ಕುಣಿಗಲ್:
ಅಕ್ರಮವಾಗಿ ವಶಪಡಿಸಿಕೊಂಡಿದ್ದ ಸರ್ಕಾರಿ ಭೂಮಿಯನ್ನು ತಹಸೀಲ್ದಾರ್ ಎಸ್ ನಾಗರಾಜ್ ಪೊಲೀಸ್ ಬಂದೂಬಸ್ತ್ ನಲ್ಲಿ ವಶಕ್ಕೆ ಪಡೆದು ದಾರಿ ನಿರ್ಮಿಸಿದರು.
ತಾಲೂಕಿನ ಸೋಮೇದೇವರಪಾಳ್ಯದಲ್ಲಿ ಸರ್ವೆ ನಂಬರ್13 ರಲ್ಲಿ ರೂಢಿ ದಾರಿ ಮತ್ತು ಗೋಮಾಳವನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಪಡಿಸಿಕೊಂಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮತ್ತು ಪೆÇಲೀಸರು ಜಂಟಿ ಕಾರ್ಯಾಚರಣೆ ನಡೆಸಿ ದಾರಿಯನ್ನು ತೆರವು ಮಾಡಿದರು .
ಗೋಮಾಳದಲ್ಲಿ ಇರುವ ಕಲ್ಯಾಣಿ ಮತ್ತು ಅದರ ಸುತ್ತಲಿನ ಪ್ರದೇಶ ನಮಗೆ ಸೇರಿದ್ದು ಎಂದು ನಿಂಗೇಗೌಡ , ಹೇಮ ಸೇರಿದಂತೆ ಕೆಲವರು ಜೆಸಿಪಿಯನ್ನು ತಡೆದು ಪ್ರತಿಭಟಿಸಿದರು , ಇದನ್ನು ಪ್ರಶ್ನಿಸಲು ಹೋಗಿದ್ದ ಲೋಕೇಶ್ ಎಂಬುವರಿಗೆ ಹೇಮ ಎಂಬಾಕೆ ಚಾಕುವಿನಿಂದ ಗಾಯಗೊಳಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದಂತೆ ಸಿಪಿಐ ಅಶೋಕ್ ನೇತೃತ್ವದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗಲಭೆಯನ್ನು ಹತೋಟಿಗೆ ತಂದರು .
ನಿಂಗೇಗೌಡ ನಾವು ಪುರಾತನ ಕಾಲದಿಂದ ಅನುಭವದಲ್ಲಿ ಇದ್ದೇವೆ ಆದ್ದರಿಂದ ಈ ಭಾಗ ನಮ್ಮ ಸ್ವಂತದ್ದು ಎಂದು ತಹಸೀಲ್ದಾರ್ ಹಾಗೂ ಪೆÇಲೀಸರ ಮೇಲೆ ವಾಗ್ವಾದಕ್ಕೆ ಇಳಿದರು.
ಇದ್ಕಕೆ ಉತ್ತರಿಸಿದ ತಹಸೀಲ್ದಾರ್ ಎಸ್ ನಾಗರಾಜ್ ಜಿಲ್ಲಾಧಿಕಾರಿಗಳ ಆದೇಶದಂತೆ ರಸ್ತೆಯನ್ನು ಮಾಡಲು ಅವಕಾಶವಿದೆ ಅದನ್ನು ತಡೆಯಬೇಡಿ ಎಂದು ಮನವಿ ಮಾಡಿದರು , ಸ್ಪಂದಿಸದ ಕಾರಣ ಸರ್ಕಾರಿ ಕೆಲಸಕ್ಕೆ ತೊಂದರೆ ನೀಡುವ ವ್ಯಕ್ತಿಗಳನ್ನು ಬಂಧಿಸುವಂತೆ ಪೆÇಲೀಸರಿಗೆ ಸೂಚಿಸಿದರು .
ಸರ್ಕಾರಿ ಜಮೀನು ನನ್ನದು ಎಂದು ಹೆಳುವ ನಿಂಗೇಗೌಡ ಎಂಬುವರ ಬಳಿ ಯಾವುದೇ ದಾಖಲಾತಿಗಳಿಲ್ಲ ಸರ್ಕಾರಿ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ ಎಂಬುದನ್ನು ಮನಗಂಡ ತಹಸೀಲ್ದಾರ್ ಎಸ್ ನಾಗರಾಜ್ ರಸ್ತೆ ನಿರ್ಮಿಸದೇ ಕದಲುವುದಿಲ್ಲ ಎಂದು ಸ್ಥಳದಲ್ಲಿ ಪೆÇಲೀಸರೊಂದಿಗೆ ಟಿಕಾಣಿ ಹೂಡಿದರು .
