ತುಮಕೂರು: ಸ್ನಾತಕೋತ್ತರ ಹಂತದಲ್ಲಿ ತರಬೇತಿಯನ್ನು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು, ವೈಜ್ಞಾನಿಕ ಜ್ಞಾನ ಮತ್ತು ಕೌಶಲ್ಯದ ಆಧಾರದ ಮೇಲೆ ರೋಗಿಗಳೊಂದಿಗೆ ಸಹಾನುಭೂತಿ ವರ್ತಿಸುವುದು ಮತ್ತು ಕಾಳಜಿಯ ಮನೋಭಾವವನ್ನು ಕಂಡು ಕೊಳ್ಳುವ ನಿಟ್ಟಿನಲ್ಲಿ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ಶಾಸ್ತ್ರದ ವಿಭಾಗದ ವತಿಯಿಂದ ಒಂದು ದಿನದ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ನಗರದ ಅಗಳಕೋಟೆಯಲ್ಲಿರುವ ಆಸ್ಪತ್ರೆಯ ನಾಗಾರ್ಜುನ ಸಭಾಂಗಣದಲ್ಲಿ ಭಾರತೀಯ ಚರ್ಮರೋಗ ತಜ್ಞರ ಸಂಘ ಹಾಗೂ ಕರ್ನಾಟಕ ಕುಷ್ಠರೋಗ ತಜ್ಞರ ಸಂಘ ಮತ್ತು ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಚರ್ಮ ಶಾಸ್ತç ವಿಭಾಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಕಾರ್ಯಾಗಾರವನ್ನು ರಾಷ್ಟಿçÃಯ ಘಟಕದ ಅಧ್ಯಕ್ಷರಾದ ಡಾ ಮಂಜುನಾಥ್ ಶೆಣೈ ಉದ್ಘಾಟಿಸಿದರು.
ಚರ್ಮರೋಗ ಶಾಸ್ತ್ರದ ಪ್ರಥಮ ವರ್ಷದ ಸ್ನಾತಕೋತ್ತರ ಪದವೀಧರರಿಗಾಗಿ ಹಮ್ಮಿಕೊಳ್ಳಲಾಗಿರುವ ವಾರ್ಷಿಕ ಕಾರ್ಯಾ ಗಾರವು ಉತ್ತಮ ಮತ್ತು ಯಶಸ್ವಿ ಚರ್ಮರೋಗ ವೈದ್ಯರನ್ನು ವಿಕಸನಗೊಳಿಸಲು ಸಹಾಯ ಮಾಡುತ್ತದೆ. ಅನೇಕ ಹಿರಿಯ ಮತ್ತು ಅನುಭವಿ ಪ್ರಾಧ್ಯಾಪಕರು ನೀಡುವ ವಿವಿಧ ರೀತಿಯ ಮಾರ್ಗದರ್ಶನ ಭಾವಿ ವೈದ್ಯರ ಜ್ಞಾನವನ್ನು ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಅವರು ಆಶಿಸಿದರು.
ರಾಜ್ಯ ಘಟಕದ ಅಧ್ಯಕ್ಷರಾದ ಡಾ ಮಂಜುನಾಥ ಹುಲ್ಮನಿ ಮಾತನಾಡಿ, ಸಂಶೋಧನಾ ಚಟುವಟಿಕೆಗಳಂತಹ ಶೈಕ್ಷಣಿಕ ಚಟು ವಟಿಕೆಗಳನ್ನು ಸ್ನಾತಕೋತ್ತರ ಪ್ರಶಿಕ್ಷಣಾರ್ಥಿಗಳಿಗೆ ನಿಯಮಿತವಾಗಿ ನಡೆಸುವುದರಿಂದ ರೋಗಿಗಳಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ನೀಡಲು ಸಹಾಕವಾಗುತ್ತದೆ ಮತ್ತು ಸಾಮಾಜಿಕ ಕಳಂಕವನ್ನು ತಗ್ಗಿಸಲು ಭಾವಿ ವೈದ್ಯರು ಶ್ರಮಿಸಲು ಮುಂದಾಗುತ್ತಾರೆ ಎಂದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಜಿ.ಎನ್. ಪ್ರಭಾಕರ್ ಮಾತನಾಡಿ, ಅನೇಕ ಹೊಸ ನವೀನ ಚಿಕಿತ್ಸಾ ವಿಧಾನಗಳು ಮತ್ತು ತನಿಖಾ ವಿಧಾನಗಳನ್ನು ಸಂವಾದದಲ್ಲಿ ಪರಿಣಇತಿ ಹೊಂದಿದ ವೈದ್ಯರು ಪರಿಚಯಿಸುವುದರಿಂದ ವಿಸ್ತೃತ ಮತ್ತು ಆಧುನೀಕರಿಸಿದ ಡರ್ಮಟೊ ಶಸ್ತ್ರಚಿಕಿತ್ಸೆಗಳನ್ನು ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎಂದರು.
ಈ ಕಾರ್ಯಾಗಾರದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ ಮಹೇಶ್ ಕುಮಾರ್ ಸಿ, ಸಂಘಟನಾ ಅಧ್ಯಕ್ಷರು ಹಾಗೂ ಸಿದ್ದಾರ್ಥ ವೈದ್ಯಕೀಯ ಕಾಲೇಜಿನ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ ಶಿವಾನಂದ ಡಿ.ಆರ್., ಸಂಘಟನಾ ಕಾರ್ಯ ದರ್ಶಿ ಡಾ ವೀಣಾ, ಜಂಟಿ ಸಂಘಟನಾ ಸಮಿತಿಯ ಡಾ. ಪಿ. ಅಮೃತವಲ್ಲಿ ಮತ್ತು ಡಾ.ಪವಿತ್ರ ಜಿ.ಹಾಗೂ ವೈಜ್ಞಾನಿಕ ಸಮಿತಿಯ ಡಾ ಅಭಿಷೇಕ್ ಜಿ.ಎನ್. & ಡಾ.ಮೇಘನಾ ಬಿ.ವಿ. ಸೇರಿದಂತೆ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಆಧಾರಿತ ಶಿಕ್ಷಣವನ್ನು ಕಾರ್ಯಾಗಾರದಲ್ಲಿ ನೀಡಲಾ ಗುತ್ತದೆ. ಚರ್ಮರೋಗದ ಸಾಮಾನ್ಯ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಮತ್ತು ಅಪರೂಪದ ಕಾಯಿಲೆಗಳು ಅಥವಾ ಸಾಮಾನ್ಯ ಕಾಯಿಲೆಗಳ ತೊಡಕುಗಳು ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ಕುರಿತು ತಜ್ಞ ಚರ್ಮರೋಗ ವೈದ್ಯರು ಸಂವಾದ ನಡೆಸಿದರು. ತಜ್ಞರಿಗೆ ಉಲ್ಲೇಖಿಸಿದ ಜ್ಞಾನ ಮತ್ತು ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಸಹಕಾರಿಯಾದವು.
(Visited 1 times, 1 visits today)