ಪ್ರಪಂಚದ ಅತ್ಯಂತ ಜನಪ್ರಿಯ ಸಂದೇಶ ರವಾನೆ ವೇದಿಕೆ ವಾಟ್ಸಾಪ್ ಡಿಸೆಂಬರ್ 31 ರ ನಂತ್ರ ಕೆಲ ಮೊಬೈಲ್ ಗಳಲ್ಲಿ ತನ್ನ ಸೇವೆ ನಿಲ್ಲಿಸಲಿದೆ. ಫೇಸ್ಬುಕ್ ಸ್ವಾಮ್ಯದ ವಾಟ್ಸಾಪ್ ಈಗಾಗಲೇ ಈ ಬಗ್ಗೆ ಘೋಷಣೆ ಮಾಡಿದೆ. ಹಿಂದಿನ ವರ್ಷ ಕೂಡ ವಾಟ್ಸಾಪ್ ಕೆಲ ಫೋನ್ ಗಳಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿತ್ತು.
ವಿಂಡೋಸ್ ಫೋನ್ 8.0, ಬ್ಲ್ಯಾಕ್ಬೆರಿ ಒಎಸ್, ಬ್ಲ್ಯಾಕ್ಬೆರಿ 10 ನಲ್ಲಿ ವಾಟ್ಸಾಪ್ ಬರ್ತಿಲ್ಲ. ಡಿಸೆಂಬರ್ 31, 2017 ರ ನಂತ್ರ ಈ ಮೊಬೈಲ್ ಗೆ ಸೇವೆ ನೀಡುವುದನ್ನು ವಾಟ್ಸಾಪ್ ನಿಲ್ಲಿಸಿತ್ತು. ಈಗ ನೋಕಿಯಾದ ಎಸ್ 40 ಸರದಿ. ಡಿಸೆಂಬರ್ 31, 2018 ರ ನಂತ್ರ ಈ ಫೋನ್ ಬಳಕೆದಾರರು ವಾಟ್ಸಾಪ್ ಬಳಸಲು ಸಾಧ್ಯವಿಲ್ಲ. ಆಂಡ್ರಾಯ್ಡ್ 2. 3. 7 ಜಿಂಜರ್ಬ್ರೆಡ್ ಸ್ಮಾರ್ಟ್ಫೋನ್ ಹಾಗೂ ಐಫೋನ್ ಚಾಲನೆ ಮಾಡ್ತಿರುವ ಐಒಎಸ್ 7 ಸ್ಮಾರ್ಟ್ಫೋನ್ ಗಳಲ್ಲಿ 2020 ರವರೆಗೆ ಮಾತ್ರ ವಾಟ್ಸಾಪ್ ಬಳಸಬಹುದಾಗಿದೆ.
ಹಳೆ ಮೊಬೈಲ್ ಗಳಲ್ಲಿ ವಾಟ್ಸಾಪ್ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಕಡಿಮೆ ಬಳಕೆದಾರರ ಸಂಖ್ಯೆ ಹೊಂದಿರುವ ಹಳೆ ಮೊಬೈಲ್ ಗಳಲ್ಲಿ ವಾಟ್ಸಾಪ್ ಸೇವೆ ರದ್ದು ಮಾಡ್ತಿರುವುದಾಗಿ ಕಂಪನಿ ಹೇಳಿದೆ. 2019 ರಲ್ಲಿ ನೋಕಿಯಾ ಎಸ್ 40ನಲ್ಲಿ ಸೇವೆ ಸ್ಥಗಿತವಾಗಲಿದೆ. ಜನವರಿ 1, 2020 ರ ನಂತ್ರ ಆಂಡ್ರಾಯ್ಡ್ 2. 3. 7 ಜಿಂಜರ್ಬ್ರೆಡ್ ಮತ್ತು ಹಳೆ ಆವೃತ್ತಿಯಲ್ಲಿ ರದ್ದಾಗಲಿದೆ. ಇದ್ರಿಂದ ಶೇಕಡಾ 0.3ರಷ್ಟು ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರ ಮೇಲೆ ಮಾತ್ರ ಪ್ರಭಾವ ಬೀರಲಿದೆ ಎಂದು ಕಂಪನಿ ಹೇಳಿದೆ.