ತುಮಕೂರು: ದಿ: ೦೬/೧೨/೨೦೨೨ ರಂದು ನೊಂದ ಬಾಲಕಿಯ ತಾಯಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ತುಮಕೂರು ಮಹಿಳಾ ಪೊಲೀಸ್ ಠಾಣಾ ಮೊನಂ: ೧೫೭/೨೦೨೨ ಕಲಂ: ೩೭೬,೫೦೬ ಐಪಿಸಿ ಮತ್ತು ಕಲಂ: ೦೬ ಪೋಕೋ ಆಕ್ಟ್ ಪ್ರಕರಣವನ್ನು ಮನೋಹರ ಬಾಬು ಮುಖ್ಯ ಪೇದೆ ರವರು ದಾಖಲಿಸಿರುತ್ತಾರೆ. ನಂತರ ಪೊಲಿಸ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಒ.ಃ ಮಹಿಳಾ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ಖಾಮಿಲ್ ಪಾಷ ವಾಸ: ಪಿ.ಹೆಚ್ ಕಾಲೋನಿ ತುಮಕೂರು ಟೌನ್ ರವರನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತಾರೆ.
ಸದರಿ ಪ್ರಕರಣವನ್ನು ಸ್ಪೆಷಲ್ ಸಿ.ಸಿ ನಂ:೫೦೬/೨೦೨೩ ರಲ್ಲಿ ಮಾನ್ಯ ತುಮಕೂರು ಎಫ್.ಟಿ.ಎಸ್.ಸಿ-೧ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ದಿ: ೨೮/೦೪/೨೦೨೫ ರಂದು ಈ ಪ್ರಕರಣದ ಆರೋಪಿ ಖಾಮಿಲ್ ಪಾಷ ರವರಿಗೆ ಜೀವಾವಧಿ ಶಿಕ್ಷೆ ಮತ್ತು ೧ ಲಕ್ಷ ೫೦ ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ, ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಶ್ರೀಮತಿ ಆಶಾ ಕೆ.ಎಸ್ ರವರು ವಾದ ಮಂಡಿಸಿರುತ್ತಾರೆ.
(Visited 1 times, 1 visits today)