ತುರುವೇಕೆರೆ: ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ಸಮುದಾಯ ವಿದ್ಯಾರ್ಥಿ ಧರಿಸಿದ್ದ ಯಜ್ಞೋಪವಿತ (ಜನಿವಾರ) ತೆಗಿಸಿದ್ದ ಘಟನೆಯನ್ನು ಖಂಡಿಸಿ ತಾಲೂಕು ಬ್ರಾಹ್ಮಣ ಸಮಾಜದವತಿಯಿಂದ ಉಪ ತಹಸೀಲ್ದಾರ್ ಸುಮತಿರವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬ್ರಾಹ್ಮಣ ಸಭಾದ ಮಾಜಿ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ಮಾತನಾಡಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹಾಗೂ ಬೀದರ್ ಕಾಲೇಜುಗಳಲ್ಲಿ ಸಿಇಟಿ ಪರೀಕ್ಷೆ ಪರಿಶೀಲನೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಧರಿಸಿದ್ದ ಜನಿವಾರವನ್ನು ಅಧಿಕಾರಿ ತೆಗಿಸಿ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ, ಕೂಡಲೇ ಸರ್ಕಾರ ಇಂತಹ ಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಆರ್. ಸತ್ಯನಾರಾಯಣ್ ಮಾತನಾಡಿ ಒಂದು ಸಮುದಾಯದಕ್ಕೆ ಅಗೌರವ ನೀಡಿರುವುದು ಸರಿಯಲ್ಲ ಇದರಿಂದ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದಂತೆ. ಮುಂದೆ ಇಂತಹ ಘಟನೆ ಮರುಕಳಿಸದಂತೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಬದಲ್ಲಿ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಶ್ರೀನಿವಾಸ್, ರಾಘವೇಂದ್ರ, ಕೃಷ್ಣಚೈತನ್ಯ, ರಾಮಚಂದ್ರು, ಯೋಗಾನಂದ್, ಲಕ್ಷಿö್ಮÃನಾರಾಯಣ್, ಗಿರೀಶ್ ಭಟ್ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
(Visited 1 times, 1 visits today)