ಚಿಕ್ಕನಾಯಕನಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದಗಳ ರೈತವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ರೈತಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರಾಜ್ಯರೈತಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಸದಸ್ಯರು ಪಟ್ಟಣದ ಮುಖ್ಯರಸ್ತೆಯ ಮೂಲಕ ಪ್ರತಿಭಟನಾ ಮೆರವ ಣಿಗೆಯೊಂದಿಗೆ ತಾಲ್ಲೂಕು ಕಚೇರಿಯವರೆಗೆ ಆಗಮಿಸಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯದುಕುಮಾರ್ ಮಾತನಾಡಿ ಕಳೆದ ೩೦ ವರ್ಷಗಳಿಂದ ಜಾಗತಿಕ ಕ್ಷೇತ್ರವು ಹಲವು ಬದಲಾವಣೆಗಳನ್ನು ಕಂಡಿದೆ. ಇದರಲ್ಲಿ ಸರ್ಕಾರಗಳು ಬಂಡವಾಳಶಾಹಿ ಕೇಂದ್ರಿತ ವ್ಯವಸ್ಥೆಗೆ ಕೈಜೋಡಿಸಿದ ಪರಿಣಾಮ ಜನಸಾಮಾನ್ಯರ ಮೇಲಾಗುತ್ತಿದೆ, ಅಗತ್ಯವಸ್ತುಗಳ ಬೆಲೆ ಏರಿಕೆ, ಖಾಸಗೀಕರಣದಿಂದ ರೈತರಿಗೆ ದುರ್ಬಲವರ್ಗಕ್ಕೆ ಸರ್ಕಾರದಿಂದ ದೊರೆಯುತ್ತಿದ್ದ ಹಲವು ಸೌಲಭ್ಯ, ಸಬ್ಸಿಡಿಯಂತಹ ನೆರವುಗಳು ನಿಂತಿಹೋಗುತ್ತಿದೆ. ಕೃಷಿಮಾಡುವ ರೈತರ ವೆಚ್ಚ ದುಪ್ಪಟ್ಟಾಗಿದೆ, ಆದರೆ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ನಷ್ಠ ಅನುಭವಿಸಿ ರೈತರ ಆತ್ಮಹತ್ಯೆಗೆ ಕಾರಣವಾಗಿದೆ, ರೈತರ ಎಲ್ಲಾ ಬೇಡಿಕೆಗಳನ್ನು ಇಡೇರಿಸುತ್ತೇವೆ ಎಂಬ ಭರವಸೆಗೊಂದಿಗೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರವೂಸಹ ರೈತ ವಿರೋಧಿನೀತಿ ಪಾಲಿಸಲು ಮುಂದಾಗಿದೆ ಎಂದರು.
ನಮ್ಮ ಪ್ರಮುಖ ಬೇಡಿಕೆಗಳಾದ ಕೇಂದ್ರ ಸರ್ಕಾರದ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ರಾಷ್ಟಿçÃಯ ಚೌಕಟ್ಟು ನೀತಿ ತಿರಸ್ಕರಿಸುವುದು, ಭೂ ತಿದ್ದುಪಡಿ ಕಾಯ್ದೆ,ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನುವಾರು ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸುವುದು, ಬೆಳಗಾವಿಯಲ್ಲಿ ಆರಂಭಿಸಿರುವ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿ ಎಪಿಎಂಸಿಗೆ ಸ್ಥಳಾಂತರಿಸಬೇಕು, ಕೃಷಿ ಪಂಪ್ ಸೆಟ್‌ಗೆ ಪ್ರೀಪೇಯ್ದ್ ವಿದ್ಯುತ್ ಮೀಟರ್ ಅಳವಡಿಸುವ ತೀರ್ಮಾನವನ್ನು ವಾಪಸ್ ಪಡೆಯುವುದು, ಬಗರ್‌ಹುಕುಂ ಹಾಗೂ ಅರಣ್ಯಭೂಮಿಯಲ್ಲಿ ಹಲವಾರು ವರ್ಷದಿಂದ ಉಳುಮೆ ಮಾಡಿ ಕೊಂಡ ಬಂದ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ನಿಲ್ಲಿಸಬೇಕು. ಅರ್ಹ ರೈತರಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು, ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಇನ್ನಿತರ ಶಿಕ್ಷಣ ಸೌಲಭ್ಯ ನೀಡಬೇಕು, ಸಂಘಟಿತ ವಲಯದ ಸಾಮಾಜಿಕ ಭದ್ರತಾ ಮಂಡಳಿಗೆ ೧೨೦೦ಕೋಟಿರೂ. ಅನುದಾನ ನೀಡಬೇಕು ಮುಂತಾದ ಬೇಡಿಕೆಯ ಮನವಿ ಪತ್ರವನ್ನು ತಹಸೀಲ್ದಾರ್‌ರಿಗೆ ಸಲ್ಲಿಸಿ ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ. ರೇವಣ್ಣ, ಎಸ್.ವಿರೂಪಾಕ್ಷಯ್ಯ, ತಾಲ್ಲೂಕು ಸಂಚಾಲಕರಾದ ಎಸ್.ಪುಟ್ಟಯ್ಯ, ಖಜಾಂಚಿ ನಟರಾಜು, ಮುಖಂಡರಾದ ಬಸವರಾಜು, ಶೇಖರ್‌ನಾಯ್ಕ, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ, ಕಾರ್ಯದರ್ಶಿ ಭಾಗ್ಯöಮ್ಮ ಸದಸ್ಯರಾದ ಶ್ರೀನಿವಾಸಮೂರ್ತಿ,ಭದ್ರಯ್ಯಮ ಕರಿಯಮ್ಮ, ರಾಧಾಮಣಿ, ಲೀಲಾವತಿ ಮುಂತಾದವರಿದ್ದರು.
(Visited 1 times, 1 visits today)