ತುರುವೇಕೆರೆ:
ಕನ್ನಡ ಬೆಳಸಬೇಕು ಉಳಿಸಬೇಕು ಎನ್ನುವ ಸಂಘಟನೆಗಳಿಗಿಂತ ಬಳಸಿ ಉಳಿಸುವ ಮನಸ್ಸಿನ ಸಂಘಟನೆಗಳ ಅವಶ್ಯಕತೆ ಪ್ರಸ್ಥುತ ದಿನಮಾನಗಳಲ್ಲಿ ಅತಿ ಅವಶ್ಯಕವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಪವಾಡ ಬಯಲು ತಜ್ನ ಹುಲಿಕಲ್ ನಟರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಹಿರಣ್ಣಯ ಬಯಲು ರಂಗಮಂದಿರದ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಸಿ ಮಾತನಾಡಿ ಕನ್ನಡವನ್ನು ಬೆಳೆಸಬೇಡಿ ಬಳಸಿ, ಹಸಿರೇ ಹುಸಿರು ಪೃಕೃತಿಯನ್ನು ಕಾಪಾಡುವ ಹೊಣೆ ನಮ್ಮದು. ಸಾಹಿತ್ಯಾಸಕ್ತರಲ್ಲಿ ಮನಸ್ಸು ಬದಲಾಗುತ್ತಿದೆ ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದು ಒಂದೆಡೆಯಾದರೆ ಸಮ್ಮೇಳನಗಳು ಜಾರ್ತೆಯಾಗಿ ಮಾರ್ಪಾಡಾಗುತ್ತಿರುವುದು ಮೊತ್ತೊಂದೆಡೆಯಾಗಿದೆ, ಸಮ್ಮೇಳನಗಳು ಕನ್ನಡಿಗರ ಮನಸ್ಸನ್ನು ಬೆಸೆಯುವ ನಾಡಹಬ್ಬವಾಗಬೇಕು ಎಂದರು.
ಕೆಲ ಸಮೂಹ ಮಾಧ್ಯಮಗಳು ಜನಪರವಾಗದೆ ಕೇವಲ ಟಿ.ಆರ್.ಪಿ. ಪರವಾಗಿದ್ದು, ಸಮಾಜದಲ್ಲಿ ಒಡಕು ಮೂಡಿಸುವಂತಹ ಹಾಗೂ ಕೌಟುಂಬಿಕ ಸಮಸ್ಯೆಗಳನ್ನು ಬೀದಿಗೆ ತಂದು ಮನೆಯ ಮನಸ್ಸುಗಳ ಮಾನಸಿಕ ಖಿನ್ನತೆಗೆ ಪ್ರೇರಣೆ ನೀಡುತ್ತಿರುವುದರಿಂದ ಮಾನಸಿಕ ರೋಗಗಳು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿವೆ ಎಂದು ಸಮ್ಮೇಳನಾಧ್ಯಕ್ಷ ಪವಾಡ ಬಯಲು ತಜ್ನ, ಹುಲಿಕಲ್ ನಟರಾಜ್ ವಿಷಾದ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯದಲ್ಲಿ ಹಿಡಿ, ಹೊಡಿ, ಕೊಲ್ಲು ಸಂಸ್ಕೃತಿಗಿಂತ ಸಕಾರಾತ್ಮಕ ಚಿಂತನೆ ಹಾಗೂ ವಿಚಾರವಂತಿಕೆಯ ಲೇಖನಿಯ ಸಂಸ್ಕೃತಿ ಬೇಕು, ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷ ಸ್ಥಾನ ಕೇವಲ ಸಾಹಿತ್ಯ ಕ್ಷೇತ್ರದ ದಿಗ್ಗಜರನ್ನಲ್ಲದೆ ಕನ್ನಡಪರ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪ್ರಾಮಾಣಿಕವಾಗಿ ತಮ್ಮ ಜೀವನವನ್ನೇ ಕನ್ನಡ ಭಾಷೆಗಾಗಿ ಮೀಸಲಿಟ್ಟ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಮಹನೀಯರನ್ನು ಇಲ್ಲಿಗೆ ಕರೆತಂದು ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಸ್ಥಾನ ಕಲ್ಪಿಸಿ ಕೊಡುವ ಕೆಲಸ ಅರ್ಥಪೂರ್ಣವಾಗಿದೆ.
