ತುಮಕೂರು: ಜನಪದ ಕಲೆಗಳನ್ನು ಯುವಜನತೆ ಮೈಗೂಡಿಸಿಕೊಂಡಾಗ ಮಾತ್ರ ಕಲೆ ಮುಂದಿನ ಪೀಳಿಗೆಗೂ ಉಳಿಯುತ್ತದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜನಪದ ಉತ್ಸವವನ್ನು ರಾಶಿ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮೊಬೈಲ್ ಗೀಳಿಗೆ ಒಳಗಾಗಿ ನಾಡಿನ ಸಾಹಿತ್ಯ, ಕಲೆ, ಸಂಸ್ಕöÈತಿಯನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಜತೆಗೆ ಕಲೆ, ಸಾಹಿತ್ಯ, ಜನಪದದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಅತಿಥಿಯಾಗಿ ಭಾಗವಹಿಸಿದ್ದ ತಮಟೆ ನರಸಮ್ಮ ಅವರು, ತಮಟೆಯ ಕಲೆ, ಅದರ ವಿಶೇಷತೆ ಹಾಗೂ ಗಸ್ತುಗಳನ್ನು ಕುರಿತು ವಿವರಿಸಿದರು.
ಆರತಿ ಪಟ್ರಮೆ ಮಾತನಾಡಿ, ಯಕ್ಷಗಾನ ಕಲೆ ಕರಾವಳಿಯಲ್ಲಿ ಹುಟ್ಟಿ ನಾಡಿನಾದ್ಯಂತ ವಿಸ್ತರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಂಸ್ಕöÈತಿಕ ಸಂಚಾಲಕರಾದ ಡಾ. ಮುದ್ದಗಂಗಯ್ಯ ಕೆ.ಸಿ., ಕಲೆ ಮನುಷ್ಯರನ್ನು ನಿಜ ಮನುಷ್ಯರನ್ನಾಗಿ ಮಾಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಟಿ.ಡಿ. ವಸಂತ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಠ್ಯದ ಜತೆಗೆ ಕಲೆ, ಸಾಹಿತ್ಯ, ಸಂಸ್ಕöÈತಿಯನ್ನು ರೂಢಿಸಿಕೊಳ್ಳಬೇಕು. ಇದರೊಂದಿಗೆ ದೇಸಿ ಉಡುಗೆ-ತೊಡುಗೆಗಳ ಬಗ್ಗೆ ಒಲವು ತೋರಬೇಕು ಎಂದು ಸಲಹೆ ಮಾಡಿದರು.
ನಂತರ ವಿಧ್ಯಾರ್ಥಿಗಳು ವಿವಿಧ ಸಂಚಾಲಕರುಗಳ ನೇತೃತ್ವದಲ್ಲಿ ಲಗೋರಿ, ಕುಂಟೆಬಿಲ್ಲೆ, ಚೌಕಾಬಾರ, ಅಳಗುಳಿಮನೆ, ಬುಗುರಿ, ಹುಲಿಘಟ್ಟ, ಬುಗುರಿ, ನದಿ- ದಡ ಮುಂತಾದ ದೇಶಿ ಆಟಗಳನ್ನಾಡಿದರು.
ಇದೇ ಸಂದರ್ಭದಲ್ಲಿ ದೇಶಿಯ ಪಾಕ ಪದ್ಧತಿ, ವೇಷ ಭೂಷಣ ಸ್ಪರ್ಧೆಯ ವಿಜೇತರನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಪೋಪ್ ಜನನಪ್ರಾನ್ಸಿಸ್ ಮತ್ತು ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ಹಾಗೂ ಪಹಲ್ಗಾಮ್ ದಾಳಿಯಲ್ಲಿ ಮಡಿದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಅನುಸೂಯ, ಪ್ರೊ. ಕುಮಾರಸ್ವಾಮಿ, ಡಾ. ಯೋಗೀಶ್ ಮತ್ತಿತರರು ಭಾಗವಹಿಸಿದ್ದರು.
ಮಧುಶಾಲಿನಿ ಸ್ವಾಗತಿಸಿದರು. ಡಾ. ಅಶ್ವಕ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಲಕ್ಷಿ÷್ಮ ರಂಗಯ್ಯ ವಂದಿಸಿದರು.
(Visited 1 times, 1 visits today)