ನವದೆಹಲಿ:
ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಎರಡು ದಿನಗಳ ಕಾಲ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ಎರಡು ದಿವಸಗಳ ರಾಷ್ಟ್ರವ್ಯಾಪಿ ಮುಷ್ಕರದಲ್ಲಿ ಮೊದಲ ದಿವಸದ ಮುಷ್ಕರ ಕೆಲ ನಿಮಿಷಗಳ ಹಿಂದಷ್ಟೆ ಮುಕ್ತಾಯವಾಗಿದೆ.
ಇನ್ನು ಎರಡು ದಿವಸಗಳ ಬಂದ್ ಪೈಕಿ ಮೊದಲನೇ ದಿವಸದ ಬಂದ್ ಇಂದು ಮುಕ್ತಾಯವಾಗಿದ್ದು, ಎಂದಿನಿಂತೆ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ನಾಳೆ ಕೂಡ ಬಂದ್ ಮುಂದುವರೆಯಲಿದ್ದು, ನಾಳೆ ಬೆಂಗಳೂರು ಸೇರಿ ರಾಜ್ಯಾದಂತ್ಯ ಸರಕಾರಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎನ್ನಲಾಗುತ್ತಿದೆ.
ನಾಳೆಯೂ ಕೂಡ ಸರಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಇಲ್ಲಿ ತನಕ ಯಾವುದೇ ಅಧಿಕೃತ ಆದೇಶವು ಬಂದಿಲ್ಲ. ಇನ್ನು ಖಾಸಗಿ ಶಾಲೆಗಳು ಪರಿಸ್ಥಿತಿ ನೋಡಿಕೊಂಡು ಶಾಲೆಗೆ ರಜೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿದೆ ಅಂತ ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಅವರು ಮಾಧ್ಯಗಮಳಿಗೆ ಮಾಹಿತಿ ನೀಡಿದ್ದಾರೆ.
ಇನ್ನು ನಾಳೆ ಬಂದ್ ಇದ್ದರೂ ಕೂಡ ಜನ ಜೀವನ, ಸಾರಿಗೆ ವ್ಯವಸ್ಥೆ ಸೇರಿದಂತೆ ಇನ್ನೀತರ ಚಟುವಟಿಕೆಗಳು ಎಂದಿನಿಂತೆ ಸುಗಮಗಾಗಿ ಕಾರ್ಯನಿರ್ವಹಿಸಲಿದ್ದಾವೆ ಎನ್ನಲಾಗಿದೆ. ಇನ್ನು ನಾಳೆ ಬಂದ್ ವೇಳೆಯಲ್ಲಿ ಕೆಲ ಸಂಘಟನೆಗಳು ಸಾಂಕೇತವಾಗಿ ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆ ನಡೆಸಲು ಮುಂದಾಗಿದ್ದಾವೆ ಎನ್ನಲಾಗಿದ್ದು, ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಕೆಲ ಸಂಘಟನೆಗಳು ಮುಂದಾಗಿದ್ದಾವೆ ಎನ್ನಲಾಗಿದೆ.