ತುರುವೇಕೆರೆ :
‘ಧರ್ಮ ಮತ್ತು ರಾಜಕಾರಣಗಳು ಪರಸ್ಪರ ಕೈಜೋಡಿಸಿ ಉಂಟು ಮಾಡುತ್ತಿರುವ ಸಮಕಾಲೀನ ಭಾರತದ ತಲ್ಲಣ ಮತ್ತು ಸಂಘರ್ಷಮಯ ಸನ್ನಿವೇಶ ಕವಿ, ಕಲಾವಿದ ಮತ್ತು ಚಿಂತಕನಿಗೆ ತೀವ್ರ ಸ್ವರೂಪದ ಬೆದರಿಕೆ ಹಾಗು ಆತಂಕ ಸೃಷ್ಟಿಸಿದೆ. ಕವಿಯಾದವನು ಇದನ್ನು ಸವಾಲಾಗಿ ಸ್ವೀಕರಿಸಿ ಮಹತ್ವಕಾಂಕ್ಷೆಯಿಂದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕಿದೆ’ ಎಂದು ಸಾಹಿತಿ ಕೆ.ಪಿ.ನಟರಾಟ್ ಯುವ ಕವಿಗಳಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದದಲ್ಲಿ ಜರುಗಿದ ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ತಾಳಕೆರೆಸುಬ್ರಹ್ಮಣ್ಯಂ ವೇದಿಕೆಯಲ್ಲಿ ಎರಡನಢ ದಿನ ನಡೆದ ನನ್ನ ಕವಿತೆ ನನ್ನದು ಎಂಬ ಕವಿ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಫೇಸ್ ಬುಕ್ನಂತಹ ಡಿಜಿಟಲ್ ಸ್ವರೂಪದ ಸಾಮಾಜಿಕ ಜಾಲ ತಾಣಗಳ ಮಾದ್ಯಮಗಳು ಬರೆಯುವ, ಚಿಂತಿಸುವ ಅನುಸಂಧಾನ ಮಾಡುವ ಜ್ಞಾನ ವಿನಿಮಯದ ಅನಂತ ಸಾದ್ಯತೆಗಳನ್ನು ನಮ್ಮೆದುರಿಟ್ಟಿದ್ದು ಮುದ್ರಣ ಮತು ದೃಶ್ಯ ಮಾದ್ಯಮಗಳ ಪಟ್ಟಭದ್ರ ಚಿಂತನೆಯ ಕೇಂದ್ರಗಳಿಂದ ದೂರ ಉಳಿದು ಸ್ವತಂತ್ರ ಚಿಂತನೆಯನ್ನು ಕಟ್ಟಬಲ್ಲ ಪ್ರಜಾತಾಂತ್ರಿಕ ವೇದಿಕೆಯನ್ನು ಕಲ್ಪಿಸಿದೆ. ಇದು ನಮ್ಮ ಸಂವಿಧಾನವು ಎತ್ತಿ ಹಿಡಿದಿರುವ ವ್ಯಕ್ತಿ ಸ್ವಾತಂತ್ರ್ಯದ ಅನನ್ಯತೆ.
ದೇಶದಲ್ಲಿ ಸಮಷ್ಟಿ ಶಿಕ್ಷಣಕ್ಕೆ ಸಾಮಾಜಿಕ ಜಾಲತಾಣಗಳು ಹೊಸ ಭರವಸೆಯಂತೆ ಒದಗಿ ಬಂದಿವೆ. ಇದನ್ನು ಕವಿ, ಚಿಂತಕ ಅರಿಯಬೇಕಿದೆ. ಕಲಾವಿದನೊಬ್ಬ ಹೇಗೆ ಪ್ರಭುತ್ವದ ವಿರುದ್ದ ಹೇಗೆ ಬಂಡೇಳಬಲ್ಲ ಮತ್ತು ಪ್ರಭುತ್ವವನ್ನು ಪ್ರಶ್ನಿಸಬಲ್ಲ ಎಂಬುದಕ್ಕೆ ಉದಾಹರಣೆಯಾಗಿ 16ನೆ ಶತಮಾನದ ಲಕ್ಷ್ಮೀಷನ ಪದ್ಯವೊಂದನ್ನು ಅವಲೋಕಿಸಿದಾಗ “ಲಕ್ಷ್ಮಣ ತನ್ನ ಅಣ್ಣ ರಾಮನ ಅಣತಿಯಂತೆ ಸೀತೆಯನ್ನು ಕಾಡಿಗಟ್ಟುವ ಸನ್ನಿವೇಶವನ್ನು ಕವಿ ವರ್ಣಿಸುತ್ತಾ ಲಕ್ಷ್ಮಣ ಅತಿ ಜರೂರಾಗಿ ರಥವನ್ನು ಅಂಧಕಾರದ ದಿಕ್ಕಿಗೆ ವಾಯು ವೇಗದಲ್ಲಿ ಚಲಿಸಿದ”. ಹೀಗೆ
