ಕೊರಟಗೆರೆ:-ಸೂರ್ಯಚಂದ್ರ ಇರುವ ತನಕ ಎತ್ತಿನಹೊಳೆ ಯೋಜನೆಯ ನೀರು ಕೊರಟಗೆರೆ ಕ್ಷೇತ್ರದ ೧೦೪ಕೆರೆಗಳಿಗೆ ಹರಿಯುತ್ತೇ. ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದ ರೈತರ ಮನೆಮಗ. ೨ವರ್ಷದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ೭೫೦ಕೋಟಿಗೂ ಅಧಿಕ ಅನುಧಾನ ಬಂದಿದೆ. ಮುಂದಿನ ೩ವರ್ಷದ ಅವಧಿಯಲ್ಲಿ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯ ಚಿತ್ರಣ ಬದಲಾಗುವ ರೀತಿ ಕೆಲಸ ಮಾಡ್ತೇನೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಕ್ಷೇತ್ರದಲ್ಲಿ ಜಿಲ್ಲಾಢಳಿತ ಮತ್ತು ಜಿಪಂಯಿAದ ಶನಿವಾರ ಏರ್ಪಡಿಸಲಾಗಿದ್ದ ೪೫೪ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರದ ಅತಿಸೂಕ್ಷö್ಮ ಗೃಹಇಲಾಖೆಗೆ ನನ್ನನ್ನು ನೇಮಿಸಿದ್ದಾರೆ. ಹಳ್ಳಿಗಳಿಗೆ ನಾನು ಬರುವುದಕ್ಕೆ ಆಗುತ್ತೀಲ್ಲ ಅದಕ್ಕಾಗಿ ನಾನು ಜನರಲ್ಲಿ ಕ್ಷಮೆ ಕೇಳ್ತಿನಿ. ನಾನು ನಿಮ್ಮ ಮನೆಯ ಮಗನಾಗಿ ಪ್ರತಿಯೊಂದು ಹಳ್ಳಿಯಲ್ಲಿಯು ಅಭಿವೃದ್ದಿಗೆ ಅನುಧಾನ ತರ್ತಿನಿ. ಗ್ಯಾರಂಟಿ ಯೋಜನೆಯ ಜೊತೆಯಲ್ಲೇ ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯು ಆಗಲಿದೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಯಾವತ್ತು ಸಹ ಭೂಟಾಟಿಕೆ ಮಾಡಿದ ವ್ಯಕ್ತಿ ನಾನಲ್ಲ. ಅಭಿವೃದ್ದಿಯೇ ನನ್ನನ್ನು ಟೀಕೆ ಮಾಡೋರಿಕೆ ನಾನು ನೀಡುವ ಉತ್ತರ. ನರೇಗಾ ಯೋಜನೆಯಡಿ ೩೦ಕೋಟಿ ವೆಚ್ಚದಲ್ಲಿ ೨೦೦ಕ್ಕೂ ಅಧಿಕ ಶಾಲೆಗಳ ಶೌಚಾಲಯ, ಆಟದ ಮೈದಾ, ಕೌಪೌಂಡು ಮತ್ತು ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರೈತರ ಬಹುದಿನದ ಬೇಡಿಕೆ ಈಡೇರಿದೆ..
ಕೊರಟಗೆರೆ ಕ್ಷೇತ್ರಕ್ಕೆ ನಾನು ೨೦೦೮ಕ್ಕೆ ಚುನಾವಣೆಗೆ ಬಂದಾಗ ಕೋಡ್ಲಹಳ್ಳಿಯ ರೈತರು ನನ್ನ ಮುಂದೆ ನೀರಾವರಿಯ ಸವಾಲು ಹಾಕಿದ್ರು. ನೀವು ಭರವಸೆ ನೀಡಬೇಡಿ ಜಾರಿಗೆ ತನ್ನಿ ನಿಮ್ಮ ಜೊತೆ ಇರ್ತೀವಿ ಅಂದ್ರು. ಅದಕ್ಕಾಗಿಯೇ ಎತ್ತಿನಹೊಳೆ ಯೋಜನೆಗೆ ೨೦೧೩ರಲ್ಲಿ ಅಡಿಗಲ್ಲು ಹಾಕಿದೆ. ಈಗ ನಾನು ರೈತರಿಗೆ ನೀಡಿದ ನೀರಾವರಿ ಭರವಸೆ ೨೦೨೬ಕ್ಕೆ ಈಡೇರುತ್ತೆ. ಸೂರ್ಯಚಂದ್ರ ಇರುವ ತನಕ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯುತ್ತೇ ಎಂದರು.
