ತುಮಕೂರು: ಸಾವಿರ ಸಂಗಮಗಳಲ್ಲಿ ಸ್ನಾನ ಮಾಡುವುದರಿಂದ ಮೈಮೇಲಿನ ಕೊಳೆ ಹೋಗಬಹುದೇ ಹೊರತು, ಮನಸ್ಸಿನ ಕೊಳೆ ತೊಳೆಯಲು ನಾಟಕ, ಸಂಗೀತ, ಸಾಹಿತ್ಯ,ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯಎಂದುಕರ್ನಾಟಕ ನಾಟಕಅಕಾಡೆಮಿಅಧ್ಯಕ್ಷರಾದ ಕೆ.ವಿ.ನಾಗರಾಜಮೂರ್ತಿ ಪ್ರತಿಪಾದಿಸಿದ್ದಾರೆ.
ನಗರದಕನ್ನಡ ಭವನದಲ್ಲಿ ಶ್ರೀನಾಗಾರ್ಜುನ ಕಲಾ ಸಂಘ(ರಿ)ದ ೧೫ನೇ ವರ್ಷದ ವಾರ್ಷಿಕೋತ್ಸವ ಹಾಗೂ ರಂಗಸಾಧಕರಿಗೆ ಸನ್ಮಾನ,ಸಾಂಸ್ಕೃತಿಕ ಸಂಗೀತ ಸೌರಭ ಹಾಗೂ ಸಂಘದ ವಾರ್ಷಿಕ ಮಹಾಸಭೆಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದಅವರು,ತಾವು ಮಾಡಿದ ಪಾಪ ಹೋಗುತ್ತದೆಎಂದು ಸಂಗಮದಲ್ಲಿ ಸ್ನಾನ ಮಾಡುವುದಕ್ಕಿಂತಇAತಹದೊAದು ಸಂಸ್ಥೆಯ ಮೂಲಕ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುವುದುಅತ್ಯಂತ ಪುಣ್ಯದ ಕೆಲಸ ಎಂದು ನಂಬಿದ್ದೇನೆ.ಆ ಕೆಲಸವನ್ನು ನಾಗಾರ್ಜುನ ಕಲಾಸಂಘ ಕಳೆದ ಹದಿನೈದು ವರ್ಷಗಳಿಂದ ಮಾಡುತ್ತಿರುವುದುಅಭಿನಂದನಾರ್ಹಎAದರು.
ಸ0ಘಗಳು ಕೇವಲ ವಾರ್ಷಿಕೋತ್ಸವಗಳಿಗೆ ಸಿಮೀತವಾಗಿರುವ ಇಂದಿನ ಕಾಲದಲ್ಲಿಒಂದು ಸಂಘವನ್ನು ಹದಿನೈದು ವರ್ಷಗಳ ಕಾಲ ಅತ್ಯಂತ ಕ್ರಿಯಾಶೀಲವಾಗಿ ಜೀವಂತವಾಗಿಡುವ ಕೆಲಸವನ್ನು ನಾಗಾರ್ಜುನ ಕಲಾ ಸಂಘದಅಧ್ಯಕ್ಷರಾದ ಕೆ.ಸಿ.ನರಸಿಂಹಮೂರ್ತಿ ಮತ್ತುಅವರತಂಡ ಮಾಡುತ್ತಿದೆ.ಕಲೆಗೆತಮ್ಮಜೀವನವನ್ನು ಮುಡಿಪಾಗಿಟ್ಟರುವಡಾ.ಗುಬ್ಬಿ ವೀರಣ್ಣ ಮತ್ತುಡಾ.ರಾಜ್‌ಕುಮಾರ್‌ಅವರನ್ನುಆದರ್ಶವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ. ಡಾ.ಗುಬ್ಬಿ ವೀರಣ್ಣಅವರಕನ್ನಡದ ಮೂಲಕ ಭಾರತೀಯರಂಗಭೂಮಿಯನ್ನುಕಟ್ಟುವ ಕೆಲಸ ಮಾಡಿದರು.ಅದೇರೀತಿಡಾ.ರಾಜಕುಮಾರ್ ಹಲವು ಕನ್ನಡಗಳ ನಡುವೆ, ಜನಸಾಮಾನ್ಯರಕನ್ನಡ ಮೂಲಕ ಇಡೀ ನಾಡನ್ನುಕಟ್ಟಿದವರು.ಗುಬ್ವಿ ವೀರಣ್ಣಅವರ ನಾಟಕಗಳ ರಂಗಸಜ್ಜಿಕೆಯ ಮೇಲೆ ನಿಜವಾದ ಆನೆ, ಕುದುರೆ, ರಥಗಳು ಬರುತ್ತಿದ್ದವು. ಬ್ರಿಟಿಷರುಇವರಕಂಪನಿಯ ನಾಟಕಗಳು ನಾಡಿನ ವಿವಿದೆಡೆ ಪ್ರದರ್ಶನಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರುಎಂದರೆಇದಕ್ಕಿAತಹದೊಡ್ಡಗೌರವ ಮತ್ತೊಂದಿಲ್ಲ. ತುಮಕೂರುಜಿಲ್ಲೆಕನ್ನಡರಂಗಭೂಮಿ ಮತ್ತು ಚಲನಚಿತ್ರಕ್ಕೆ ನೀಡಿದಕೊಡುಗೆಅಪಾರವಾದುದ್ದುಎಂದು ಕೆ.ವಿ.ನಾಗರಾಜಮೂರ್ತಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಇಂದು ರಾಜಕಾರಣಿಗಳಿಂದಾಗಿ ನಾಡಿನಎಲ್ಲಾ ಕ್ಷೇತ್ರಗಳು ಕಲುಷಿತಗೊಂಡಿವೆ. ಆದರೆಕಲಾವಿದರುಜಾತಿ, ಧರ್ಮ ಮೀರಿ ಸಮಾಜವನ್ನುಕಟ್ಟುವ ಕೆಲಸವನ್ನುರಂಗಭೂಮಿ ಮಾಡುತ್ತಿದೆ.ಏನಾದರೂ ಆಗು ಮೊದಲು ಮಾನವನಾಗು ಎಂಬ ಹಿರಿಯರ ಮಾತಿನಂತೆ ನಾವೆಲ್ಲರೂ ನಡೆಯಬೇಕಿದೆ.ಬಹುತ್ವದ ಸಂಕೇತವಾಗಿರುವ ಬುದ್ದ ಬಸವ, ಅಂಬೇಡ್ಕರ್‌ದಾರಿಯಲ್ಲಿ ನಡೆಯಲುರಂಗಭೂಮಿ ಪ್ರೇರಣೆಯಾಗಿದೆ.ಮಕ್ಕಳನ್ನು ಸಂಸ್ಕೃತಿವAತರಾಗಿ ಬೆಳೆಸೋಣ ಎಂದು ಕೆ.ವಿ.ನಾಗರಾಜಮೂರ್ತಿ ನುಡಿದರು.
ಕಸಾಪ ಅಧ್ಯಕ್ಷರಾದಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಹಿರಿಯರ ಮಾರ್ಗದರ್ಶನದಲ್ಲಿ ಶ್ರೀನಾಗಾರ್ಜುನ ಕಲಾ ಸಂಘ ಕೆಲಸ ಮಾಡುತ್ತಿದೆ.ಸಾಹಿತ್ಯ ಪರಿಷತ್ತಿನ ವೇದಿಕೆಗಳಲ್ಲಿ ರಂಗಭೂಮಿಯ ವಿಚಾರಗಳನ್ನು ಚರ್ಚಿಸಲು ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವೇದಿಕೆಗಳು ಜಿಲ್ಲೆಯಕಲಾವಿದರಿಗೆ ಲಭ್ಯವಾಗಲಿದೆಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀನಾಗಾರ್ಜುನ ಕಲಾ ಸಂಘದಅಧ್ಯಕ್ಷ ಕೆ.ಸಿ.ನರಸಿಂಹಮೂರ್ತಿ,ಹದಿನೈದು ವರ್ಷಗಳ ಹಿಂದೆಕAಟಲಗೆರೆ ಸಣ್ಣಹೊನ್ನಯ್ಯಅವರು ದೀಪ ಹಚ್ಚಸುವ ಮೂಲಕ ಆರಂಭವಾದ ನಮ್ಮ ಸಂಸ್ಥೆ ಸುಮಾರು ೧೨೫ಕ್ಕೂ ಹೆಚ್ಚು ಅಜೀವ ಸದಸ್ಯರನ್ನು ಹೊಂದಿದೆ.