ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ-ಗಾಳಿಯಿಂದ ಸುದರ್ಶನ ಬಿನ್ ಕುಮಾರಸ್ವಾಮಿ ಅವರ ಸರ್ವೆ ಸಂಖ್ಯೆ ೪೧ರ ಜಮೀನಿನಲ್ಲಿ ಬೆಳೆದಿದ್ದ ಅಡಿಕೆ ಮತ್ತು ತೆಂಗಿನ ಮರಗಳು ಹಾಳಾಗಿದ್ದು, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ನಿರ್ಮಾಣ ಪ್ರಗತಿ ಪರಿಶೀಲನೆ ನಂತರ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೈಗೊಂಡಿರುವ ವಸತಿ ನಿರ್ಮಾಣ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಯೋಜನೆಯಡಿ ಮಂಜೂರಾಗಿರುವ ೮೦೦ ಮನೆಗಳ ಪೈಕಿ ೪೩೬ ಮನೆಗಳನ್ನು ಪಟ್ಟಣದ ಕಸಬ ಸರ್ವೆ ನಂ. ೧೧೯ ಮತ್ತು ೧೨೧/೨ರ ೫ ಎಕರೆ ೩೫ ಗುಂಟೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ವಸತಿಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಿದರಲ್ಲದೆ, ಫಲಾನುಭವಿಗಳು ಶೀಘ್ರದಲ್ಲಿ ಮನೆಗಳನ್ನು ಪಡೆಯಬಹುದೆಂಬ ನಂಬಿಕೆಯಿಟ್ಟುಕೊAಡಿದ್ದಾರೆ. ಆದ ಕಾರಣ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಸಬಾ ಹೋಬಳಿ ದಬ್ಬೇಘಟ್ಟ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಮನೆಗಳ ನಿರ್ಮಾಣಕ್ಕೆ ಸರ್ವೆ ನಂಬರ್ ೧೨೨ ರಲ್ಲಿ ೨.೫ ಎಕರೆ ಜಮೀನು ನೀಡುವ ಸಂಬAಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ತಿಪಟೂರು ಉಪವಿಭಾ ಗಾಧಿಕಾರಿ ಸಪ್ತಶ್ರೀ, ಚಿಕ್ಕನಾಯಕನಹಳ್ಳಿ ತಾಲೂ ಕಿನ ತಹಶೀಲ್ದಾರ್ ಪುರಂದರ್ ಕೆ., ಸಹಾಯಕ ಕಾರ್ಯಪಾಲಕ ಅಭಿಯಂತರ ವಿವೇಕಾನಂದ ಜಿ.ವಾರಕರ್ ಹಾಗೂ ಸಹಾಯಕ ಅಭಿಯಂತರ ರಕ್ಷಿತ್ ಕೆ.ಎಸ್. ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)