ತುಮಕೂರು: ೨ನೇ ಶತಮಾನದಲ್ಲಿ ದೇವನೊಬ್ಬ ನಾಮ ಹಲವು,ಕಾಯಕವೇ ಕೈಲಾಸ,ಪರಸ್ತಿçà ಸಹೋದರಿಯ ಸಮ,ಪರಧನ ನಮ್ಮದಲ್ಲ,ದೇವನೊಬ್ಬ ನಾಮ ಹಲವು,ಕೆಲಸದಲ್ಲಿ ಮೇಲು ಕೀಳು ಅಂತ ಯಾ ವುದೂ ಇಲ್ಲ,ದುಡಿದು ತಿನ್ನುವ ಕೈಗಳೇ ಶ್ರೇಷ್ಠ,ವಿಶ್ವದ ಮೊದಲ ಪಾರ್ಲಿಮೆಂಟ್ ಎಂದು ಅನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಎಲ್ಲಾ ಜಾತಿ ಜನಾಂಗದವರನ್ನು ಒಂದೆಡೆ ಸೇರಿಸಿ ಸಮಾಜದ ಹಲವು ಸಮಸ್ಯೆಗಳಿಗೆ ಚರ್ಚಿಸಿ ತಕ್ಷಣವೇ ಪರಿ ಹಾರ ಕಂಡುಕೊAಡು ವಿಶ್ವದ ಶಕ್ತಿಯಾಗಿ ವಿಶ್ವದ ಜ್ಯೋತಿಯಾಗಿ ಬಾಳಿ ಬದುಕಿ ನಮಗೆ ಉತ್ತಮ ದಾರಿ ಕಲ್ಪಿಸಿದ್ದು ಜಗಜ್ಯೋತಿ ಬಸವೇಶ್ವರರು ಎಂದು ಸಮಾಜಸೇವಕ,ವೀರಶೈವ ಮುಖಂಡರಾದ ಎಸ್.ಆರ್.ಶಿವಶಂಕರ್ ರವರು ತಿಳಿಸಿದರು.
ಅವರು ಇಂದು ಜಯನಗರಪೂರ್ವ ಬಡಾವಣೆಯ ೧ನೇ ಮುಖ್ಯರಸ್ತೆಯಲ್ಲಿರುವ ಅಶ್ವತ್ಥಕಟ್ಟೆಯ ಬಳಿ ಜಯನಗರ ಕ್ಷೇಮಾಭಿವೃದ್ಧಿ ಸಂಘ,ಸ್ಮಾರ್ಟ್ಸಿಟಿ ಹಣ್ಣು-ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ವೀರಶೈವ ಮುಖಂಡರೂ ಬಡಾವಣೆಯ ಹಿರಿಯರಾದ ಪಾಲಾಕ್ಷಯ್ಯನವರು ಮಾತನಾಡುತ್ತಾ ಜಾತಿ,ಮತ,ಪಂಥಗಳನ್ನು ಪಕ್ಕಕ್ಕೆ ಸರಿಸಿ ಮಾನವ ಜಾತಿಯೇ ಶ್ರೇಷ್ಠ,ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನುವವನೇ ಶ್ರೇಷ್ಠ,ಮಾನವೀಯತೆ,ದಯೆ ಇಲ್ಲದ ಧರ್ಮವು ಧರ್ಮವೇ ಅಲ್ಲ,ಸಾಮಾಜಿಕ ಸಮಾನತೆಯನ್ನು ಸಾರಿದವರು ಬಸವಣ್ಣನವರು,ತಮ್ಮ ಅನುಭವಗಳನ್ನು ವಚನಗಳ ಮೂಲಕ ಸಮಾಜಕ್ಕೆ ನೀಡಿ ಸಮಾಜವನ್ನು ಉತ್ತಮ ಮಾರ್ಗದತ್ತ ಕೊಂಡೊಯ್ದ ಶ್ರೇಷ್ಠ ವ್ಯಕ್ತಿ ಬಸವಣ್ಣನವರು ಎಂದು ತಿಳಿಸಿದರು.
ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ಮಾತನಾಡುತ್ತಾ ಎನಗಿಂತ ಕಿರಿಯರಿಲ್ಲ,ನಿಮಗಿಂತ ಹಿರಿಯರಿಲ್ಲ,ಸಮಾನತೆ ಇರಬೇಕೆಂದರೆ ಸಮಾಜದಲ್ಲಿ ಜಾತಿ ವ್ಯವಸ್ಥೆ ಹೋಗಬೇಕು,ಶಿಕ್ಷಣವನ್ನು ಎಲ್ಲರೂ ಪಡೆಯಬೇಕು ಅದಕ್ಕೆ ಜಾತಿ ಅಡ್ಡಬರಬಾರದು, ಸಂಸ್ಕಾರವAತ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರೂ ಪರಸ್ಪರ ನಂಬಿಕೆ,ವಿಶ್ವಾಸದಿAದ ಬಾಳಬೇಕು, ದೇವರನ್ನು ಎಲ್ಲೆಲ್ಲೋ ಹುಡುಕುವುದು ಸರಿಯಲ್ಲ ಎಂದು ಅಂಗೈಯಲ್ಲಿ ಲಿಂಗವನ್ನು ಇಟ್ಟು ಪೂಜಿಸಿ ನಂತರ ಕೊರಳಿಗೆ ಕಟ್ಟಿ ದೇವರು ನಿನ್ನ ಅಂಗೈಯಲ್ಲಿದ್ದಾಗ ದೇವರನ್ನು ಏಕೆ ಹುಡುಕುವೆ ಎಂದು ಹೇಳಿದ ಪುಣ್ಯಾತ್ಮ ಬಸವಣ್ಣನವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಶಂಕರ್,ವೆAಕಟೇಶ್.ಎಸ್, ಜಯದೇವಯ್ಯ,ಶ್ರೀಮತಿ ಕೆ.ಆರ್.ಮಂಜುಳಾ, ನಾಗರಾಜು, ಶಾಂತರಾಜು, ನಾಗರಾಜರಾವ್ ಇತರರು ಉಪಸ್ಥಿತರಿದ್ದರು.
ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜಿಸಿ ನಂತರ ಪಾನಕ,ಮಜ್ಜಿಗೆ,ಕೋಸಂಬರಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

(Visited 1 times, 1 visits today)