ನವದೆಹಲಿ:
ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿದ್ದ ಅಲೋಕ್ ಕುಮಾರ್ ವರ್ಮ ಅವರು ತಮ್ಮ ನೂತನ ಹುದ್ದೆ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲು ನಿರಾಕರಿಸಿ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವರ್ಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿ, ಅಗ್ನಿಶಾಮಕ ವಿಭಾಗದ ಡಿಜಿ ಹುದ್ದೆಗೆ ವರ್ಗಾಯಿಸಿತ್ತು.
ಇನ್ನೊಂದೆಡೆ ಅಲೋಕ್ ವರ್ಮಾ ವರ್ಗಾವಣೆಯುಇಂದ ತೆರವಾದ ಸ್ಥಾನಕ್ಕೆ ಇಂದು ಮತ್ತೆ ಹಂಗಾಮಿ ನಿರ್ದೇಶಕರಾಗಿ ಹೆಚ್ಚುವರಿ ನಿರ್ದೇಶಕ ಎಂ. ನಾಗೇಶ್ವರರಾವ್ ನೇಮಕ ಆಗಿದ್ದಾರೆ.
ಈ ಹಿಂದೆ ಕೇಂದ್ರೀಯ ತನಿಇಖಾ ದಳದಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದ ತರುವಾಯ ಕೇಂದ್ರ ಸರ್ಕಾರ ಅಲೋಕ್ ವರ್ಮಾ ಹಾಗೂ ಅವರ ಸಹವರ್ತಿ ರಾಕೇಶ್ ಅಸ್ತಾನ ಅವರುಗಳನ್ನು ಸುದೀರ್ಘಾವಧಿಯ ಕಡ್ಡಾಯ ರಜೆ ಮೇಲೆ ಕಳಿಸಿತ್ತು. ಆದರೆ ಸರ್ಕಾರದ ಈ ಕ್ರ್ಮ ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂ ಮೊರೆ ಹೋಗಿದ್ದರು.
ಇದೇ ಎಂಟರಂದು ತೀರ್ಪು ನಿಡಿದ್ದ ಸುಪ್ರೀಂಕೇಂದ್ರದ ಆದೇಶವನ್ನು ತಿರಸ್ಕರಿಸಿ ಮತ್ತೆ ಅಲೋಕ್ ವರ್ಮಾ ಅವರನ್ನೇ ಸಿಬಿಐ ಮುಖ್ಯಸ್ಥನ ಹುದ್ದೆಗೆ ನೇಮಕ ಮಾಡಬೇಕೆಂದು ಆದೇಶಿಸಿತ್ತು. ಇದರಂತೆ ವರ್ಮಾ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಆಯ್ಕೆ ಸಮಿತಿ ಅವರನ್ನು ವರ್ಗಾವಣೆಗೊಳಿಸಿದೆ.
(Visited 23 times, 1 visits today)