ತುರುವೇಕೆರೆ: ರಾಜ್ಯ ಕಾಂಗ್ರೇಸ್ ಸರ್ಕಾರನ ದುರಾಡಳಿತ ಹಾಗೂ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದಿಂದ ಏ.೨೧ ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಸಮೀಪದ ತೋಟದ ಮನೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರ ಮುಖ್ಯ ಮಂತ್ರಿ ಸಿದ್ದರಾಮಯ್ಯ ತುಗಲಕ್ ದರ್ಬಾರ್ ಮಾಡುತ್ತಿದ್ದಾರೆ. ಇಂದು ವರ್ಗದ ಜನರನ್ನು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಇವರ ಸರ್ಕಾರದಿಂದ ಬಡವರು ಜೀವನ ನೆಡೆಸಲು ಸಾದ್ಯವಿಲ್ಲ ದಂತಾಗಿದೆ. ಪೇಟ್ರೋಲ್, ಹಾಲು, ಸ್ಟಾಪ್ ಪೇಪರ್, ಮದ್ಯ, ವಿದ್ಯುತ್, ಬಸ್ ಧರ ಸೇರಿ ಎಲ್ಲದರ ಮೇಲೆ ಟ್ಯಾಕ್ಸ್ ಹಾಕಿ ತಮ್ಮ ಗ್ರಾರಂಟಿಗಳಿಗೆ ಹಣ ನೀಡಲು ಜನರ ಹೊಟ್ಟೇ ಮೇಲೆ ಹೊಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರವನ್ನು ಶೇ ೪೦ ಕಮಿಷನ್ ಸರ್ಕಾರ ಎಂದು ಹೇಳುತ್ತಿದ್ದ ಕಾಂಗ್ರೇಸ್ ನವರು ಇಂದು ಶೇ ೬೦ ಕಮಿಷನ್ ಸರ್ಕಾರವಾಗಿದೆ ಎಂದು ಕಾಂಗ್ರೇಸ್ ಮುಖಂಡರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಪ್ರತಿಭಟನೆಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಸ್ವಾಮಿ ಆಗಮಿಸಲಿದ್ದು ಬಿಜೆಪಿಯಿಂದ ವಿರೋದ ಫಕ್ಷದ ನಾಯಕ ಆರ್. ಆಶೋಕ್ ಬರುವ ನಿರೀಕ್ಷೆ ಇದೆ. ಎನ್.ಡಿ.ಎ ಪಕ್ಷದ ಕಾರ್ಯಕರ್ತರು ಹೆಚ್ಚು ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಮುತ್ತಣ್ಣ, ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ವಪ್ನನಟೇಶ್, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ಅಂಜನ್ ಕುಮಾರ್, ಚಿದಾನಂದ್, ಪ್ರಭಾಕರ್, ಆಶಾರಾಜಶೇಖರ್ ಮುಖಂಡರಾದ ಕೊಂಡಜ್ಜಿವಿಶ್ವನಾಥ್, ಅರಳೀಕೆರೆಶಿವಯ್ಯ, ಮಾಚೇನಹಳ್ಳಿರಾಮಣ್ಣ, ಸೋಮಶೇಖರ್, ಸಿದ್ದಪ್ಪಾಜಿ, ಅನಿತಾ, ಬಸವರಾಜು, ಪ್ರಕಾಶ್, ಪ್ರಸಾದ್, ಸಿದ್ದಪ್ಪಾಜಿ, ಜಯಣ್ಣ, ಗೌರೀಶ, ಭರತ್, ರಕ್ಷೀತ್, ಮಹೇಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.