ತುಮಕೂರು: ವರನಟ ಡಾ.ರಾಜ್‌ಕುಮಾರ್ ಅವರು ಈ ನಾಡಿನ ಹೆಮ್ಮೆ. ನಮ್ಮ ಸಾಂಸ್ಕೃತಿಕ ನಾಯಕ. ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗೆ ಸಂಕಲ್ಪ ಮಾಡುವ ದಿನವಾಗಿ ಅವರ ಜನ್ಮದಿನವನ್ನು ಕನ್ನಡಿಗರು ಆಚರಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಗುರುವಾರ ನಗರದ ಹೊರಪೇಟೆ ರಸ್ತೆಯ ಡಾ. ರಾಜ್‌ಕುಮಾರ್ ಹೋಟೆಲ್ ಎಂದೇ ಹೆಸರಾದ ಹರಳೂರು ಶಿವಕುಮಾರ್ ಹೋಟೆಲ್ ಬಳಗದಿಂದ ನಡೆದ ಡಾ.ರಾಜ್‌ಕುಮಾರ್ ಅವರ ೯೭ನೇ ಹುಟ್ಟು ಹಬ್ಬದ ಅಂಗವಾಗಿ ಡಾ.ರಾಜ್ ಅವರ ಬೆಳ್ಳಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದ ಶಾಸಕರು, ಹರಳೂರು ಶಿವಕುಮಾರ್ ಅವರು ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾ ನಿಯಾಗಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅವರು ನಿಧನರಾದ ನಂತರ ಶಿವಕುಮಾರ್ ಅವರ ಪುತ್ರ ಮನು ಅವರು ಆ ಪರಂಪರೆಯನ್ನು ಮುಂದುವರೆಸಿಕೊAಡು ಬರು ತ್ತಿದ್ದಾರೆ ಎಂದು ಶ್ಲಾಘಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಶ್ರೇಷ್ಠ ಕಲಾವಿದ ಅವರು ಅಭಿನಯಿಸಿದ್ದ ಪೌರಾಣಿಕ ಪಾತ್ರಗಳನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಅಭಿನಯಿಸುವ ಕಲಾವಿದ ಇನ್ನೊಬ್ಬರಿಲ್ಲ. ಇಂತಹ ಮಹಾನ್ ಕಲಾವಿದ, ಮಾನವೀಯ ವ್ಯಕ್ತಿ ಪಡೆದದ್ದು ನಮ್ಮೆಲ್ಲರ ಭಾಗ್ಯ. ಡಾ.ರಾಜ್‌ಕುಮಾರ್ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ಕೃಷಿಯ ಮಹತ್ವ ತಿಳಿದು ಅನೇಕ ಯುವಕರು ಕೃಷಿಗೆ ಮರಳಲು ಸಿನಿಮಾ ಪ್ರೇರಣೆಯಾಗಿತ್ತು. ಇಂತಹ ಹಲವಾರು ಪರಿವರ್ತನೆಗಳಿಗೆ ಡಾ.ರಾಜ್ ಚಿತ್ರಗಳ ಪಾತ್ರಗಳು ಕಾರಣವಾಗಿವೆ ಎಂದರು.
ಮುಖಂಡ ಬಂಬೂ ಮೋಹನ್ ಅವರು, ಡಾ.ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಸರ್ಕಾರ ಕೇವಲ ಸಾಂಕೇತಿಕವಾಗಿ ಆಚರಿಸದೆ, ನಾಡಿನಲ್ಲಿ ಸಾಂಸ್ಕೃತಿಕ ಹಬ್ಬವಾಗಿ ಆಚರಣೆ ಮಾಡಬೇಕು ಎಂದರು. ಮನು ಹರಳೂರು ಮಾತನಾಡಿದರು.
ಮುಖಂಡರಾದ ದಯಾನಂದ್, ಧನುಷ್, ಎನ್.ಮಂಜುನಾಥ್, ರಾಜಣ್ಣ, ಲಕ್ಚಿö್ಮÃನಾರಾಯಣ, ಪ್ರತಾಪ್, ರವಿ ಮಲ್ಲಣ್ಣ, ಡಿ.ರಾಜ್‌ಕುಮಾರ್, ಆಟೋ ಯಡಿಯೂರಪ್ಪ, ಸಾಗರ್ ಭಾಗವಹಿಸಿದ್ದರು.

(Visited 1 times, 1 visits today)