ತುಮಕೂರು: ಹಾಸ್ಟಲ್, ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆಗುತ್ತಿಗೆ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆತಪ್ಪಿಸುವ ನಿಟ್ಟಿನಲ್ಲಿ ಬೀದರ್ ಮಾದರಿಯಲ್ಲಿ ಸೋಸೈಟಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅಗತ್ಯಕ್ರಮ ಕೈಗೊಳ್ಳಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದವತಿಯಿAದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ,ತುಮಕೂರುಜಿಲ್ಲಾಧ್ಯಕ್ಷರವಿಕುಮಾರ್‌ಅವರ ನೇತೃತ್ವದಲ್ಲಿ ನೂರಾರು ನೌಕರರು ಜಿಲ್ಲಾಧಿಕಾರಿಗಳ ಕಚೇರಿಎದುರು ಪ್ರತಿಭಟನೆ ನಡೆಸಿ,ಈ ಸಂಬAಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದಕರ್ನಾಟಕರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತೇಗೌಡ,ಮೊದಲಿಗೆ ನಾವು ಸರಕಾರಕ್ಕೆಅಭಿನಂದನೆ ಸಲ್ಲಿಸುತ್ತೇವೆ.ಹೊರಗುತ್ತಿಗೆ ನೌಕರರಿಗೆ ಕನಿಷ್ಠ ೩೧ ಸಾವಿರರೂ ವೇತನ ನೀಡಬೇಕೆಂದು ಸರಕಾರದ ಮೇಲೆ ಒತ್ತಡತಂದಿದ್ದು, ಸರಕಾರ ಏ.೧೧ ರಂದು ಮಾಸಿಕ ೨೫.೭೧೪ ರೂಗಳಿಗೆ ಕನಿಷ್ಠ ವೇತನ ನಿಗದಿ ಪಡಿಸಿದೆ.ಇದಕ್ಕಾಗಿ ಸರಕಾರದ ಮುಖ್ಯಮಂತ್ರಿಗಳು,ಉಪಮುಖ್ಯ ಮಂತ್ರಿಗಳು ,ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಿಗೆ ಸಂಘ ಅಭಿನಂದನೆ ಸಲ್ಲಿಸುತ್ತದೆ.ಸರಕಾರದ ಮುಂದೆ ಮಾಸಿಕ ೩೧ ಸಾವಿರ ಕನಿಷ್ಠ ವೇತನದಜೊತೆಗೆ,ಎಲ್ಲಾ ಹೊರಗುತ್ತಿಗೆ ನೌಕರರನ್ನುಖಾಯಂ ಮಾಡಿ, ಸೇವಾ ಭದ್ರತೆಒದಗಿಸಬೇಕು. ನಿವೃತ್ತಿಯವರೆಗೂಅವರನ್ನು ಕೆಲಸದಿಂದ ಬಿಡುಗಡೆ ಮಾಡಬಾರದುಎಂಬುದು ನಮ್ಮಗಳ ಬೇಡಿಕೆಯಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮಗಳ ಒತ್ತಾಯವಾಗಿದೆಎಂದರು.
ಕರ್ನಾಟಕರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಜಿಲ್ಲಾಅಧ್ಯಕ್ಷರವಿಕುಮಾರ್ ಮಾತನಾಡಿ,ಸರಕಾರ ನಮ್ಮ ಮನವಿಗೆ ಸ್ಪಂದಿಸಿ,ಹೊರಗುತ್ತಿಗೆ ನೌಕರರಿಗೆ ೨೫,೪೧೭ ರೂ ನಿಗಧಿ ಮಾಡಿರುವುದು ಸ್ವಾತಾರ್ಹ.ಆದರೆ ಬೀದರ್ ಮಾದರಿಯ ಸೋಸೈಟಿ ಮಾಡುವಂತೆ ಕಳೆದ ೬ ತಿಂಗಳ ಹಿಂದೆಯೇ ಸರಕಾರಆದೇಶ ಮಾಡಿದ್ದರೂ ಜಿಲ್ಲಾಡಳಿತ ಇದುವರೆಗೂಯಾವುದೇಕ್ರಮಕೈಗೊಂಡಿಲ್ಲ.ಹೊರಗುತ್ತಿಗೆ ನೌಕರರ ಜಿಲ್ಲಾಡಳಿತದ ಕಣ್ಣಿಗೆಕಾಣುತ್ತಿಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದೆ.ಆರು ತಿಂಗಳಲ್ಲಿ ಮೂರು ಬಾರಿ ಮನವಿ ಕೊಟ್ಟಿದ್ದರೂ ಸ್ಪಂದಿಸಿಲ್ಲ. ನಾವು ಕೊಟ್ಟ ಮನವಿಗಳನ್ನು ಎಲ್ಲಿಗೆ ಹಾಕುತ್ತಿದ್ದಾರೆಎಂಬುದೇ ತಿಳಿಯದಾಗಿದೆ.ಹಾಸ್ಟಲ್‌ಗಳಲ್ಲಿ ಹೊರಗುತ್ತಿಗೆಯಲ್ಲಿ ಲಕ್ಷಾಂತರಜನರುದುಡಿಯುತ್ತಿದ್ದಾರೆ.ಬೇರೆ ಇಲಾಖೆಗಳ ಕಡೆಗೆ ಗಮನ ಹರಿಸಿ,ಖಾಯಂ ಮಾಡಲಾಗುತ್ತಿದೆ.ನೀಡುವ ಹಿರಿಯ ಅಧಿಕಾರಿಗಳು ಹಾಸ್ಟಲ್ ಹೊರಗುತ್ತಿಗೆ ನೌಕರರನ್ನುಕಡೆಗಣಿಸುತ್ತಿದ್ದಾರೆ.ಬೀದರ ಮಾದರಿ ಸೋಸೈಟಿ ನಿರ್ಮಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಈ ಸಂಬAಧ ಮನವಿಯನ್ನುಜಿಲ್ಲಾಕಾಮಿ ðಕಅಧಿಕಾರಿತೇಜಾ ವತಿ ಹಾಗೂ ಜಿಲ್ಲಾಧಿ ಕಾರಿಗಳ ಕಚೇರಿ ಸಹಾಯ ಕರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಎನ್.ಎಸ್, ಮುಖಂಡರಾದ ಹೇಮಂತ್, ಮಂಜುನಾಥ್, ಆನಂದ್, ಶಿವಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಜಿ. ಹೆಚ್.ರವಿಕುಮಾರ್, ಮಾರುತಿ.ಜಿ.ಹೆಚ್, ಗಂಗ ನರಸಯ್ಯ,ಶಿವಲಿಂಗಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.