ಜೆಸಿಪಿಗೆ ಅಡ್ಡಿ ಪಡಿಸುತ್ತಿದ್ದ ವ್ಯಕ್ತಿಗಳನ್ನು ಪೆÇಲೀಸರ ನೆರವಿನಿಂದ ಹೊರಹಾಕಿ ರಸ್ತೆ ನಿರ್ಮಾಣ ಮಾಡಲಾಯಿತು ಇಷ್ಟಾದರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ನಿಂಗೇಗೌಡ ಎಂಬ ವ್ಯಕ್ತಿ ರಸ್ತೆಯನ್ನು ಮುಚ್ಚುತ್ತಿದ್ದು ಅಲ್ಲಿದ್ದ ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಸರ್ವೆ ನಂ 13 ರ ಜಮೀನು ಮೂಲತಹ ಸರ್ಕಾರಿ ಜಮೀನಾಗಿದ್ದು ಇದರಲ್ಲಿ ಓಡಾಡಲು ರಸ್ತೆ ಅವಶ್ಯಕತೆ ಇರುವುದು ಕಂಡುಬಂದಿರುವುದರಿಂದ ತಹಸೀಲ್ದಾರ್ ಕುದ್ದು ಸ್ಥಳ ಪರಿಶೀಲನೆ ನಡೆಸಿ ನಂತರ ದಾರಿಯನ್ನು ಕುಲ್ಲಾ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಜಿಲ್ಲಾಧಿಕಾರಿಗಳ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಿದ್ದು ಈಸಂಬಂಧ ತಹಸೀಲ್ದಾರ್, ಕಂದಾಯ ನಿರೀಕ್ಷಕರಾದ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಯೊಂದಿಗೆ ಒತ್ತುವರಿ ತೆರವುಗೊಳಿಸಿದರು .
ಈ ಹಿಂದೆ ಒತ್ತುವರಿ ತೆರವುಗೊಳಿಸಲು ಹೋದಾಗ ಹೇಮಾವತಿ , ಎಸ್ ಕೆ ಚಿಕ್ಕಣ್ಣ, ಸಣ್ಣಮ್ಮ , ನರಸಿಂಹಯ್ಯ ಸೇರಿದಂತೆ ಇತರರು ಸರ್ಕಾರಿ ಕೆಲಸಕ್ಕೆ ಅಡೆಚಣೆ ಉಂಟು ಮಾಡಿದ್ದು ಅವರಿಗೆ ತಿಳುವಳಿಕೆ ನೋಟೀಸ್ ನೀಡಿ ಅನಗತ್ಯವಾಗಿ ತೆರವು ಕಾರ್ಯಕ್ಕೆ ಅಡೆಚಣೆ ಮಾಡದಂತೆ ತಿಳಿಸಿದ್ದರೂ ಪುನಃ ಸರ್ಕಾರಿ ಕೆಲಸಕ್ಕೆ ಅಡೆಚಣೆ ಮಾಡಿದ್ದೀರಾ ನಿಮ್ಮ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು .
ಯಾವುದೇ ದಾಖಲಾತಿಗಳು ನಿಮ್ಮ ಬಳಿ ಇಲ್ಲದಿದ್ದರೂ ಅನಗತ್ಯವಾಗಿ ಗೊಂದಲ ಉಂಟುಮಾಡುತ್ತಾ ಇರುವುದು ಸರಿಯಲ್ಲ ಎಂದು ಮನವೊಲಿಸಲು ಪ್ರಯತ್ನಿಸಿದರು ಒಪ್ಪದ ಕಾರಣ ನಿಂಗೇಗೌಡನನ್ನು ಪೆÇಲೀಸರು ಬಂಧಿಸಲು ಮುಂದಾದಾಗ ಸ್ಥಳೀಯರ ಮನವಿ ಮೇರೆಗೆ ವಾಪಸ್ ಬಿಡಲಾಯಿತು .