ಪಾವಗಡ: ಕಾಶ್ಮೀರದ ಪಹಲ್ಕಾಮ್ ನಲ್ಲಿ ಮೂವರು ಕನ್ನಡಿಗರು ಸೇರಿದಂತೆ ೨೬ ಜನರನ್ನು ಬರ್ಬರವಾಗಿ ಹತ್ಯೆ ಮಾಡಿದ ಪಾಕಿಸ್ತಾನ ಬೆಂಬಲಿತ ಉಗ್ರರು ಅದೇ ರೀತಿ ಬುದ್ಧಿ ಕಲಸ ಬೇಕು ಇಡೀ ಪಾವಗಡ ಮುಸ್ಲಿಂ ಸಮುದಾಯದವರು ಖಂಡಿಸಿ ದಾಳಿಗೆ ಕಾರಣರಾದ ಉಗ್ರರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಪಣತೊಟ್ಟಿಲು ಒಂದಾಗಬೇಕು ಎಂದರು.

ಇAತಹ ದಾಳಿಗಳಿಗೆ ಕುಮ್ಮಕ್ಕು ನೀಡಿರುವ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು.

ಇದೇ ಸಂದರ್ಭದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ದೇಶದ ೨೬ ಜನರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲೂಕು ಕಚೇರಿ ಮುಂದೆ ಮುಸ್ಲಿಂ ಸಮುದಾಯದವರು ಎರಡು ನಿಮಿಷ ಮೌನ ಚರಣೆ ನಿರ್ವಹಿಸಿ ತದನಂತರ ತಹಸಿಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು.ಇದೇ ವೇಳೆ ಪುರಸಭೆ ಸದಸ್ಯ ಮಹಮದ್ ಇಮ್ರಾನ್ ಮಾತನಾಡಿ ಭಾರತ ಶಾಂತಿಯ ತೋಟ ಇದ್ದಂತೆ ಇಲ್ಲಿ ಎಲ್ಲಾರೂ ಒಗ್ಗೂಟದಿಂದ ಜೀವನ ಮಾಡುತ್ತಿದ್ದೇವೆ ಹಾಗೂ ನೆಮ್ಮದಿಯ ಜೀವನ ಮಾಡುತ್ತಿದ್ದೇವೆ. ಇಂತಹದರಲ್ಲಿ ಕಿಡಿಗೇಡಿಗಳು ಇಂತಹ ಕೃತಗಳು ಮಾಡಿ ನಮ್ಮಲ್ಲಿ ನಮ್ಮಗೆ ಶತ್ರುತ್ವ ಬೆಳೆಸುವಂತಹ ಕೆಲಸ ಮಾಡುತ್ತಿದೆ. ಭಾರತೀಯರಿ ನೆಮ್ಮದಿಯ ಜೀವನಕ್ಕೆ ಪದೇಪದೇ ಇಂತಹ ಕೃತ್ಯಗಳು ಮಾಡಿ ಅಮಾಯಕರ ಬಲಿ ಪಡೆಯುತ್ತಿದ್ದಾರೆ ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳಿಗೆ ನಾವು ಸಹಿಸುವುದಿಲ್ಲ ಎಂದರು.

ಇದೇ ವೇಳೆ ಜಾಮೀಯ ಮಸೀದಿಯ ನಿರ್ದೇಶಕರಾದ ಆರ್ ಟಿ ಖಾನ್ ಮಾತನಾಡಿ ದೇಶದಲ್ಲಿ ಅನ್ಯೂನ್ಯವಾಗಿ ಜೀವನ ಸಾಗಿಸಿಕೊಂಡು ಬರುತ್ತಿರುವ ನಮ್ಮ ಭಾರತೀಯರಿಗೆ ಇಂತಹ ಕೃತ್ಯಗಳಿಂದ ಎಲ್ಲಾ ಸಮುದಾಯದವರಿಗೆ ತೊಂದರೆ ಉಂಟಾಗುತ್ತಿದೆ ಯಾವುದೇ ಕಾರಣಕ್ಕೂ ಕೃತ್ಯಕ್ಕೆ ಭಾಗಿಯಂತಹ ಉಗ್ರರನ್ನು ಅದೇ ರೀತಿ ಸದೆ ಬಡೆಯಬೇಕು ಎಂಬುದಾಗಿ ಈ ವೇಳೆ ತಿಳಿಸಿದರು.

ಈ ವೇಳೆ ಜಾಮಿಯ ಮಸೀದಿಯ ನಿರ್ದೇಶಕ ಮಾಜಿ ಪುರಸಭೆ ಸದಸ್ಯ ರಿಜ್ವಾನ್ ಮಾತನಾಡಿದರು. ಜಾಮಿಯ ಮಸೀದಿಯ ಪೇಶಮಾಂ ಮುಬಾರಕ್ ಮಾತನಾಡಿದರು. ಜಮಿ ಮಸೀದಿಯ ನಿರ್ದೇಶಕ ಶಾಬಾಬು ಮಾತನಾಡಿದರು. ಶಿರಾ ರಸ್ತೆ ಮಸೀದಿಯ ಮುಖಂಡ ಇದಾಯತ್ ಮಾತನಾಡಿದರು.
ಈ ವೇಳೆ ಜಮೆ ಮಸೀದಿಯ ಮುತವಲ್ಲಿ ಲತೀಫ್ ಸಾಬ್. ಅನ್ವರ್ ಸಾಬ್. ಮುಖಂಡ ಯುನೂಸ್. ಎಂ.ಎ.ಆರ್. ರಿಯಾಜ್. ಸಿಕಂದರ್. ಹೋಟೆಲ್ ಶಫೀ. ಇತರೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

(Visited 1 times, 1 visits today)