ಇಂದು ಯುವ ಜನಾಂಗ ಅತಿಯಾದ ಸಾಮಾಜಿಕ ಜಾಲತಾಣಗಳ ದಾಸ್ಯದ ಸಂಕೋಲೆಯಿಂದ ಮಾನಸಿಕ ಖಿನ್ನತೆ, ಭಯ, ಅತಿಯಾದ ಭ್ರಮೆ, ಆತಂಕ, ಲೋಭ , ಮೋಹಗಳಿಗೆ ಬಲಿಯಾಗಿ ಮಾನಸಿಕವಾಗಿ ಜೀವಂತ ಶವವಾಗಿ ಬದುಕು ಸಾಗಿಸುತ್ತಿದ್ದಾನೆ. ಕನ್ನಡ ಭಾಷೆ ಪುಡಾರಿಗಳ ಭಾಷೆಯಾಗದೆ ಪ್ರಜ್ನಾವಂತರ ಭಾಷೆಯಾಗಬೇಕು ಎಂದರಲ್ಲದೆ ನಾಡು ನುಡಿ ಸಂಸ್ಕೃತಿ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ತಾಲೂಕಿನ ವಿವಿಧ ಕ್ಷೇತ್ರಗಳ ಗಣ್ಯರನ್ನು ನೆನೆದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕ.ಸಾ.ಪ.ತಾಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ ಭವನ ನಿರ್ಮಿಸಲು ಜಾಗ ನೀಡಿದ ತಾಲೂಕು ಪಂಚಾಯಿತಿ ಹಾಗೂ ನಿರ್ಮಾಣಕ್ಕೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸ್ಮರಿಸಿ ತಾಲೂಕಿನ ಜನತೆಗೆ ಧನ್ಯವಾದ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಸಿ ಮಾತನಾಡಿದ ಶಾಸಕ ಮಸಾಲೆಜಯರಾಮ್ ಕನ್ನಡ ಬಾಷೆಯನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು ಆದರೆ ಕಾಪ್ರೋರೆಟ್ ನಗರಗಳಲ್ಲಿ ಗ್ರಾಮೀಣ ಜನತೆ ಉದ್ಯೋಗವಕಾಶಕ್ಕೆಂದು ತೆರಳಿದಾಗ ಆಂಗ್ಲ ಭಾಷೆ ಅವಶ್ಯಕವಾಗಿರುತ್ತದೆ ಹಾಗಾಗಿ ಭಾಷಾಭಿಮಾನ ಎಷ್ಟು ಮುಖ್ಯವೋ ಬದುಕನ್ನು ಕಟ್ಟಿಕೊಡುವ ಭಾಷೆಗಳನ್ನು ಕಲಿಯುವುದು ಅಷ್ಟೇ ಮುಖ್ಯ ತಾಲೂಕು ಕನ್ನಡ ಭವನ ಪ್ರಾರಂಭದಿಂದ ಇಲ್ಲಿಯವರೆವಿಗೂ ನಾನು ಸಹಕರಿಸುತ್ತಾ ಬಂದಿದ್ದೇ. ಅದೇರೀತಿ ಭವನದ ಮುಂದುವರಿದ ಚಟುವಟಿಕೆಗಳಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಸಂಸದ ಮುದ್ದ ಹನುಮೇಗೌಡ ಮಾತನಾಡಿ ಇಂದು ಕನ್ನಡಕ್ಕೆ ಪರಕೀಯ ಭಾಷೆಗಳು ಅವಶ್ಯಕ ಎನ್ನುವಷ್ಟರ ಮಟ್ಟಿಗೆ ಕನ್ನಡದಲ್ಲಿಯೇ ಬೆರತು ಹೋಗಿವೆ, ಅದನ್ನೂ ಮೀರಿ ರೇಡಿಯೋ ಎಫ್.ಎಂ. ಚಾನಲ್‍ಗಳು ತಮ್ಮ ಬಾಯಿಗೆ ಬಂದಂತೆ ಮಾತನಾಡುತ್ತಾ ಬಾಷೆಯನ್ನು ಕಲುಷಿತಗೊಳಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್ ಮಾತನಾಡಿ ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ ಕೇವಲ ಎರಡು ವರ್ಷಗಳಲ್ಲಿ ನಿವೇಶನ ಹಾಗೂ ಭವನ ನಿರ್ಮಿಸಿ ಕಸಾಪ ಅಧ್ಯಕ್ಷ ನಂ.ರಾಜು ಇಚ್ಚಾಶಕ್ತಿ ಮೆರದು ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.