ಸೀತೆಗೆ ರಾಮಪರಿತ್ಯಾಗದ ಸಂಗತಿ ತಿಳಿದಿರಕ್ಕಿಲ್ಲ. ಆದರೆ ಅಯೋದ್ಯೆಯ ಜನಕ್ಕೆ ಈ ವಿಚಾರ ಗೊತ್ತಿತ್ತೆಂದು ಕವಿ ಬಹಳ ಸೂಚ್ಯವಾಗಿ ಸೀತೆಯ ಸಂತಾಪದ ಬಗ್ಗೆ ತಳಮಳಗೊಂಡು ಕುದಿಯುತ್ತಾನೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿ ರಾಮನ ಈ ಕೃತ್ಯ ಅಥವಾ ರಾಮ ಎಂಬ ಪ್ರಭುತ್ವದ ವಿರುದ್ದ ಲಕ್ಷ್ಮೀಷನ ಪ್ರತಿಭಟನೆಯು ಕಾವ್ಯದಲ್ಲಿ ದ್ವನಿತ ದಾಖಲೆಯಾಗಿದೆ. ಇಂತಹ ಪ್ರತಿಭಟನೆಗಳು ವರ್ತಮಾನದ ತಲ್ಲಣಗಳ ನಡುವೆ ಬರೆಯುತ್ತಿರುವ ಕವಿ ಧ್ಯಾನಸ್ಥಿತಿಯಲ್ಲಿ ಗ್ರಹಿಸಿ ಕಾವ್ಯಕ್ಕಿಳಿಸಬೇಕು ಎಂದು ವಿಶ್ಷೇಷಿಸಿದರು.
ಸತ್ಯ ಮತ್ತು ನ್ಯಾಯ ವಿತರಣೆಯಲ್ಲಿ ಜಾತಿ, ಮತ ಲಿಂಗ ಪಂಥ ರಾಷ್ಟ್ರೀಯತೆಗಳಂತಹ ಸ್ವಾಪಿತ ಪೂರ್ವಾಗ್ರಹಗಳು ಅಡ್ಡಬರಬಾರದು ಹಾಗೇನಾದರು ಆದಲ್ಲಿ ಆತ ಕಲಿತ ವಿದ್ಯೆ ವ್ಯರ್ಥ ಜೊತೆಗೆ ಆತ ಸುಶಿಕ್ಷತ ಪ್ರಜೆಯಾಗಿರಲು ಸಾದ್ಯವಿಲ್ಲ. ಇವನು ಮನುಕುಲಕ್ಕೆ ಹೊರೆ ಎನ್ನುವ ಆಪ್ರಿಕನ್ ಚಿಂತಕನ ಮಾತು ನಮ್ಮ ದೇಶದ ಮನಸ್ಥಿತಿಯನ್ನು ಸರಿಯಾಗಿ ಹೇಳುತ್ತದೆ. ಕವಿ ಇದನ್ನು ಮೀರಿ ಬರೆದಾಗ ಆತನ ಕಾವ್ಯ ಆದರ್ಶವಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
‘ಇದೇ ವೇಳೆ ಯುವ ಕವಿಗಳಾದ ತ್ರಿಶೂಲಮೂರ್ತಿ, ಅನಿಲ್ಕುಮಾರ್ ಮಾಳೋದೆ, ವಿರೂಪಾಕ,್ಷ ಪಾಂಡುರಂಗಯ್ಯ ಎ.ಹೊಸಹಳ್ಳಿ, ಗಂಗಾಧರ್ ಅಮ್ಮಸಂದ್ರ, ಬಾಣಸಂದ್ರ ರವಿ, ರೂಪಕಲ್ಕೆರೆ ಸೇರಿದಂತೆ ಹಲವು ಕವಿಗಳು ತಮ್ಮ ಕವಿತೆ ವಾಚನ ಮಾಡಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಹುಲಿಕಲ್ನಟರಾಜ್, ಶಾಸಕ ಮಸಾಲೆಜಯರಾಮ್ ಇದ್ದರು. ಕವಿ ಗೋಷ್ಟಿಯಲ್ಲಿ ಬೋರಪ್ಪ ಸ್ವಾಗತಿಸಿ, ಶ್ರೀನಿವಾಸ್ ನಿರೂಪಿಸಿ, ರಾಜಶೇಖರ್ ವಂದಿಸಿದರು.