ಶಿರಾ: ವೃದ್ಧರ ಕಣ್ಣುಗಳಿಗೆ ನವ ಚೈತನ್ಯದ ಬೆಳಕು ನೀಡುವುದೇ ನಮ್ಮ ಸಂಕಲ್ಪ, ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ಗ್ರಾಮದಲ್ಲಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರ ಆಯೋಜನೆ ಮಾಡಿ ಬಡ ಕುಟುಂಬಗಳ ವೃದ್ಧರ ಕಣ್ಣಿಗೆ ಬೆಳಕನ್ನು ನೀಡುವ ಸೇವೆ ಹೆಚ್ಚು ಹರ್ಷ ನೀಡುತ್ತದೆ ಎಂದು ಜೆಡಿಎಸ್ ಹಿರಿಯ ಮುಖಂಡ ಆರ್.ಉಗ್ರೇಶ್ ಹೇಳಿದರು.
ಶಿರಾ ತಾಲೂಕಿನ ಲಕ್ಕನಹಳ್ಳಿ ಅರುಣೋದಯ ವಿದ್ಯಾ ಸಂಸ್ಥೆ ಶಿರಾ ಲಯನ್ಸ್ ಕ್ಲಬ್ ಹಾಗೂ ಆರ್. ಉಗ್ರೇಶ್ ಅಭಿಮಾನಿ ಬಳಗ ಸಹಯೋಗದೊಂದಿಗೆ ಬುಧವಾರ ನಡೆದ ಉಚಿತ ಕಣ್ಣಿನ ತಪಾ ಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮತ್ತೊಬ್ಬರ ಕಣ್ಣಿನ ದೃಷ್ಟಿ ಪ್ರಜ್ವಲಿಸುವಂತೆ ಮಾಡಿ ಕಣ್ಣುಗಳನ್ನು ಕಾಣುವಂತೆ ಮಾಡುವುದು ಶ್ರೇಷ್ಠ ಸೇವೆ. ಶಿರಾ ತಾಲೂಕಿನ ಸಾವಿರಾರು ಜನರಿಗೆ ನೀಡುವ ಇಂತಹ ಸೇವೆ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿವೆ. ಕಣ್ಣಿಗೆ ಬೆಳಕು ನೀಡುವ ಸೇವೆ ನನಗೆ ಹೆಚ್ಚು ತೃಪ್ತಿ ನೀಡುತ್ತದೆ ಎಂದರು.
ಅರುಣೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ. ಮಂಜುನಾಥ್ ಮಾತನಾಡಿ ಕಣ್ಣಿನ ಶಸ್ತ್ರಚಿಕಿತ್ಸೆ ಶಿಬಿರಗಳು ತಾಲೂಕಿನಲ್ಲಿ ಅತ್ಯವಶ್ಯ ಕವಾಗಿ ಬೇಕಿತ್ತು. ಆರ್ಥಿಕ ತೊಂದರೆ ಅನುಭವಿಸುತ್ತಿರುವ ವೃದ್ಧರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಉಚಿತವಾಗಿ ಮಾಡಿ, ಮತ್ತೆ ಮರಳಿ ಸ್ವಗ್ರಾಮಕ್ಕೆ ಕಳಿಸುವುದು ಸೇವೆಗಳಲ್ಲಿ ಶ್ರೇಷ್ಠ ಸೇವೆ. ಆರ್. ಉಗ್ರೇಶ್ ರವರ ಇಂತಹ ಸೇವೆ ಜನ ಮೆಚ್ಚುವಂತಹ ದು ಎಂದರು.
ಶಿರಾ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಮಂಜುನಾಥ್ ಗೌಡ ಲಯನ್ಸ್ ಕ್ಲಬ್ ಮತ್ತು ಆರ್. ಉಗ್ರೇಶ್ ಅಭಿಮಾನಿಗಳ ಸಹಕಾರ ದೊಂದಿಗೆ ಹಾಗೂ ನೇತ್ರ ದೀಪ ಕಣ್ಣಿನ ಆಸ್ಪತ್ರೆ ಸಹಕಾರದೊಂದಿಗೆ ಪ್ರತಿವಾರ ಶಿರಾ ತಾಲೂಕಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಏರ್ಪಡಿಸುತ್ತೇವೆ. ಇಂತಹ ಸಂದರ್ಭದಲ್ಲಿ ಆಯ್ಕೆಯಾಗುವ ಫಲಾ ನುಭವಿಗಳಿಗೆ ತುಮಕೂರಿನಲ್ಲಿ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿ, ಚಿಕಿತ್ಸೆ ನಂತರ ಮತ್ತೆ ಆಯಾ ಗ್ರಾಮಗಳಿಗೆ ಕಳುಹಿಸುವ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಇಂತಹ ಸದಾವಕಾಶವನ್ನು ಕಣ್ಣಿನ ಚಿಕಿತ್ಸೆ ಅಗತ್ಯವಿರುವ ಫಲಾನುಭವಿಗಳು ಬಳಸಿ ಕೊಳ್ಳ ಬೇಕೆಂದರು.
ಮುಖAಡ ರಾಜಣ್ಣ,ಕುಂಚಿಟಿಗ ಸಂಘದ ನಿರ್ದೇಶಕ ಬಪ್ಪಣ್ಣ ,ಚಿರತಹಳ್ಳಿ ಬಸವರಾಜು, ಶಿಕ್ಷಕ ಜಯಣ್ಣ, ಡಾ.ಈರಣ್ಣ, ರೇಣು ಕಮ್ಮ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ವೆಂಕಟರಮಣ ಗೌಡ ,ಶ್ರೀಧರ್, ಜಗದೀಶ್, ಯಶಸ್ವಿನಿ, ವನಿತಾ, ರಂಗನಾಥ್, ಶಿವಣ್ಣ, ಈರಣ್ಣ ,ಕೃಷ್ಣಪ್ಪ ,ಚಿರಂಜೀವಿ, ಗಿರೀಶ್, ಹನುಮಂತರಾಯಪ್ಪ, ಜಯಣ್ಣ, ಬಪ್ಪರಾಯಪ್ಪ, ಕುರಿ ಜಯಣ್ಣ, ವಿಶ್ವನಾಥ್, ರಾಜಪ್ಪ ,ನಾಗಣ್ಣ, ಗುಂಡಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

(Visited 1 times, 1 visits today)