ಗುಬ್ಬಿ: ತಾಲ್ಲುಕಿನ ಚೆಳೂರು ಹೋಬಳಿಯ ಸೊರೆಕಾಯಿಪೇಟೆ ಯ ಸರ್ವೆ ನಂ:೨೦ ಸಾಗುವಳಿ ಮಾಡುತ್ತಿದ್ದ ರೈತ ಮಹಿಳೆ ಮೇಲೆ ಏ. ೨೨ ರಂದು ಅನುಭವದಲ್ಲಿರುವ ಭೂಮಿಗೆ ಬಂದು ಗುಡಿಸಲುಗೆ ಬೆಂಕಿಹಚ್ಚಿರುವು ಸೇರಿದಂತೆ ಇತರೆ ಕೃಷಿ ಉಪಕರಣಗಳನ್ನು ಒಡೆದು ಹಾಕಿ ದಾಂದಲೆ ಮಾಡಿರುವ ಅರಣ್ಯ ಇಳಾಖೆಯ ಸಿಬ್ಬಂದಿಯನ್ನು ಅಮಾನತ್ತು ಮಾಡಲು ಮತ್ತು ಬಗೇರ್ ಹುಕುಂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸಲ್ಲಿಸಿದ ಮನವಿ ಪತ್ರ.
ಗುಬ್ಬಿ ತಾಲ್ಲುಕು ಅರಣ್ಯ ಭೂಮಿ ಒತ್ತುವರಿ ಮಾಡಿದ್ದೀರ ಎಂದು ಅರಣ್ಯ ಇಲಾಖೆ ಸಿಬ್ಬಂದಿ ದಿನಾಂಕ;೨೨-೦೪-೨೦೨೫ ರಂದು ಸುಮಾರು ೧೦.೩೦ ಗಂಟೆಯ ಸಮಯದಲ್ಲಿ ಗುಬ್ಬಿ ತಾಲ್ಲುಕು ಚೆಳೂರು ಹೋಬಳಿ ಯ ಕಾಡುಗೊಲ್ಲ ಬುಡಕಟ್ಟು ವಿಧವೆ ಯ ರೇಣುಕಮ್ಮ ಕೋಂ ಲೇಟ್,ಕೃಷ್ಣಮೂರ್ತಿ ಯವರು ಸೊರೆಕಾಯಿ ಪೇಟೆಯ ಸರ್ವೆ ನಂ:೨೦ ರಲ್ಲಿ ಸ್ವಾಧಿನದಲ್ಲಿರುವ ಭೂಮಿಯಲ್ಲಿ ಕಳೆದ ೨೦ ವರ್ಷಗಳಿಂದ ಉಳಿಮೆ ಮಾಡಿಕೊಂಡು ಅನುಭವನದಲ್ಲಿದ್ದಾರೆ. ಏಕಾಎಕಿ ಭೂಮಿಗೆ ನುಗ್ಗಿ ಆರಣ್ಯ ಇಲಾಖೆಯ ಸಿಬ್ಬಂದ್ದಿಗಳು ಗುಡಿಸಲಿಗೆ ಬೆಂಕಿ ಹಚ್ಚಿ ಗುಡಿಸಿಲಿನ ಒಳಗಿದ್ದ ದಿನಸಿ,ಬಟ್ಟೆ,ಬರೆ,ಹೂದಿಕೆ ಸುಟ್ಟು ಮತ್ತು ತೆಂಗಿನ ಗಿಡ,ಬಾಳೆ,ಇತರೆ ಬೆಳೆಗಳನ್ನು ನಾಶ ಮಾಡಿದ್ದಾರೆ ಹಾಗೂ ಕೃಷಿ ಪರಿಕರಗಳಾದ ಪೈಪು ಮತ್ತಿತರೆ ಹಾಳುಮಾಡಿದ್ದಾರೆ, ಕುಟುಂಬದ ಮಹಿಳೆಯರು ಮತ್ತು ಮಕ್ಕಳನ್ನು ಬೆದರಿಸಿದ್ದಾರೆ. . ಈ ಘಟನೆಯನ್ನು ಕರ್ನಾಟಕ ಪ್ರಾಂತ ರೈತ ಸಂಘವು ತ್ರೀರ್ವವಾಗಿ ಖಂಡಿಸುತ್ತದೆ, ಎಂದು ಕೆ.ಪಿ.ಆರ್.ಎಸ್ ನ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಿ.ಅಜ್ಜಪ್ಪ ಸರ್ಕಾರವನ್ನು ಅಗ್ರಹಿಸಿದರು. ಈ ಕಾರ್ಯದಲ್ಲಿ ತೋಡಗಿದ್ದ ಆರಣ್ಯ ಇಲಾಖೆಯ ಸಿಬ್ಬಂದಿಯನ್ನು ಈ ತಕ್ಷಣವೆ ಅಮಾನತ್ತು ಮಾಡಲು ಈ ಮೂಲಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತೆವೆ ಎಂದರು. ಮುಂದುವರೆದು ಮತನಾಡಿ ರಾಜ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣಬೈರೆಗೌಡ ರವರು ಯಾರನ್ನು ಒಕ್ಕಲೆಬಿಸುವುದಿಲ್ಲವೆಂದು ಹೇಳುತ್ತಾರೆ ಅದರೆ ಇಲ್ಲಿ ಶಾಸಕರು ಸೇರಿದಂತೆ ಅಧಿಕಾರಿಗಳನ್ನು ಬಿಟ್ಟು ಒಕ್ಕಲೆಬ್ಬಿಸುತ್ತಾರೆ ಎಂದರು. ಹಾಗಾಗಿ ಗುಡಿಸಲನ್ನು ಪುನರ ಸ್ಥಾಪಿಸಲು ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಸೂಚಿಸಬೇಕೆಂದರು.
