ತುರುವೇಕೆರೆ: ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಅಮ್ಮಸಂದ್ರ ಹಾಗೂ ದಂಡಿನಶಿವರ ಗ್ರಾಮಸ್ಥರು ಅಮ್ಮಸಂದ್ರ ಶುದ್ದನೀರಿನ ಘಟಕದ ಬಳಿ ಸೋಮವಾರ ರಸ್ತೆಗೆ ತೆಂಗಿನ ಸಸಿ ನೆಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಸಿದ್ದಗಂಗಯ್ಯ ಬಿ.ಹೆಚ್. ರಸ್ತೆಯಿಂದ ಕಲ್ಲೂರು, ತುರುವೇಕೆರೆ ಹಾಗೂ ಬಾಣಸಂದ್ರ ಮುಖ್ಯ ಸಂಪರ್ಕ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ದಿನಾಲು ನೂರಾರು ವಾಹನಗಳು ಈ ಭಾಗದಲ್ಲಿ ಸಂಚರಿಸಲಿವೆ. ಇಲ್ಲಿ ರೈಲ್ವೇ ನಿಲ್ದಾಣವೂ ಇರುವುದರಿಂದ ಈ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸಲಿದ್ದು. ಅಮ್ಮಸಂದ್ರದಿAದ ನಾಗರಕಟ್ಟೆ ವರೆಗೆ ಮದ್ಯೆ ಮದ್ಯೆ ರಸ್ತೆ ಗುಂಡಿ ಬಿದ್ದು ಸಂಪೂರ್ಣ ರಸ್ತೆ ಹಾಳಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಾದಿಯಾಗಿ ಪ್ರಯಾಸ ಪಡುವಂತಾಗಿದೆ. ಈಗಾಗಲೇ ಅದೆಷ್ಟೋ ಆವಘಡಗಳು ಸಂಭವಿಸಿವೆ. ಇದೀಗ ಒಂದು ವಾರಗಳ ಕಾಲ ನಡೆಯುವ ದಂಡಿನಶಿವರ ಗ್ರಾಮದೇವತೆ ಶ್ರೀ ಹೊನ್ನಾದೇವಿ ಜಾತ್ರೆ ಪ್ರಾರಂಬವಾಗುತ್ತಿದ್ದು ಪ್ರತಿ ದಿನ ಸಾವಿರಾರು ಜನ ಜಾತ್ರೆಗೆ ಆಗಮಿಸಲಿದ್ದಾರೆ. ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುವುದರಿAದ ವಾಹನಗಳ ದಟ್ಟಣೆ ತುಂಬಾ ತೊಂದರೆಯಾಗಲಿದೆ. ಅಲ್ಲದೆ ರಸ್ತೆ ಪಕ್ಕದಲಿಯೇ ನೀರಿನ ಟ್ಯಾಂಕರ್ ಹಾಗೂ ಕುಡಿಯುವ ನೀರಿನ ಘಟಕ ಇರುವುದರಿಂದ ಈ ಸ್ಥಳದಲ್ಲಿ ರಸ್ತೆ ಅತಿ ಕಿರಿದಾಗಿದ್ದು ಮಹಿಳೆಯರು ಹಾಗೂ ಮಕ್ಕಳು ನೀರು ಹಿಡಿಯಲು ಬಂದ ಸಂಧರ್ಭದಲ್ಲಿ ತೊಂದರೆಯಾದರೆ ಯಾರು ಹೊಣೆ. ಇದಕ್ಕೆ ಸಂಬAಧಿಸಿದAತೆ ಅನೇಕ ಬಾರಿ ಪಿಡಬ್ಯುಡಿ ಇಂಜಿನಿಯರ್ ಗಮನಕ್ಕೆ ತಂದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ. ಜಾತ್ರೆ ಪ್ರಾರಂಬವಾಗುವುದರೊಳಗೆ ರಸ್ತೆ ದುರಸ್ತಿ ಮಾಡದಿದ್ದಲ್ಲಿ ತುರುವೇಕೆರೆ ಪಿಡಬ್ಯುಡಿ ಇಂಜಿನಿಯರ್ ಕಛೇರಿ ಮುಂಬಾಗ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.
ಗ್ರಾಮಸ್ಥ ಎ.ಎನ್.ರಾಜಶೇಖರ್ ಮಾತನಾಡಿ ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ರಸ್ತೆಯೂ ಒಂದಾಗಿದ್ದು ಹಲವಾರು ದಿನಗಳಿಂದ ರಸ್ತೆ ಗುಂಡಿ ಬಿದ್ದು ಹಲವಾರು ಅಪಘಾತಗಳನ್ನು ಸ್ವತಃ ನಾವೇ ನೋಡಿದ್ದೇವೆ. ಇದಕ್ಕೆ ಸಂಬAದಿಸಿದAತೆ ಶಾಸಕರಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಳೀ ಯಾವುದೇ ಕ್ರಮ ಕೈಗೊಂಡAತೆ ತಾಣುತ್ತಿಲ್ಲ. ಜಾತ್ರೆ ಸಮೀಪಿಸುತ್ತಿರುವುದರಿಂದ ಕೂಡಲೇ ಸಂಬAದಿಸಿದವರು ರಸ್ತೆ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಈ ಮೂಲಕ ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ರಸ್ತೆಗೆ ತೆಂಗಿನ ಸಸಿಗಳನ್ನು ನೆಡುವ ಮೂಲಕ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು. ವಾಹನಗಳನ್ನು ತಡೆದು ರಸ್ತೆ ತಡೆ ನಡೆಸಿದ್ದರಿಂದ ಕೆಲಹೊತ್ತು ಪ್ರಯಾಣಿಕರು ಪರದಾಡುವಂತಾಯಿತು. ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಎ.ಎನ್.ಮಹದೇವಯ್ಯ, ಎ.ಬಿ.ಬಸವರಾಜು, ಡಿ.ಬಿ.ಶಿವರಾಜು, ಮಧು, ಪಂಚಾಕ್ಷರಿ, ಎ.ಎನ್.ಉಮೇಶ್, ಮುರುಗನ್, ಡಿಷ್ ಕುಮಾರ್ ಸೇರಿದಂತೆ ಅಮ್ಮಸಂದ್ರ ಹಾಗೂ ದಂಡಿನಶಿವರ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
(Visited 1 times, 1 visits today)