filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 39;

ಪಾವಗಡ: ತುಂಗಾ ಭದ್ರಾ ಕುಡಿಯುವ ನೀರಿನ ಯೋಜನೆ ಜಾರಿಯಾಗಲು ಶ್ರಮಿಸಿದ ಹೋರಾಟಗಾರರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದುಪಾವಗಡ ತಾಲೂಕು ಸಮಗ್ರ ನೀರು ಹೋರಾಟ ವೇದಿಕೆಯ ಅಧ್ಯಕ್ಷರಾದ ಶಿವಪ್ರಸಾದ್ ರವರು ತಿಳಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ನಂಜುAಡಪ್ಪ ವರದಿಯ ಪ್ರಕಾರ ಅತೀ ಹಿಂದುಳಿದ ಪ್ರದೇಶವಾಗಿದ್ದು, ಸದಾ ಬರಗಾಲಕ್ಕೆ ತುತ್ತಾಗುತಿತ್ತು ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಮತ್ತು ಕೆರೆಗಳನ್ನು ತುಂಬಿಸುವ ಯೋಜನೆಗಳ ಜಾರಿಗೆ ಸಂಬAಧಿಸಿದAತೆ ಹಲವಾರು ಹೋರಾಟಗಳು ನಡೆದಿವೆ, ಆದ್ದರಿಂದ ಹೋರಾಟಗಾರರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಹೊಸಪೇಟೆ ಜಲಾಶಯದಿಂದ ತಾಲೂಕಿಗೆ ಕುಡಿಯುವ ನೀರು ಹರಿದು ಬಂದಿದೆ ದಶಕಗಳ ಹೋರಾಟ ಯಶಸ್ವಿಯಾಗಿದೆ ಭದ್ರ ಮೇಲ್ದಂಡೆ ಯೋಜನೆ ಅನುಷ್ಠಾನವಾಗಿದ್ದು ಪ್ರಗತಿಪ ಪದದತ್ತ ಸಾಗಿದೆ ಎತ್ತಿನಹೊಳೆ ಯೋಜನೆ ಮಂಜೂರಾಗಿದೆ ಸರ್ಕಾರವು ಕಾಮಗಾರಿಗಳನ್ನು ಕೈಗೊತ್ತಿಕೊಂಡಿದ್ದು ಈ ಮೂರು ಯೋಜನೆಗಳು ತಾಲೂಕಿಗೆ ಮಂಜೂರಾಗಲು ಅನುಷ್ಠಾನಗೊಳ್ಳಲು ಹಲವಾರು ದಶಕಗಳಿಂದ ಅನೇಕ ಹೋರಾಟಗಳು ನಡೆದಿವೆ, ವಿವಿಧ ರೀತಿಯ ಪ್ರತಿಭಟನೆಗಳು ನಡೆದು ಅವು ವಿವಿಧ ರೂಪ ಪಡೆದುಕೊಂಡು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಯಶಸ್ವಿಯಾಗಿವೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹೋರಾಟಗಳಿಗೆ ಸಹಕಾರ ಸಿಕ್ಕಿದೆ ನೀರಿಗಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಸ್ಮರಿಸಿ ಅವರೆಲ್ಲರನ್ನು ಸತ್ಕರಿಸಿ ಸನ್ಮಾನಿಸಲಾಗುವುದು.
