ತುಮಕೂರು:

      ‘ನಡೆದಾಡುವ ದೇವರು’ ಶಿವಕುಮಾರ ಸ್ವಾಮೀಜಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

       ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಚೆನ್ನೈನ ರೇಲಾ ಆಸ್ಪತ್ರೆಯ ಸೋಂಕು ತಜ್ಞ ಡಾ. ಸುಬ್ರ ಸೂಚನೆ ಮೇರೆಗೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ಶ್ರೀಗಳನ್ನು ಸ್ಥಳಾಂತರ ಮಾಡಲಾಗಿದೆ.

      ಸಿದ್ದಗಂಗಾ ಆಸ್ಪತ್ರೆ ಆ್ಯಂಬುಲೆನ್ಸ್ ಮೂಲಕ ಮಠದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶ್ರೀಗಳನ್ನ ವೈದ್ಯರ ಸಲಹೆ ಮೇರೆಗೆ ಶಿಫ್ಟ್ ಮಾಡಲಾಗುತ್ತಿದೆ. ಸೋಂಕು ತಜ್ಞ ಡಾ. ಸುಬ್ರ ಇಂದು ಸಂಜೆ ಶ್ರೀಗಳನ್ನ ತಪಾಸಣೆ ಮಾಡಿದ್ದರು. ಸೋಂಕು ಸಂಪೂರ್ಣವಾಗಿ ನಿವಾರಿಸಲು ಶ್ರೀಗಳನ್ನ ಸಿದ್ದಗಂಗಾ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಶ್ರೀಗಳಿಗೆ ಈವರೆಗೆ ಮಠದ ಕೊಠಡಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು.

ಶ್ರೀಗಳಿಗೆ ಗಣ್ಯರ ಕಿರಿಕಿರಿ  ಆಗಬಾರದೆಂದು ಸಿದ್ದಗಂಗಾ ಆಸ್ಪತ್ರೆಗೆ ಗಣ್ಯರ ನಿರ್ಬಂಧ ಮಾಡಲಾಗಿದೆ ಎಂದು ಕಿರಿಯ ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ. 

       ಶಿವಕುಮಾರ ಸ್ವಾಮೀಜಿಗಳಿಗೆ ಪದೇ-ಪದೇ ಶ್ವಾಸಕೋಶದ ಸೋಂಕು ಕಾಣಿಸಿಕೊಳ್ಳುತ್ತಿದ್ದರಿಂದ ಇಂದು [ಗುರುವಾರ] ಚೆನ್ನೈನ ರೇಲಾ ಆಸ್ಪತ್ರೆಯ ಶ್ವಾಸಕೋಶ ಸೋಂಕು ತಜ್ಞ ಡಾ. ಸುಬ್ರ ಅವರನ್ನು ಮಠಕ್ಕೆ ಕರೆಸಲಾಗಿತ್ತು.

       ಚೆನ್ನೈನದಿಂದ ಆಗಮಿಸಿದ ಡಾ. ಸುಬ್ರ ಅವರು ಮಠದಲ್ಲಿಯೇ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆ ಸ್ಥಳಾಂತರಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.

       ಅದರಂತೆ ಶಿವಕುಮಾರ ಸ್ವಾಮೀಜಿಗಳನ್ನು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

(Visited 286 times, 1 visits today)