ತುರುವೇಕೆರೆ: ತಾಲ್ಲೂಕಿನ ಗೋಣಿ ತುಮಕೂರಿನಲ್ಲಿ ಗ್ರಾಮದೇವತೆಗಳಾದ ಶ್ರೀ ಗದ್ದೆ ಕೆಂಪಮ್ಮದೇವಿ ಮತ್ತು ಶ್ರೀ ಆದಿಶಕ್ತಿ ಅರಸಮ್ಮದೇವಿಯ ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ಕಾರ್ಯ ಗಳೊಂದಿಗೆ ವೈಭವಯುತವಾಗಿ ನಡೆಯಿತು.
ಗ್ರಾಮದಲ್ಲಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವದ ಸಂಭ್ರಮದ ಪರಾಕಾಷ್ಠೆ ಮೇಳೈಸಿದ್ದು, ದೇವರಿಗೆ ತಂಬಿಟ್ಟಿನ ಆರತಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಊರಿನ ಮಧ್ಯೆಭಾಗದಲ್ಲಿರುವ ದೇವರ ಗರ್ಭ ಗುಡಿಯಿಂದ ಕಳಸ ಮತ್ತು ಗೂಡೆಗಳೊಂದಿಗೆ ದೇವರನ್ನು ಅದ್ದೂರಿಯಾಗಿ ಊರಿನ ಹೆಬ್ಬಾಗಲಿನ ಮುಖೇನ ಅರಸಮ್ಮ ದೇವಾಲಯಕ್ಕೆ ವಿವಿಧ ವಾದ್ಯಗೋಷ್ಠಿಯೊಂದಿಗೆ ಕರೆದೊಯ್ಯಲಾಯಿತು.
ಅರಸಮ್ಮ ದೇವಾಲಯಕ್ಕೆ ತೆರಳಿ ಮೂರು ಸುತ್ತು ದೇವಾಲಯ ಪ್ರದಕ್ಷಿಣೆ ಹಾಕಿದ ನಂತರ ನೆರೆದಿದ್ದ ಊರಿನ ಗ್ರಾಮಸ್ಥರು, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಜಾತ್ರೆ ಯನ್ನು ಗ್ರಾಮಸ್ಥರು ಅದ್ದೂರಿಯಾಗಿ ಆಚರಿಸಿ ಅಮ್ಮನವರಿಗೆ ಸಕಲ ಸೇವೆಯನ್ನು ಸಲ್ಲಿಸಿ ಪುನೀತರಾದರು.
(Visited 1 times, 1 visits today)