ತುರುವೇಕೆರೆ: ವಿದೇಶಿ ಸಂಸ್ಕೃತಿಯನ್ನು ಮಾರು ಹೋಗದೇ ನಮ್ಮ ದೇಶದ ಸಂಸ್ಕೃತಿಯನ್ನು ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಟಿ .ಕೃಷ್ಣಪ್ಪನವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಾಲೂಕಿನ ಗುಡ್ಡೇನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧುವಾರ ಏರ್ಪಡಿಸಿದ್ದ “ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ” ಜಾನಪದ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಾವಿರಾ ರು ವರ್ಷಗಳಿಂದ ಬಂದAತ ದೇಶದ ಸಂಸ್ಕೃತಿ ಮುಂದೆಯೂ ಇರಲಿದೆ. ಆದರೆ ಹಳ್ಳಿಗಾಡಿಗಿಂತ ಪಟ್ಟಣದಲ್ಲಿ ದೇಶೀ ಸಂಸ್ಕೃತಿ ನಶಿಸುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ನಮ್ಮ ತಾಲ್ಲೂಕಿನಲ್ಲೂ ಸಹಾ ಅತ್ಯುತ್ತಮ ಕಲಾವಿದರಿದ್ದು ಅಂತಹವನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ದೇಶೀ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನೀಡಲು ನಾವು ನೀವೆಲ್ಲರೂ ಕೈಜೋಡಿಸಬೇಕಾದ್ದು ನಮ್ಮೆಲ್ಲರ ಕರ್ತ ವ್ಯವಾಗಿದ್ದು ಇಂದು ಈ ಕಾಲೇಜಿನಲ್ಲಿ ಹಳ್ಳಿ ಗಾಡಿನ ಸೊಬಗನ್ನು ಬಿಂಬಿಸುವAತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯವೆಂದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೋ. ಈರಯ್ಯನವರು ಮಾತನಾಡಿ ನಮ್ಮ ಸಂಸ್ಕೃತಿಯನ್ನು ಪ್ರಾಚೀನ ದೇಶಗಳಲ್ಲಿ ಅನುಕರಣೆ ಮಾಡುತ್ತಿದ್ದು ಅಂತಹ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲಾ ಕೈಜೋಡಿಸೋಣ ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ನಮ್ಮ ಕಾಲೇಜಿನಲ್ಲಿ ಸೈಕಲ್ ಸ್ಟಾಂಡ್ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಇದೇ ಸಂಧರ್ಭದಲ್ಲಿ ಮಾನ್ಯ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಜಾನಪದ ಕ್ರೀಡೆಗಳಾದ ಮಡಕೆ ಒಡೆಯುವ ಸ್ಪರ್ಧೆ, ಲಗೋರಿ, ಹಗ್ಗ ಜಗ್ಗಾಟ ಸ್ಪರ್ಧೆಗಳಿಗೆ ಶಾಸಕರು ತಾವೇ ಚೆಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಸ್ವತಃ ಶಾಸಕರು ಸೇರಿದಂತೆ ವಿಧ್ಯಾರ್ಥಿಗಳು ಹಾಗೂ ಇತರರು ಜಾನಪದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಕಲ್ಕೆರೆ ವೃತ್ತದಿಂದ ಎತ್ತಿನ ಗಾಡಿಯಲ್ಲಿ ಶಾಸಕರು, ಆಕಾಶವಾಣಿ ಕಲಾವಿದೆ ಲೀಲಾವತಿ ಗಿಡ್ಡಯ್ಯ, ಹರಿಕಥಾ ವಿದ್ವಾಂಶ ಟಿ.ಕೆ.ಮುರುಳಿದಾಸ್, ಪ್ರಾಂಶುಪಾಲ ಪ್ರೋ|| ಈರಯ್ಯ ಅವರನ್ನು ವಿದ್ಯಾರ್ಥಿನಿಯರು ಪೂರ್ಣಕುಂಭ ಕಳಸದೊಂದಿಗೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಗುಡ್ಡೇನಹಳ್ಳಿ ಪುಟ್ಟೇ ಗೌಡ, ಪ್ರಾಧ್ಯಾಪಕರಾದ ವೇಕಟೇಶ್, ರಾಘವೇಂದ್ರ ಬಿ.ಎಸ್., ಮಂಜುನಾಥ್, ಪತ್ರಾಂಕಿತ ವ್ಯವಸ್ಥಾಪಕ ನರೇಂದ್ರಬಾಬು, ಪ್ರಾದ್ಯಾಪಕರಾದ ರಾಜೇಂದ್ರ.ಪಿ., ಕುಮಾರ್ ಪಿ.ಬಿ., ವಸಂತ್‌ಕುಮಾರ್, ಛಾಯಾದೇವಿ, ಆಯುಷಾಭಾನು, ಉಪನ್ಯಾಸಕರಾದ ಎಸ್.ಎಲ್.ವಿಜಯ್‌ಕುಮಾರ್, ಮಲ್ಲಿಕಾರ್ಜುನ್, ಹರೀಶ್‌ಕುಮಾರ್, ರಾಮಚಂದ್ರಯ್ಯ, ಮಂಜುನಾಥ್, ಪರಮೇಶ್ವರ್, ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ದೇಶೀ ಉಡುಗೆಯಲ್ಲಿ ಪಾಲ್ಗೋಂಡಿದ್ದರು.

(Visited 1 times, 1 visits today)