ತುಮಕೂರು: ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ, ವಿವಿಧ ಸಮುದಾಯಗಳ ಜನರ ಅನುಭವ ಮತ್ತು ಆನುಭಾವದ ಸಮ್ಮೀಲನ ಎಂದು ಅಪರಜಿಲ್ಲಾಧಿಕಾರಿಡಾ.ತಿಪ್ಪೇಸ್ವಾಮಿಅಭಿಪ್ರಾಯಪಟ್ಟಿದ್ದಾರೆ.
ನಗರದಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ವೀರಶೈವ, ಲಿಂಗಾಯಿತ ಸಮುದಾಯದ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದಅವರು,ಜಾತಿ, ಮತ, ಲಿಂಗ ಭೇದವಿಲ್ಲದೆಎಲ್ಲ ಸಮುದಾಯವರಿಗೂತಮ್ಮ ನೋವು, ನಲಿವುಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶವಿದ್ದ ಮೊದಲು ವೇದಿಕೆ ಅನುಭವ ಮಂಟಪಎAದರು.
ಬಸವಣ್ಣನವರ ವಚನಗಳಲ್ಲಿ ನಾಡಿನ ಸಾಂಸ್ಕೃತಿಕ, ಸಾಮಾಜಿಕ,ಆರ್ಥಿಕ, ರಾಜಕೀಯ, ಧಾರ್ಮಿಕ ವಿಚಾರಗಳನ್ನು ಒಳಗೊಂಡಿದ್ದು, ಇಂದಿಗೂ ಪ್ರಸ್ತು ತವಾಗಿದೆ. ಪಂಡಿತ, ಪಾಮರರ ಭಾಷೆಗೆ ಬದಲಾಗಿ, ಜನರಆಡು ಭಾಷೆಯಾದಕನ್ನಡದ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಿಳಿಸುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಬಸವಣ್ಣವರು ವಚನ ಸಾಹಿತ್ಯದ ಮೂಲಕ ಮಾಡಿದರು.ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಅವರು, ನುಡಿದಂತೆ ನಡೆದವರು.ಅಲ್ಲದೆ ಸಮಾಜದಲ್ಲಿ ನಡೆ, ನುಡಿಗಳು ಹೇಗಿರಬೇಕುಎಂಬುದನ್ನು ತೋರಿಸಿಕೊಟ್ಟರು.ಕಾಯಕ, ದಾಸೋಹದ ಎಂಬ ತತ್ವವ ನ್ನುಜೀವನದಲ್ಲಿ ಅಳವಡಿಸಿಕೊಂಡರೆ, ಜೀವನದಲ್ಲಿ ಪರಿವರ್ತನೆಕಾಣಬಹುದುಎಂದು ಎಡಿಸಿ ಡಾ. ತಿಪ್ಪೇಸ್ವಾಮಿ ನುಡಿದರು.
ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ. ಪರಮೇಶ್ ಮಾತನಾಡಿ, ಬಸವಣ್ಣನವರಆಚಾರ, ವಿಚಾರಗಳನ್ನು ಪಾಲಿಸುತ್ತಾ ನಡೆದರೆ, ಜೀವನ ಸಾರ್ಥಕವಾಗುತ್ತದೆ. ೧೨ನೇ ಶತಮಾನದಲ್ಲಿಅವರು ಹೇಳಿದ ಮಾತು ಗಳು ೨೧ನೇ ಶತಮಾನದಲ್ಲಿಯೂ ಪ್ರಸ್ತುತ ವಾಗಿವೆ. ಬಸವಣ್ಣನವರಕಾಯಕ ಮತ್ತುದಾಸೋಹ ನಮ್ಮಅದ್ಯತೆಯಾಗಬೇಕುಎಂದರು.