ಸಣ್ಣನೀರಾವರಿ ಸಚಿವ ಬೋಸರಾಜು ಮಾತನಾಡಿ ಡಾ.ಜಿ.ಪರಮೇಶ್ವರ ಬೇಡಿಕೆಯಂತೆ ತುಮಕೂರು ಜಿಲ್ಲೆಯ ೧೦ತಾಲೂಕಿನ ಅಂತರ್ಜಲ ಅಭಿವೃದ್ದಿಗೆ ನನ್ನ ಇಲಾಖೆಯಿಂದ ೬೭೦ಕೋಟಿ ನೀಡಲಾಗಿದೆ. ಈಗಾಗಲೇ ಎಸ್‌ಸಿಎಸ್‌ಟಿ ಕುಟುಂಬಗಳಿಗೆ ೫೨೬ಕೊಳವೆಬಾವಿ ಹಾಕಿಸಿ ಪಂಪುಮೋಟಾರ್ ವಿತರಣೆ ಮಾಡಿದ್ದೇವೆ. ಜಿಲ್ಲೆಯ ಅಭಿವೃದ್ದಿಗೆ ಗೃಹಸಚಿವರು ಏನೇ ಕೇಳಿದ್ರು ನಮ್ಮ ಸರಕಾರ ನೀಡಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಅಶೋಕ್, ಮಧುಗಿರಿ ಎಸಿ ಕೋಟ್ಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ, ಸಣ್ಣನೀರಾವರಿ ಎಇಇ ತಿಪ್ಪೇಸ್ವಾಮಿ, ಎಇ ರಮೇಶ್, ತಾಪಂ ಇಓ ಅಪೂರ್ವ, ಎಡಿಎ ಗುರುಮೂರ್ತಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ್, ತೀತಾ ಗ್ರಾಪಂ ಅಧ್ಯಕ್ಷೆ ಸುಮಂಗಳ, ಮುಖಂಡರಾದ ಮಹಾಲಿಂಗಪ್ಪ, ಎಂಎನ್‌ಜೆ ಮಂಜುನಾಥ, ಕುಮಾರ್ ಸೇರಿದಂತೆ ಇತರರು ಇದ್ದರು.
೪೫೪ಕೋಟಿಯ ೩೨೦೯ಕಾಮಗಾರಿ..
ಸಣ್ಣ ನೀರಾವರಿಯ ೬೨ಕೆರೆಗಳಿಗೆ ೨೮೮ಕೋಟಿ, ಪಿಡ್ಲೂö್ಯಡಿಯ ೩೪.೯೯ಕೋಟಿಯ ೧೨ಕಾಮಗಾರಿ, ಜಿಪಂಯ ೨೪.೧೨ಕೋಟಿಯ ೬೧ಕಾಮಗಾರಿ, ಗ್ರಾಮೀಣ ಇಲಾಖೆಯ ೩೪.೫೬ಕೋಟಿಯ ೫೩ಕಾಮಗಾರಿ, ಬೆಸ್ಕಾಂ ಇಲಾಖೆಯ ೧೯.೧೫ಕೋಟಿಯ ೨ಕಾಮಗಾರಿ, ಪಶು ಇಲಾಖೆಯ ೫೦ಲಕ್ಷದ ೧ಕಾಮಗಾರಿ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ೨೪.೫೦ಲಕ್ಷ ವೆಚ್ಚದ ೨ಕಾಮಗಾರಿಯ ಜೊತೆ ೬.೬೨ಕೋಟಿ ವೆಚ್ಚದಲ್ಲಿ ೧೩೦೨ಪಲಾನುಭವಿಗಳಿಗೆ ಸಲಕರಣೆ ಮತು ಸಲಕರಣೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿತರಣೆ ಮಾಡಿದರು.
