ್ದಗಂಗಯ್ಯ, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ. ಪುರುಷೋತ್ತಮ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.