ತುಮಕೂರು: ಪಹಲ್ಗಾಮ್, ಅನಂತನಾಗ್ ಜಿಲ್ಲೆ, ಜಮ್ಮು ಕಾಶ್ಮೀರದಲ್ಲಿ ಕಳೆದ ವಾರ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತಾ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ಸಂಘ (ರಿ), ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿAದ ನಗರದ ಬಿ.ಜಿ.ಎಸ್.ವೃತ್ತ (ಟೌನ್ ಹಾಲ್ ವೃತ್ತ)ದವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಮೇಣದಬತ್ತಿ ಹಚ್ಚಿಯನ್ನು ಕೃತ್ಯದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇ ಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಬಷೀರ್ ಅಹಮದ್ ರವರು ಮಾತನಾಡುತ್ತಾ ನಮ್ಮ ದೇಶದ ಅವಿಭಾಜ್ಯ ಅಂಗವಾದ ಜಮ್ಮು ಕಾಶ್ಮೀರ ರಾಜ್ಯದ ಅನಂತನಾಗ್ ಜಿಲ್ಲೆಯಲ್ಲಿನ ಪೆಹೆಲ್ಗಾಂ ಎಂಬ ಪಟ್ಟಣದಲ್ಲಿ ಇತ್ತೀಚೆಗೆ ಕೆಲವು ಭಯೋತ್ಪಾದಕರಿಂದ ನಡೆದಂತಹ ಭಯೋತ್ಪಾದಕ ಕೃತ್ಯಯುವು ಅತ್ಯಂತ ಖಂಡನೀಯವಾದದ್ದು. ಇಂಥಹ ಹೀನ ಕೃತ್ಯ ವನ್ನು ಎಸಗಿ ಅಮಾಯಕ ಜೀವಗಳನ್ನು ಬಲಿ ಪಡೆದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಭಯೋತ್ಪಾದನೆಯ ನಿರ್ಮೂಲನೆಗೆ ಪಣತೊಟ್ಟಿರುವ ಭಾರತದ ಪ್ರಧಾನ ಮಂತ್ರಿಗಳ ಕಾರ್ಯಕ್ಕೆ ತುಮಕೂರು ಜಿಲ್ಲೆಯ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ರಾಜ್ಯ ಸಂಘ (ರಿ)ವು ಸದಾ ಬೆಂಬಲ ಸೂಚಿಸುತ್ತದೆ. ಇಂತಹ ಹೀನ ಕೃತ್ಯವು ಮತ್ತೊಮ್ಮೆ ಮರುಕಳಿಸದಂತೆ ಪ್ರಧಾನ ಮಂತ್ರಿಗಳು ಕ್ರಮಕೈಗೊಳ್ಳುವುದರೊಂದಿಗೆ ಜಮ್ಮು ಕಾಶ್ಮೀರ ರಾಜ್ಯಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿ ಅಲ್ಲಿನ ಜನರಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಯನ್ನು ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳ ಮೂಲಕ ಭಾರತದ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಹ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಿಂಜಾರ ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ರಾಜ್ಯ ಸಂಘ ದ ರಾಜ್ಯಾಧ್ಯಕ್ಷರಾದ ಬಷೀರ್ ಅಹಮ್ಮದ್, ರಾಜ್ಯ ನಿರ್ದೇಶಕ ಷಫೀ ಐ.ಎಂ, ರಾಜ್ಯ ಉಪಾಧ್ಯಕ್ಷ ಅಬ್ದುಲ್ ಲತೀಫ್, ಬೆಂಗ ಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಶಫಿ ಅಹಮದ್, ಜಾಕೀರ್ ಹುಸೇನ್, ಕುತುಬ್ ಅಲಿ, ನೂರುಲ್ಲಾ, ಜಿಯಾವುಲ್ಲಾ, ಸೈಯದ್ ಅಹಮ್ಮದ್ ಉಪಸ್ಥಿತರಿದ್ದರು.
(Visited 1 times, 1 visits today)