ತುರುವೇಕೆರೆ:
ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಪಟ್ಟಣ ಪಂಚಾಯ್ತಿ ವ್ಯಾಪ್ಯಿಯಿಂದ ಪುರ ಸಭೆ ವ್ಯಾಪ್ತಿಗೇರಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಬಾಗದಲ್ಲಿ ಗುರುವಾರ ನೆನೆಗುದಿಗೆ ಬಿದ್ದಿದ್ದ ಪಟ್ಟಣದ ವಾಣಿಜ್ಯ ಸಂಕೀರ್ಣ ಪೂರ್ಣ ಗೊಳಿಸುವ 1.90 ಲಕ್ಷ ವ್ಯಚ್ಚದ ಕಾಮಗಾರಿಗೆ ಶಾಸಕ ಮಸಾಲ ಜಯರಾಮ್ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಟ್ಟಣದ ಸಂರ್ವಾಗೀಣ ಅಭಿವೃದ್ದಿಯೇ ನನ್ನ ದ್ಯೇಯವಾಗಿದೆ. ಪಟ್ಟಣದ ಜನರಿಗೆ ಮೂಲ ಭೂತ ಸೌಕರ್ಯ ಕಲ್ಪಿಸಬೇಕಿದೆ. ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ರಸ್ತೆ, ಒಳಚರಂಡಿ, ಒಂದು ಹೈಟೆಕ್ ಶಾಪಿಂಗ್ ಮಾಲ್ ಮಾಡುವ ಮೂಲಕ ಪಟ್ಟಣ ಅಭಿವೃದ್ದಿ ಪಡಿಸಲಾಗುವುದು. ವಾಣಿಜ್ಯ ಸಂಕೀರ್ಣದಲ್ಲಿ ಸುಸರ್ಜಿತ 52 ಅಂಗಡಿ, ಒಂದು ಹೋಟಲ್ ಮಳಿಗೆ ಸೇರಿ ಮುಂಬಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ ಪಟ್ಟಣದ ಜನರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ದಿನ ಬಳಕೆಯ ವಸ್ತುಗಳು ಒಂದೇ ಕಡೆ ಸಿಗುವಂತಂಹ ಹೈಟೆಕ್ ಮಾಲ್ ಒಂದು ವರ್ಷದಲ್ಲಿ ಸಿದ್ದಗೊಳ್ಳಲಿದೆ ಎಂದು ತಿಳಿಸಿದರು.
ಭೂಮಿ ಪೂಜೆ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀನರಸಿಂಹ, ಉಪಾದ್ಯಕ್ಷೆ ತಭಸುಮ್, ಸದಸ್ಯರಾದ ಯಜಮಾನ್‍ಮಹೇಶ್, ವಿಜಿಕುಮಾರ್, ನವ್ಯ ಪ್ರಕಾಶ್, ಕೆ.ಟಿ.ಶಿವಶಂಕರ್, ಶ್ರೀನಿವಾಸ್, ರುದ್ರೇಶ್, ಶಶಿಶೇಖರ್, ಕೃಷ್ಣಮೂರ್ತಿ, ಬಿಜೆಪಿ ಅಧ್ಯಕ್ಷ ದುಂಡರೇಣಕಪ್ಪ, ತಹಶೀಲ್ದಾರ್ ನಾಗರಾಜು, ಮುಖಂಡರುಗಳಾದ ಡಿ.ಆರ್.ಬಸವರಾಜು, ಹಾವಾಳ ರಾಮೇಗೌಡ, ಕೊಂಡಜ್ಜಿವಿಶ್ವನಾಥ್, ವಿ.ಬಿ.ಸುರೇಶ್, ವಿ.ಟಿ.ವೆಂಕಟರಾಮಯ್ಯ, ನವೀನ್ ಬಾಬು, ಸೋಮಶೇಖರ್, ದಿವಾಕರ್, ಚಿದಾನಂದ, ರಾಜೇಶ್, ಸಂದೀಪ್ ಇತರರು ಇದ್ದರು.