ಸೇತುವೆ ಕಂ ಬ್ರೀಡ್ಜ್ಗೆ ೩೨ಕೋಟಿ..
ಸುವರ್ಣಮುಖಿ ನದಿಗೆ ಅಡ್ಡಲಾಗಿ ಬರಕ-೧.೯೬ಕೋಟಿ, ಬುಕ್ಕಾಪಟ್ಟಣ-೨.೫ಕೋಟಿ, ಜಗನ್ನಾಥಪುರ-೨.೫ಕೋಟಿ, ಹೋಲತಾಳು-೨.೫ಕೋಟಿ, ಲಂಕೇನಹಳ್ಳಿ-೪.೫ಕೋಟಿ, ಶಿರಿಗೋನಹಳ್ಳಿ-೫ಕೋಟಿ, ಶಕುನಿತಿಮ್ಮಹಳ್ಳಿ-೪.೫, ಹೊಳವನಹಳ್ಳಿ-೮ಕೋಟಿ, ಗೌರಗಾನಹಳ್ಳಿ-೪.೫, ನೇಗಲಾಲ-೨ಕೋಟಿ ವೆಚ್ಚದ ಸೇತುವೆ ಕಂ ಬ್ರೀಡ್ಜ್ ಕಾಮಗಾರಿಗೆ ಮಂಜೂರಾತಿ ದೊರತಿದೆ.
೨೩೦೦ಕೋಟಿ ವೆಚ್ಚದ ಜೆಜೆಎಂ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ತಲಾ ಶೇ.೫೦ರಷ್ಟು ಅನುಧಾನ ನೀಡುತ್ತೇ. ತುಮಕೂರು ಜಿಲ್ಲೆಯಲ್ಲಿ ಜೆಜೆಎಂ ಕಾಮಗಾರಿ ಕಳಫೆಯಾದ್ರೇ ಅಧಿಕಾರಿಗಳೇ ಅದಕ್ಕೆ ನೇರಹೊಣೆ ಮಾಡ್ತೇವೆ. ಮನೆಮನೆಗೆ ನೀರು ನೀಡೋದು ನಮ್ಮೇಲ್ಲರ ಜವಾಬ್ದಾರಿ ಅಭಿವೃದ್ದಿಯ ವಿಚಾರದಲ್ಲಿ ಯಾವುದೇ ರಾಜಿ ಬೇಡ.
> ಡಾ.ಜಿ.ಪರಮೇಶ್ವರ. ಗೃಹಸಚಿವ. ಕರ್ನಾಟಕ
ತುಮಕೂರು ಜಿಲ್ಲೆ ಮತ್ತು ಕೊರಟಗೆರೆ ಕ್ಷೇತ್ರ ಅಭಿವೃದ್ದಿಯ ದೂರದೃಷ್ಟಿ ಇರುವ ಜನಸೇವಕ ಡಾ.ಜಿ.ಪರಮೇಶ್ವರ. ಸಿಎಂ ಸಿದ್ದರಾಮಯ್ಯ ಜೊತೆ ಹತ್ತಿರದ ವಿಶ್ವಾಸವುಳ್ಳ ನಾಯಕ ಗೃಹಸಚಿವರು. ಸರಕಾರದ ಯಾವುದೇ ಇಲಾಖೆಗೆ ಗೃಹಸಚಿವರು ಒಂದು ಕರೆ ಮಾಡಿದ್ರೇ ಸಾಕು ಜನಸಾಮಾನ್ಯರ ಕೆಲಸ ಕ್ಷಣಾರ್ಧದಲ್ಲಿ ಆಗಲಿದೆ.
> ಬೋಸರಾಜು. ಸಣ್ಣನೀರಾವರಿ ಸಚಿವ