ಕಲ್ಪತರು ಆಶ್ರಮದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂಧರ್ಭದಲ್ಲಿ ಸಾಹಿತಿ ಎಲ್.ಎನ್.ಪ್ರಸಾದ್ ಸಂಪಾದಕತ್ವದಲ್ಲಿ ಮೂಡಿಬಂದ “ಅಮೃತ ಮಹಲ್” ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ಇದಕ್ಕೂ ಮೊದಲು ಬೆಳಗ್ಗೆ ಪಟ್ಟಣದ ಹಿರಣ್ಣಯ ಬಯಲು ರಂಗಮಂದಿರದ ಅವರಣದಲ್ಲಿ ತಹಶೀಲ್ದಾರ್ ನಯೀಮ್ ಉನ್ನೀಸ, ಬಿ.ಇ.ಒ.ಹನುಮನಾಯಕ್ ಕ.ಸಾ.ಪ.ಅಧ್ಯಕ್ಷ ನಂ.ರಾಜು ಧ್ವಜಾರೋಹಣ ನೆರವೇರಿಸಿದರು. ಇದೇ ಸಂಧರ್ಭದಲ್ಲಿ ನೂತನ ಕನ್ನಡ ಭವನವನ್ನು ಶಾಸಕ ಮಸಾಲೆಜಯರಾಮ್ ಲೋಕಾರ್ಪಣೆಗೊಳಿಸಿದರು. ನಂತರ ಸಮ್ಮೇಳನಾಧ್ಯಕ್ಷರನ್ನು ಪಟ್ಟಣದ ಪ್ರವಾಸಿ ಮಂದಿರದಿಂದ ಸಮ್ಮೇಳನದ ಸಭಾಂಗಣದವರೆವಿಗೂ ಮೆರವಣಿಗೆಯ ಮೂಲಕ ಕರೆತರಲಾಯಿತು.
ಸಮಾರಮಭದಲ್ಲಿ ನಿವೃತ್ತ ಐ.ಎ.ಎಸ್. ಆಧಿಕಾರಿ ಎಂ.ಕೆ.ಶಂಕರಲಿಂಗೇಗೌಡ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಜಿ.ಡಿ.ಗಂಗಾಧರ್, ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ತಾ.ಪಂ.ಅಧ್ಯೆಕ್ಷೆ ನಾಗರತ್ನ, ಪ.ಪಂ.ಅಧ್ಯಕ್ಷ ಲಕ್ಮೀನರಸಿಂಹ, ಜಿ.ಪಂ.ಸದಸ್ಯೆ ರೇಣುಕ, ತಾ.ಪಂ.ಸದಸ್ಯರಾದ ನಂಜೇಗೌಡ, ಭೈರಪ್ಪ, ಮಂಜುನಾಥ್, ಮಹಾಲಿಂಗಯ್ಯ, ಡಿ.ಸಿ.ಕುಮಾರ್, ಸ್ವಾಮಿ, ತೀರ್ಥಕುಮಾರಿ, ಕೆಂಪಮ್ಮ, ತೇಜಾವತಿ, ಸುವರ್ಣ, ಕೆಂಪಲಕ್ಮಿ, ಮುಖಂಡರಾದ ಕೊಂಡಜ್ಜಿ ವಿಒಶ್ವನಾಥ್, ರಮೇಶ್‍ಗೌಡ, ಸುಬೃಹ್ಮಣ್ಯ ಶ್ರೀಕಂಠೆಗೌಡ, ಗಂಗಣ್ಣ, ವಿ.ಟಿ.ವೆಂಕಟರಾಮ್, ಶಂಕರೇಗೌಡ, ಪ್ರಹ್ಲಾದ್, ವಿ.ಬಿ.ಸುರೇಶ್ , ಚಿದಾನಂದ ಇತರರು ಇದ್ದರು.