ಬೋಜರಾಜು ಮತಾನಾಡಿ ಗುಬ್ಬಿ ತಾಲ್ಲೂಕಿನಲ್ಲಿ ಬಗರ್ ಹುಕಂ ಸಾಗುವಳಿ ಅಕ್ರಮ ಸಕ್ರವi ಸಮಿತಿಯಲ್ಲಿ ಭ್ರಷ್ಟಚಾರವಾಗಿದೆ. ಇದೆ ಸರ್ವೆ ನಂ:೨೦ ರಲ್ಲಿ ಇತರರಿಗೆ ಮೂಂಜುರಾತಿ ಪತ್ರ ನೀಡಿ ಖಾತೆ-ಪಾಣಿ ನೀಡಿದ್ದಾರೆ. ಬಗರ್ ಹುಕುÀಂ ಸಾಗುವಳಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಗುಬ್ಬಿ ತಾಲ್ಲುಕ್ ಚೇಳೊರು ಹೋಬಳಿ ಸೋರೆಕಾಯಿಪೇಟೆಯ ಎಲ್ಲಾ ಸಗುವಳಿದಾರಿಗೆ ಸಾಗುವಳಿ ಪತ್ರ ನೀಡಬೇಕು . ಸಮಸ್ಯೆ ಇತ್ಯಾರ್ಥಕ್ಕೆ ಜಿಲ್ಲಾಡಳಿತ ತಕ್ಷಣವೆ ಕ್ರಮ ವಹಿಸಬೇಕು . ಅದುವರೆವೆಗೆ ಕಡ್ಡಾಯವಾಗಿ ಆರಣ್ಯ ಇಲಾಖೆಯ ಅನಗತ್ಯ ಮಧ್ಯ ಪ್ರವೇಶವನ್ನು ನಿಲ್ಲಿಸಬೇಕು.
ಗುಬ್ಬಿ ತಾಲ್ಲೂಕು ಅಧ್ಯಕ್ಷ ದೂಡ್ಡನಂಜಯ್ಯ ಮತಾನಾಡಿ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ೨೦೦೬ ಕ್ಕೆ ತಿದ್ದುಪಡಿ ತಂದು ೨೦೦೫ ರ ಪೂರ್ವದಲ್ಲಿ ಸಾಗುವಳಿಯಲ್ಲಿ ತೊಡಗಿದ್ದ ಎಲ್ಲ ಬಡವರಿಗೆ ಹಕ್ಕುಪತ್ರ ನೀಡಬೇಕು. ಅದೇ ರೀತಿ ಅಂತಹ ಸಾಗುವಳಿದಾರರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಗೆ ಆದೇಶಿಸಬೇಕು. ಈಗಾಗಲೇ ಫಾರಂ ನಂ:೫೦,೫೩,೫೭ ಅರ್ಜಿ ನಮೂನೆ ಸಲ್ಲಿಸಿದ ಎಲ್ಲ ಬಡ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಲು ಅಗತ್ಯ ಕ್ರಮ ವಹಿಸಬೇಕು. ಹಕ್ಕುಪತ್ರ ವಿತರಣೆಯಲ್ಲಾಗುವ ಭ್ರಷ್ಠಾಚಾರವನ್ನು ತಡೆಯಬೇಕು. ನಿನ್ನೆ ಆರಣ್ಯ ಇಲಾಖೆ ನಡೆಸಿರುವ ದೌಜನ್ಯದಲ್ಲಿ ಭಾಗಿಯಾಗಿರು ಎಲ್ಲಾರನ್ನ ಈ ಕೂಡಲೆ ಅಮಾನತ್ತು ಮಾಡಬೇಕು, ಮತ್ತು ರೈತರ ಮೇಲೆ ಆರಣ್ಯ ಇಲಾಖೆ ನಡೆಸುವ ದೌಜನ್ಯ ನಿಲ್ಲಿಸಬೇಕು. ಎಂದರು.
ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಸಿ ಮತನಾಡಿದ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಜರುಗಿಸಿಲಾಗುವೆಂದರು.
ನಿಯೊಗದಲ್ಲಿ ದೂಡ್ದನಂಜಪ್ಪ, ಸಿ.ಅಜ್ಜಪ್ಪ, ಪ್ರಕಾಶ, ನಾಗರಾಜು.ಡಿ, ರೇಣುಕಮ್ಮ, ರಂಗಪ್ಪ, ಬಾಲಯ್ಯ ಮುಂತಾದವರು ಭಾಗವಹಿಸಿದ್ದರು.

(Visited 1 times, 1 visits today)