ಚಿಕ್ಕನಾಯಕನಹಳ್ಳಿ: ಕಂದಾಯ ಇಲಾಖೆಯ ಅಧಿಕಾರಿಗಳೇ ನಕಲಿ ದಾಖಲೆಸೃಷ್ಠಿಸಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ದಾಖಲೆ ಮಾಡಿದ ಅಪರೂಪದ ಪ್ರಕರಣವನ್ನು ಕೆಆರ್‌ಎಸ್ ಪಕ್ಷದ ಮುಖಂಡರು ದಾಖಲೆ ಸಮೇತ ಬಯಲಿಗೆಳೆದಿದ್ದಾರೆ.
ಪಟ್ಟಣದ ತಾಲ್ಲೂಕು ಕಚೇರಿಗೆ ಕೆಆರ್‌ಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೆರಳಿ ಕಂದಾಯ ಇಲಾಖೆಯಲ್ಲಾಗುತ್ತಿರುವ ಭ್ರಷ್ಟಾಚಾರದ ಪ್ರಕರಣಗಳ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಖಂಡ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ತಾಲ್ಲೂಕಿನಲ್ಲಿ ಈಗಾಗಲೇ ಅಧಿಕಾರಿಶಾಹಿ ಆಡಳಿತದಿಂದಾಗಿ ಮುಗ್ದ ಜನರ ಭೂಧಾಖಲೆಗಳು ನಕಲಿ ದಾಖಲೆಗಳ ಮೂಲಕ ಪರಭಾರೆಯಾಗಿ ಸುದ್ದಿಯಾದ ನಂತರ ಕೆಲ ಅಧಿಕಾರಿಗಳ ತಲೆದಂಡವಾದರೂ ಇನ್ನೂ ಕಂದಾಯ ಇಲಾಖೆಯ ಅಧಿಕಾರಿವರ್ಗ ಬುದ್ದಿಕಲಿತಿಲ್ಲ, ತಾಲ್ಲೂಕಿನ ಹಂದನಕೆರೆ ಹೋಬಳಿ ಸಬ್ಬೇನಹಳ್ಳಿ ಗ್ರಾಮದ ಸ.ನಂ.೩೪ರಲ್ಲಿ ರಾಜಪ್ರಮುಖ ಮೈಸೂರು ಹೆಸರಿಗೆ ೩೬ ಗುಂಟೆ ಜಮೀನನ್ನು ವ್ಯಕ್ತಿಯೊಬ್ಬರು ದಾನವಾಗಿ ನೀಡಿದ್ದರು. ಸದರಿ ಜಮೀನಿನ ದಾಖಲೆಯನ್ನು ಇಲ್ಲಿನ ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಖ್ಖಿಗರು ಸೇರಿ ನಕಲಿ ಭೂ ದಾಖಲೆ ಸೃಷ್ಠಿಸಿ ಬೇರೊಬ್ಬರ ಹೆಸರಿಗೆ ಖಾತೆ ಮಾಡಿದ್ದಾರೆ ಎಂದು ಎಲ್ಲಾ ಧಾಖಲೆಗಳನ್ನು ಪ್ರದರ್ಶಿಸಿದರು. ಇಂತಹ ಅಧಿಕಾರಿಗಳ ಕೃತ್ಯಗಳಿಂದ ತಾಲ್ಲೂಕಿನ ಜನತೆ ಕಂಗಾಲಾಗಿದ್ದಾರೆ. ಆಡಳಿತ ವ್ಯವಸ್ಥೆ ಈ ಮಟ್ಟದಲ್ಲಿ ಭ್ರಷ್ಟತೆಗೆ ಇಳಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಯಾರನ್ನು ನಂಬಬೇಕೆAಬ ಬಗ್ಗೆ ಅನುಮಾನ ಮೂಡಿದೆ ಹಾಗೂ ನಾಚಿಕೆಯಿಲ್ಲದೆ ಇಂತಹ ಕೃತ್ಯಮಾಡಿದ ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ತೀಕ್ಷ÷್ಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಗ್ರೇಡ್ -೨ ತಹಸೀಲ್ದಾರ್ ಕೀರ್ತಿ ಮಾತನಾಡಿ ಇದೊಂದು ಗಂಭೀರ ಪ್ರಕರಣವಾಗಿದ್ದು ಖುದ್ದಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲಾಗುವುದು ಹಾಗೂ ದಾಖಲೆಗಳನ್ನು ಸರಿಪಡಿಸಲಾಗುವುದೆಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಕುಮಾರ್, ಸಬ್ಬೇನಹಳ್ಳಿ ಶ್ರೀನಿವಾಸ್, ಪುಟ್ಟರಾಜ್, ಮುಂತಾದವರಿದ್ದರು.
ಚಿತ್ರ:೨೨ಸಿಎನ್‌ಎಚ್ ೨ಇಪಿ. ಶೀರ್ಷಿಕೆ: ಚಿಕ್ಕನಾಯಕನಹಳ್ಳಿ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರು ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಂದ ನಕಲಿ ಭೂದಾಖಲೆ ಸೃಷ್ಠಿಸಿ ಸರ್ಕಾರಿ ಜಾಗವನ್ನು ಬೇರೊಬ್ಬರಿಗೆ ದಾಖಲೆ ಮಾಡಿದಬಗ್ಗೆ ದಾಖಲೆ ನೀಡಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ
(Visited 1 times, 1 visits today)