೬೮ ಪೌರಾಣಿಕ, ೬ ಐತಿಹಾಸಿಕ ನಾಟಕಗಳನ್ನು ಪ್ರದರ್ಶನ ನೀಡುವಜೊತೆಗೆ, ಜಿಲ್ಲೆಯಾದ್ಯಂತ ಶಾಖೆಗಳನ್ನು ಹೊಂದಿದೆ.ಆರುಜನ ಹಿರಿಯಕಲಾವಿದರಿಗೆರಜತಕಿರೀಟಧಾರಣೆ, ೧೨ ಜನ ಆಶಕ್ತ ಕಲಾವಿದರಿಗೆಧನ ಸಹಾಯ ಮಾಡಿದೆ.ಎರಡು ಬಾರಿ ಮೈಸೂರುದಸರಾದಲ್ಲಿ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಅವಕಾಶ ದೊರೆತಿದೆ.ಕರೋನ ಸಂದರ್ಭದಲ್ಲಿ ೩೨ಕ್ಕೂ ಹೆಚ್ಚು ಅಶಕ್ತ ಕಲಾವಿದರನ್ನು ಗುರುತಿಸಿ, ಅವರಿಗೆಧನ ಸಹಾಯದಜೊತೆಗೆ, ಪುಡ್‌ಕೀಟ್ ನೀಡಿತಮ್ಮಕೈಲಾದ ಸೇವೆಯನ್ನು ಸಲ್ಲಿಸಿದ್ದೇವೆ.ಎಲ್ಲಾ ಪ್ರಕಾರದಕಲಾವಿದರು, ಮತ್ತುಜಾತಿ, ಧರ್ಮದಕಲಾವಿದರು ನಮ್ಮ ಸಂಘದ ಸದಸ್ಯರಿದ್ದಾರೆ. ಸರಕಾರಿ ನೌಕರಿಯಲ್ಲಿರುವವರು, ಅಧಿಕಾರಿಗಳಾಗಿರುವವರು, ಪೌರಕಾರ್ಮಿಕರು ಸೇರಿದಂತೆಎಲ್ಲ ವರ್ಗದವರು ನಮ್ಮೊಂದಿಗೆ ಕೈಜೋಡಿಸಿದ್ದು, ಇದೊಂದು ಕಲಾ ಕುಟುಂಬವಾಗಿದೆಎAದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಕಲಾಶ್ರೀ ಡಾ.ಲಕ್ಷö್ಮಣದಾಸ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಕನ್ನಡಅಭಿವೃದ್ದಿ ಪ್ರಾಧಿಕಾರದ ಸದಸ್ಯಡಾ.ರವಿಕುಮಾರ್ ನೀ.ಹ.,ಜನಪದಅಕಾಡೆಮಿ ಸದಸ್ಯಕೆಂಕೆರೆ ಮಲ್ಲಿಕಾರ್ಜುನ್, ಎಂ.ವಿ.ನಾಗಣ್ಣ, ನಾಟಕಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಮತ್ತಿತರರುಕಾರ್ಯಕ್ರಮಕುರಿತು ಮಾತನಾಡಿದರು.ಐವತ್ತುಕ್ಕೂ ಹೆಚ್ಚು ಕಲಾವಿದರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ನಾಗಾರ್ಜುನ ಕಲಾ ಸಂಘದಗೌರವಾಧ್ಯಕ್ಷಹೆಚ್.ನಾಗರಾಜಯ್ಯ,ವಲಯಅರಣ್ಯಾಧಿಕಾರಿ ಸುರೇಶ್ ಹೆಚ್.ಎಂ., ಉಪಾಧ್ಯಕ್ಷ ದೊಡ್ಡಸಿದ್ದಯ್ಯ, ಖಜಾಂಚಿ ಬಸವರಾಜು.ಎಂ.ಎಸ್, ಸಂಘಟನಾ ಕಾರ್ಯದರ್ಶಿ ತಿಪ್ಪೇಸ್ವಾಮಿ, ಸಹಕಾರ್ಯದರ್ಶಿ ನರಸೀಯಪ್ಪ.ಟಿ.ಕೆ, ನಿರ್ದೇಶಕರುಗಳು ಉಪಸ್ಥಿತರಿದ್ದರು.

 

(Visited 1 times, 1 visits today)