ಮುಖ್ಯವಾಗಿ ಈ ಭಾಗದಲ್ಲಿ ಫ್ಲೊರೈಡ್ ಸಮಸ್ಯೆಯಿಂದ ಜನ ಮೂಳೆ ಸವೆತ, ಅಂಗವೈಕಲ್ಯ, ಅಪೌಷ್ಠಿಕತೆ ಸೇರಿದಂತೆ ನಾನಾ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಆದ್ದರಿಂದ ಹಲವು ಹೋರಾಟಗಳು ನಡೆದವು ಆಗ ರಾಜ್ಯ ಸರ್ಕಾರ ಈ ಯೋಜನೆಯನ್ನು ಘೋಷಿಸಿತು
ಚುನಾಯಿತ ಪ್ರತಿನಿಧಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಹಕಾರ ಕೊಟ್ಟಿದ್ದಾರೆ, ಬರೀ ಸನ್ಮಾನ ಮಾಡಿ ಸುಮ್ಮನಾಗುವುದಲ್ಲ, ಮುಂದೆಯೂ ಹೋರಾಟ ಮಾಡಬೇಕಾಗಿದೆ, ಕುಡಿಯುವ ನೀರು ಬಂದಿದೆ, ಕೆರೆಗಳನ್ನು ತುಂಬಿಸುವ ಯೋಜನೆಗೆ ಮತ್ತಷ್ಟು ಹೋರಾಟ ಮಾಡಬೇಕಾಗಿದೆ ಜೊತೆಗೆ ಪ್ರಗತಿ ಪರ ಯುವಕರ ತಂಡವನ್ನೊAದು ಕಟ್ಟಬೇಕಾಗಿದೆ, ಪಾವಗಡದಿಂದ ಬೆಂಗಳೂರಿನ ವರೆಗೆ ಮಾಡಿದ ಪಾದಯಾತ್ರೆಯಲ್ಲಿ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಅವರೆಲ್ಲರೂ ಪಾದಯಾತ್ರೆಯಲ್ಲಿ ಹಲವು ಕಷ್ಟಗಳನ್ನು ಅನುಭವಿಸಿದರು ಆದರೂ ಪಾದಯಾತ್ರೆ ರಾಜಧಾನಿ ತಲುಪಿ ತಮ್ಮ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸಿ ನೀರು ತರುವಲ್ಲಿ ಯಶಸ್ವಿಯಾಗಿದ್ದೇವೆ,
ಈ ಸನ್ಮಾನ ಸಮಾರಂಭದ ನಂತರ ತಾಲೂಕಿನ ಅಬಿವೃದ್ಧಿಗಾಗಿ ಮತ್ತಷ್ಟು ಹೋರಾಟಗಳನ್ನು ಮಾಡಲು ಕಾರ್ಯತಂತ್ರವನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸೊಗಡು ವೆಂಕಟೇಶ್ ರವರು ಸುಮಾರು ವರ್ಷಗಳಿಂದ ಹಲವು ಹೋರಾಟಗಳ ಪ್ರತಿಫಲವಾಗಿ ಇಂದು ತುಂಗಾ ಭದ್ರಾ ಕುಡಿಯುವ ನೀರು ನಮ್ಮ ತಾಲೂಕಿಗೆ ತಲುಪಿವೆ, ಆದ್ದರಿಂದ ಪಾವಗಡ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆಯ ವತಿಯಿಂದ ಹೋರಾಟಗಾರರನ್ನು ಸನ್ಮಾನಿಸಲಾಗುವುದು ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮವಾಗಿದೆ, ಬಹಳ ಅದ್ದೂರಿಯಾಗಿ ಹಮ್ಮಿಕೊಂಡಿದ್ದು ಕಲಾ ತಂಡಗಳು ಭಾಗವಹಿಸಲಿವೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ನಂತರ ಮಾತನಾಡಿದ ಸೊಗಡು ವೆಂಕಟೇಶ್ ರವರು ಸುಮಾರು ವರ್ಷಗಳಿಂದ ಹಲವು ಹೋರಾಟಗಳ ಪ್ರತಿಫಲವಾಗಿ ಇಂದು ತುಂಗಾ ಭದ್ರಾ ಕುಡಿಯುವ ನೀರು ನಮ್ಮ ತಾಲೂಕಿಗೆ ತಲುಪಿವೆ, ಆದ್ದರಿಂದ ಪಾವಗಡ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆಯ ವತಿಯಿಂದ ಹೋರಾಟಗಾರರನ್ನು ಸನ್ಮಾನಿಸಲಾಗುವುದು ಇದು ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮವಾಗಿದೆ, ಬಹಳ ಅದ್ದೂರಿಯಾಗಿ ಹಮ್ಮಿಕೊಂಡಿದ್ದು ಕಲಾ ತಂಡಗಳು ಭಾಗವಹಿಸಲಿವೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ನರಸಿಂಹರೆಡ್ಡಿ, ಪೂಜಾರಪ್ಪ, ಪುರುಷೋತ್ತಮರೆಡ್ಡಿ, ಶಿವಕುಮಾರ್ ಸಾಕೇಲ್, ಜಿ.ಟಿ.ಗಿರೀಶ್ ರಾಜಶೇಖರ್ ಬ್ಯಾಡನೂರು ಶಿವು, ನಾಗೇಶ್, ಹನುಮಂತರಾಯಪ್ಪ, ಕೊತ್ತೂರು ಪ್ರಭಾಕರ್, ತಿಪ್ಪೇಸ್ವಾಮಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

(Visited 1 times, 1 visits today)