ತುಮಕೂರು:
ದೇವರನ್ನು ನಾವು ಎಲ್ಲಿ ನೋಡಿಲ್ಲ ನೋಡಲು ಸಾಧ್ಯವಿಲ್ಲ , ನಾವು ಏನೇ ಮಾಡಿದರೂ ಆ ಕೆಲಸದಲ್ಲಿ ದೇವರನು ಕಾಣಬಹುದು ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್ ಭರತ್ ಕುಮಾರ್ ತಿಳಿಸಿದರು.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ತುಮಕೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಸೇವಾ ಸಮಿತಿ ಹಾಗೂ ಜಿಲ್ಲಾ ಆಸ್ಪತ್ರೆ ತುಮಕೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 156 ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಿಯ ಯುವ ಸಪ್ತಾಹ ಕಾಯಕ್ರಮವನ್ನು ಜಿಲ್ಲಾ ಸತ್ರ ನ್ಯಾಯಾಧೀಶರಾದ ಕೆ.ಎಸ್ ಭರತ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದಶಿ ಬಾಬಾಸಾಹೇಬ್ ಎಲ್. ಜಿನರಾಲ್ಕರ್ ಮಾತನಾಡಿ ರಾಷ್ಟ್ರೀಯ ಯುವ ದಿನವಾಗಿ ಸ್ವಾಮಿ ವಿವೇಕಾನಂದರ ದಿನವನ್ನು ಆಚರಿಸುತ್ತಿದ್ದೇವೆ, ಭಾರತೀಯ ಸಂಸ್ಕೃತಿ ಮತ್ತು ವೇದಾಂತಗಳನ್ನು ಪ್ರಪಂಚಕ್ಕೆ ಸಾರಿದ್ದಾರೆ. ವಿವೇಕಾನಂದರು ಯುವಕರಿಗೆ ಏಳಿ ಎದ್ದೇಳಿ ಎಂದು ಸಂದೇಶ ಸಾರಿದ್ದಾರೆ ಎಲ್ಲಾ ದೇಶಗಳಿಗಿಂತ ನಮ್ಮ ದೇಶದಲ್ಲಿ ಯುವಕರು ಸಂಖ್ಯೆಯಿದ್ದು, ದೇಶದ ಅಭಿವೃದ್ಧಿಯನ್ನು ಇಂದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅಳೆಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ನಾಗಪೂಜಿತ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಡಾ|| ಸಂಜಯ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.