ತುರುವೇಕೆರೆ:

      ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ ಅಧ್ಯಕ್ಷತೆಯಲ್ಲಿ ಶುಕ್ರವಾರ 2019-20ನೇ ಸಾಲಿನ 11.15.35.000ಕೋಟಿ ಆಯ-ವ್ಯಯವನ್ನು ಮಂಡಿಸಲಾಯಿತು.

      ಪಟ್ಟಣ ಪಂಚಾಯಿತಿ ಸಭಾ ಭವನದಲ್ಲಿ ಬಜೆಟ್ ಸಭೆ ಫ್ರಾರಂಭವಾದ ನಂತರ ನಾಲ್ಕನೇ ಬಾರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್ ಬಜೆಟ್ ಪ್ರತಿ ಹಿಡಿದು ಸಭೆಯಲ್ಲಿ ವಿವರವಾಗಿ ಮಂಡಿಸಿದರು.

      2019-20ನೇ ಸಾಲಿನ ಒಟ್ಟು ನಿರೀಕ್ಷಿತ ಆದಾಯ 11.29.00.585ಕೋಟಿ ರೂಪಾಯಿಗಳಾಗಿದ್ದು, 11.15.35.000ಕೋಟಿ ವಿವಿಧ ಕಾರ್ಯಗಳಿಗೆ ಖರ್ಚುಮಾಡುವ ಯೋಜನೆಯಿದ್ದು, 13.65.585.ಲಕ್ಷರೂಪಾಯಿಗಳು ಉಳಿತಾಯವಾಗಲಿದೆ ಎಂದು ತಿಳಿಸಿದರು.

      ನಂತರ ಆರಂಭಗೊಂಡ ಬಜೆಟ್ ಮೇಲಿನ ಕರ್ಚ-ವೆಚ್ಚದ ಚರ್ಚೆಯಲ್ಲಿ ಶಾಸಕ ಮಸಾಲೆ ಜಯರಾಮ್ ಮಾತನಾಡಿ, ಹಲವು ವರ್ಷಗಳಿಂದ ನೆಲಗುದಿಗೆ ಬಿದ್ದಿರುವ ವಾಣಿಜ್ಯ ಸಂಕೀರ್ಣ ಮುಂದುವರಿದ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಬಜೆಟ್‍ನಲ್ಲಿ 1.90.00.000ರೂಪಾಯಿಗಳು ಮೀಸಲಿಟ್ಟಿರುವುದು ಸಂತಸದ ವಿಚಾರ.  ಕಾಮಗಾರಿ ಪೂರ್ಣಗೊಳಿಸಲು ನಾನು ಸರ್ಕಾರದಿಂದ ಹೆಚ್ಚುವರಿ ಕಾಮಗಾರಿ ಬಿಡುಗಡೆ ಗೊಳಿಸುತ್ತೇನೆ ಎಂದು ಭರವಸೆ ನೀಡಿದರು.

      ಪಟ್ಟಣ ಪಂಚಾಯಿತಿ ಸದಸ್ಯ ವಿಜಯ್‍ಕುಮಾರ್ ಮಾತನಾಡಿ ಪಟ್ಟಣದ ಒಳ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಸರಿಪಡಿಸಿಕೊಡುವ ನಿಟ್ಟಿನಲ್ಲಿ ಗಮನಹರಿಸುವಂತೆ ಪಟ್ಟಣ ಪಂಚಾಯಿತಿ ಎಲ್ಲಾ ಸದಸ್ಯರು ಮುಂದಾಗಬೇಕಿರುವ ಬಗ್ಗೆ ಒಲವು ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಮಸಾಲೆಜಯರಾಮ್ ಮಧ್ಯಪ್ರವೇಶಿಸಿ ಒಳಚರಂಡಿ ಸರಿಪಡಿಸುವ ನಿಟ್ಟಿನಲ್ಲಿ ನನ್ನ ಸಂಪೂರ್ಣ ಸಹಕಾರವಿದ್ದು, ನೀವುಗಳು ನನ್ನ ಜೊತೆ ಕೈಜೋಡಿಸಿದ್ದಾದಲ್ಲಿ ಪೂರ್ಣಗೊಳಿಸಿಕೊಡುವ ಭರವಸೆ ನೀಡಿದರಲ್ಲದೆ ಪಟ್ಟಣ ಪಂಚಾಯಿತಿ ಚುನಾವಣೆ ಸನಿಹದಲ್ಲಿದ್ದು ಒಳ ಚರಂಡಿ ವ್ಯವಸ್ಥೆ ಸರಿಪಡಿಸಿದರೆ ನಿಮಗೆ ಅನುಕೂಲವಾಗಲಿದೆ ಎನ್ನುವ ಸಲಹೆಯನ್ನೂ ನೀಡಿದರು. ಅಲ್ಲದೆ ಪಟ್ಟಣದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗೆ ಇನ್ನೊಂದು ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.

 

(Visited 31 times, 1 visits today)