ತುರುವೇಕೆರೆ : ತಾಲ್ಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಸಮೀಪ ರೈಲ್ವೆ ಹಳಿ ದಾಟುವಾಗ ಚಿರತೆ ಚಲಿಸುವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಎರಡು ವರ್ಷದ ಹೆಣ್ಣು ಚಿರತೆ ಸುಮಾರು ೫ ಗಂಟೆಯ ಸಮಯದಲ್ಲಿ ಮೈಸೆಂಕೋ ಫ್ಯಾಕ್ಟರಿ ಎದುರಿನ ರೈಲ್ವೆ ಹಳಿ ದಾಟುವಾಗ ಆಕಸ್ಮಿಕವಾಗಿ ಚಿರತೆ ರೈಲುಗಾಲಿಗೆ ಸಿಲುಕಿದೆ ಪರಿಣಾಮ ಅದರ ತಲೆ ಮತ್ತು ಮುಂಗಾಲು ಕತ್ತರಿಸಿದ ರೀತಿ ಸಾವನ್ನಪ್ಪಿದೆ.
ಬೆಳಗ್ಗೆ ಎಂದಿನAತೆ ಲೈನ್ ಮೆನ್ ಗಳು ರೈಲ್ವೆ ಹಳಿ ಪರೀಕ್ಷಿಸುವಾಗ ಚಿರತೆ ರೈಲಿಗೆ ಸಿಕ್ಕಿ ಅಸುನೀಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಆರ್.ಎಫ್.ಒ ಅರುಣ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಅರಣ್ಯ ಗಸ್ತು ಅಧಿಕಾರಿ ರೂಪೇಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಂತರ ಆರ್.ಎಫ್.ಒರವರು ದಂಡಿನಶಿವರ ಪಶು ವೈದ್ಯಾಧಿಕಾರಿ ಡಾ.ಮಂಜುಶ್ರೀ ಮತ್ತು ಡಾ.ಪುಟ್ಟರಾಜುರವರನ್ನು ಕರೆಯಿಸಿ ಚಿರತೆ ಮೃತಪಟ್ಟ ಸ್ಥಳದಲ್ಲೇ ಮರಣೊತ್ತರ ಪರೀಕ್ಷೆ ನಂತರ ಸುಟ್ಟು ಹಾಕಲಾಗಿತೆಂದು ಅರಣ್ಯಾಧಿಕಾರಿಗಳು ತಿಳಿದರು.

(Visited 1 times, 1 visits today)