ಪಾವಗಡ: ವಿಶ್ವದಾದ್ಯಂತ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣ ಅವರು ಸರ್ವ ಜನಾಂಗಗಳ ನಾಯಕರಾಗಿದ್ದರು ಎಂದು ತಹಶೀಲ್ದಾರ್ ಡಿ.ಎನ್. ವರದರಾಜು ತಿಳಿಸಿದರು,
ಬುಧವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂ ಗಣದಲ್ಲಿ ಜಗದ್ಗುರು ಬಸವಣ್ಣನವರ ಜಯಂತಿಯನ್ನು ಸರಳವಾಗಿ ಆಚರಿಸುವುದರ ಜೊತೆಗೆ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿ ಮಾತನಾಡಿದ ಅವರು, ಪ್ರಪಂಚದಾದ್ಯAತ ಸಮಾಜದ ಒಳಿತಿಗಾಗಿ ವಚನಗಳ ಮೂಲಕ ಸಮಾನ ತೆಯನ್ನು ತಿಳಿ ಹೇಳಿದ ಬಸವಣ್ಣನವರು ನಮ್ಮೆಲ್ಲರಿಗೂ ಆದರ್ಶವಾಗಿದ್ದರು. ಜೊತೆಗೆ ತಮ್ಮ ಅನುಯಾಯಿಗಳ ಮೂಲಕವೂ ಸಹ ಮನೆಮನೆಗಳಿಗೆ ತೆರಳಿ ಸಮಾನತೆಯ ಬಗ್ಗೆ ತಿಳಿ ಹೇಳುವ ಕೆಲಸ ಮಾಡಿದ್ದರು ಎಂದರು.
ಜಗದ್ಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಗ್ರೇಡ್ ೨ ತಹಸೀಲ್ದಾರ್ ಚಂದ್ರಶೇಖರ್, ಆರ್. ರಾಜಗೋಪಾಲ್, ಗ್ರಾಮ ಆಡಳಿತ ಅಧಿಕಾರಿಗಳಾದ ಈರಣ್ಣ ಗೋರ್ನಾಳ್, ರಾಜೇಶ್, ರವಿಕುಮಾರ್, ಸಿಬ್ಬಂದಿ ಪದ್ಮಾ, ಬಲರಾಂ,ಅಸ್ಲಾA, ಲಿಂಗಾಯತ ಸಮಾಜದ ಮುಖಂಡರಾದ ಕಾರ್ತಿಕ್ ರಾಜನ್, ಪ್ರೇಸ್ ನಾಗಭೂಷಣ್, ಶ್ರೇಯಸ್, ಹೆಚ್ ಕೃಷ್ಣಮೂರ್ತಿ, ವಕೀಲರಾದ ಆರ್ ಹನುಮಂತರಾಯ, ಎಂ.ಜಿ.ಮAಜುನಾಥ್, ರೈತ ಸಂಘದ ಗೋಪಾಲ್ ಸೇರಿದಂತೆ ಕಚೇರಿಯ ಸಿಬ್ಬಂದಿ ಹಾಜರಿದ್ದರು.

(Visited 1 times, 1 visits today)