ಮಹಿಳಾ ಹೋರಾಟಗಾರ್ತಿಡಾ.ಶೈಲಾನಾಗರಾಜು ಮಾತನಾಡಿ, ಕಾಯಕ, ದಾಸೋಹದ ಮೂಲಕ ಕನ್ನಡ ಭಾಷೆಯನ್ನುಧರ್ಮ ಭಾಷೆಯನ್ನಾಗಿಸಿದವರು ಬಸವಣ್ಣ. ತಮ್ಮಅನುಭವ ಮಂಟಪದಲ್ಲಿ ೭೭೪ ಜನ ಪುರುಷ, ೩೩ ಮಹಿಳಾ ವಚನಕಾರ್ತಿಯರಿಗೆ ಅವಕಾಶ ನೀಡಿ, ಹೆಣ್ಣುಗಂಡು ಎಂಬ ಭೇಧ ಭಾವವಿಲ್ಲದೆಎಲ್ಲರಿಗೂತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿ, ಅಸಮಾನತೆತೊಲಗಿಸಲು ಪ್ರಯತ್ನ ಪಟ್ಟರುಎಂದರು.
ಜಿಲ್ಲಾ ಬ್ರಾಹ್ಮಣ ಸಭಾದ ಮುಖಂಡರಾದ ಆನಂತರಾಮು ಮಾತನಾಡಿ, ಬಸವಣ್ಣನವರ ಪ್ರತಿ ವಚನಗಳಲ್ಲಿ ಬದುಕಿನ ಪಾಠವಿದೆ.ಸಮಾಜತಿದ್ದುವ ಕೆಲಸವನ್ನುಮಾಡಿದ್ದಾರೆ.ನಮ್ಮ ನಡೆ, ನುಡಿ ಗಳು ಹೇಗಿರಬೇಕುಎಂಬುದನ್ನುಜಗತ್ತಿಗೆ ತಿಳಿ ಹೇಳಿದ ಮಹಾಪುರುಷಅವರಒಂದೊAದು ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡರೇ ಅದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಇತಿಹಾಸಕಾರ ಡಾ. ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಅಸಮಾನತೆಯಿಂದ ಕೂಡಿದ ಸಮಾಜವನ್ನು ಸಮ ಸಮಾಜದಡೆಗೆತೆಗೆದುಕೊಂಡು ಹೋದ ಮಹಾ ಪುರುಷ ಬಸವಣ್ಣ, ಅಸ್ಪೃಷ್ಯತೆ ನಿವಾರಣೆಗೆಅಂತ ರಜಾತಿ ವಿವಾಹ ಮದ್ದುಎಂಬುದನ್ನು ಮೊದಲು ತೋರಿಸಿದವರು ಜಗಜೋತಿ ಬಸವರೇಶ್ವರರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಎಲ್ಲರೂ ದುಡಿಯುವಂತೇ ಪ್ರೇರೆಪಿಸಿದವರು ಎಂದರು.
ಪ್ರೊ.ಬೇವಿನ ಮರದ ಸಿದ್ದಪ್ಪ ಮತ್ತಿ ತರರು ಮಾತನಾಡಿದರು. ವೇದಿಕೆಯಲ್ಲಿ ತಹಶೀ ಲ್ದಾರರ ರಾಜೇಶ್ವರಿ, ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ,ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸುರೇಶಕುಮಾರ್, ಮುಖಂಡರಾದ ಟಿ.ಆರ್. ಸದಾಶಿವಯ್ಯ, ಮಲ್ಲಸಂದ್ರ ಶಿವಣ್ಣ,ಅಟ್ರಾಸಿಟಿ ಕಮಿಟಿಯರಂಜನ್, ಹೊಸಕೋಟೆ ನಟರಾಜು, ಕನ್ನಡ ಪ್ರಕಾಶ್, ಕೆಂ.ಬ.ರೇಣುಕಯ್ಯ, ಡಾ.ದರ್ಶನ್, ಎಂ.ಎಸ್.ಉಮೇಶ್, ಕೊಪ್ಪಲ್ ನಾಗರಾಜು, ಆನಂತರಾಮು,ಡಾ.ಸಣ್ಣಹೊನ್ನಯ್ಯಕAಟಲಗೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

(Visited 1 times, 1 visits today)