ತುಮಕೂರು:
ದೇಶದ ಭಾರತೀಯತೆಯ ನೈಜ ಅಂತ:ಸತ್ವವಿರುವುದು ಮೇಲು ಸ್ತರದ ಶ್ರೀಮಂತಿಕೆಯಲ್ಲಿ ಅಲ್ಲ. ಗುಡಿಸಲುಗಳ ಜೊಪಡಿಯಲ್ಲಿ ಎಂದು ಹೇಳಿ “ಅತಿಥಿದೇವೋ ಭವ” “ಮಾತಾಪಿತೃ ದೇವೋಭವ” ಎಂಬ ನಾಣ್ಮುಡಿಗೆ “ದೀನ ದಲಿತ ದರಿದ್ರ ನಾರಾಯಣ ದೇವೋ ಭವ” ಎಂಬ ಹೊಸ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದವರು ಸ್ವಾಮಿ ವಿವೇಕಾನಂದರು ದೀನ ದಲಿತ ಬಡವನ ಏಳ್ಗೆಯೇ ನಿಜವಾದ ದೇವರನ್ನು ನಿರಕ್ಷರಕುಕ್ಷಿಗಳ ಸಂಕಷ್ಟದಲ್ಲಿರುವವರ ಸೇವೆ ಮಾಡುತ್ತ ಕಾಣು ಎಂದು ಕಣ್ಣು ತೆರೆಸಿದವರು ಸ್ವಾಮಿ ವಿವೇಕಾನಂದರು ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಆರ್.ಕೆ.ಶ್ರೀನಿವಾಸರವರು ತಿಳಿಸಿದರು.
ಅವರು ಸ್ವಾಮಿವಿವೇಕಾನಂದರ 156ನೇ ಜಯಂತಿ ಹಾಗೂ ರಾಷ್ಟ್ರೀಯ ಯುವದಿನಾಚರಣೆಯನ್ನು ಕುರಿತು ಮಾತನಾಡಿದರು.
ದೇಶದಲ್ಲಿರುವ ಅನೇಕ ಕಂದಚಾರಗಳು ನಿರ್ಮೂಲನೆಗಾಗಿ ಸದಾ ಚಿಂತನೆ ಮಾಡುತ್ತಿದ್ದ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯವಿರುವ ಬಂಡೆಯ ಮೇಲೆ ಕುಳಿತು ಧ್ಯಾನಸಕ್ತರಾಗುತಿದ್ದರು. ಭಾರತದ ಶುಭವೇ ನನ್ನ ಶುಭ ಎಂದು ದೇಶಕ್ಕಾಗಿ ಬದುಕುವ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಿದವರು. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸುತ್ತಿದ್ದು. ಈ ಆಚರಣೆ ಸೂಕ್ತವಾಗಿ ಔಚಿತ್ಯಪೂರ್ಣವಾಗಿ ಕೂಡಿದ್ದು “ಉಕ್ಕಿನ ನರನಾಡಿಯನ್ನ ಕಭ್ಬಿಣದ ಸ್ನಾಯುಗಳನ್ನು ಹೊಂದಿದ ಯುವಕರನ್ನು ಬಯಸಿದ್ದರು.
“Strenth is Life, Weakness is Death” ಎಂದು ಹೇಳಿದ ಅವರು ಶಕ್ತಿಗೆ ಮಹತ್ವಕೊಟ್ಟಿದ್ದರು. ಗೀತೆಯನ್ನು ಓದುವುದಕ್ಕಿಂತ ಮುಂಚೆ ಅಂಕಣಕ್ಕೆ ಹೋಗಿ ಪುಟ್ಬಾಲ್ ಹಾಡಿ ನಂತರ ಗೀತೆಯನ್ನು ಓದಿ ಅವಾಗ ಸಂಪೂರ್ಣವಾಗಿ ಅರ್ಥವಾಗುತ್ತದೆ “ಏಳಿ, ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ” ಎಂದು ದೇಶವನ್ನು ಎಚ್ಚರಿಸಿದ್ದರು.
ಭಾರತ ಬ್ರಿಟೀಷರ ಆಳ್ವಿಕೆಯಲ್ಲಿದ್ದಂತಹ ಸಂದರ್ಭ ಭಾರತದ ಬಗ್ಗೆ ಪಾಶ್ಚಿಮಾತ್ಯ ದೇಶಗಳಿಗೆ ಕೀಳರಿಮೆ ಇದ್ದಾಗ ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆಯನ್ನು ಜಗತ್ತಿಗೆ ಸಾರಿ ಅನೇಕ ನಿರಾಶ್ರಿತರಿಗೆ, ಅನೇಕ ಬೇರೆ ಬೇರೆ ಧರ್ಮಿಯರಿಗೆ ಆಶ್ರಯ ನೀಡಿದ್ದಂತಹ ಅತ್ಯಂತ ಶ್ರೇಷ್ಠ ಧರ್ಮ ನನ್ನ ಹಿಂದೂ ಧರ್ಮ. ಅತ್ಯಂತ ಶ್ರೇಷ್ಠ ದೇಶ ನನ್ನ ಭಾರತ ಎಂದು ಜಗತ್ತಿಗೆ ತಿಳಿಸಿದರು.
ವಿಶ್ವಕ್ಕೆ ಆಧ್ಯಾತ್ಮಿಕತೆಯ ಪರಿಕಲ್ಪನೆಯ ಮಹತ್ವವನ್ನು ಸಾರಿದ್ದು ನನ್ನ ದೇಶ ಎಂದು ಉದ್ಘರಿಸಿದ್ದರು. ತನ್ನ ವಿದ್ವತ್ತಿನಿಂದ ವಿಶ್ವವನ್ನೆ ಜಯಿಸಿ ವಿಶ್ವ ವಿಜೇತರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ಸಂತರಿಗೆ, ಸಾಧಕರಿಗೆ ವಿಖ್ಯಾತರಿಗೆ ಪ್ರೇರಣೆಯಾಗಿದ್ದ ವಿವೇಕಾನಂದರು “ಮಹಾತ್ಮರ ಮಹಾತ್ಮ”ರಾಗಿದ್ದರು ಎಂದು. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಆಚರಣೆಯಲ್ಲಿ ಆರ್.ಕೆ.ಶ್ರೀನಿವಾಸರವರು ದೀರ್ಘವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಶಿವಪ್ರಸಾದ್. ಸಿ.ಎನ್.ರಮೇಶ್, ಸದಾಶಿವಯ್ಯ, ಟಿ.ಎನ್.ರುದ್ರೇಶ್, ವೇದಮೂರ್ತಿ, ಅಕ್ಷಯ ಚೌದರಿ, ರಾಕೇಶ್, ರಕ್ಷಿತ್, ಹಿಮಾನಂದ, ಪುರುಷೋತ್ತಮ, ನವೀನ ಮುಂತಾದವರು ಇದ್ದರು.