ಬೆಂಗಳೂರು:
ದ್ವಿತೀಯ ಪಿಯುಸಿ 2019ನೇ ಸಾಲಿನ ವಾರ್ಷಿಕ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸೋಮವಾರ ಬಿಡುಗಡೆ ಮಾಡಿದೆ.
ತಾತ್ಕಾಲಿಕ ವೇಳಾ ಪಟ್ಟಿಯ ಪ್ರಕಾರ ಮಾರ್ಚ್ 1 ರಿಂದ ಪರೀಕ್ಷೆ ಆರಂಭವಾಗಲಿದ್ದು, ವೇಳಾಪಟ್ಟಿಯಲ್ಲಿ ತಕರಾರುಗಳಿದ್ದಲ್ಲಿ ಮನವಿ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
2019ರ ಮಾರ್ಚ್ 1- ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಗಣಿತ, ಮಾರ್ಚ್ 2- ಎನ್‌ಎಸ್‌ಕ್ಯೂಎ ಪರೀಕ್ಷೆ, ಮಾರ್ಚ್ 3-ರವಿವಾರದ ರಜೆ, ಮಾರ್ಚ್ 4- ಮಹಾಶಿವರಾತ್ರಿ ರಜೆ, ಮಾರ್ಚ್ 5- ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್.
ಮಾರ್ಚ್ 6- ಲಾಜಿಕ್, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ, ಮಾರ್ಚ್ 7- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ, ಮಾರ್ಚ್ 8- ಉರ್ದು, ಸಂಸ್ಕೃತ, ಮಾರ್ಚ್ 9- ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, ಮಾರ್ಚ್ 10-ರವಿವಾರ ರಜೆ, ಮಾರ್ಚ್ 11- ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ.
ಮಾರ್ಚ್ 12-ಭೂಗೋಳಶಾಸ್ತ್ರ, ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ, ಮಾರ್ಚ್ 13- ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 14- ಅರ್ಥಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 15- ಹಿಂದಿ, ಮಾರ್ಚ್ 16- ಕನ್ನಡ, ಮಾರ್ಚ್ 17- ರವಿವಾರ, ಮಾರ್ಚ್ 18- ಆಂಗ್ಲಭಾಷೆ ಎಂದು ಪ್ರಕಟನೆ ತಿಳಿಸಿದೆ.
ನವೆಂಬರ್ 28ರೊಳಗೆ ತಕರಾರು ಸಲ್ಲಿಸಲು ಅವಕಾಶ ನೀಡಲಾಗಿದೆ. ತಕರಾರು ಪಟ್ಟಿ ಪರಿಶೀಲನೆ ಬಳಿಕ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದೆ.